ದೇಶ

ತಮಿಳುನಾಡಿನಲ್ಲಿ ಭಾರಿ ಮಳೆ: ಮುಂದಿನ ಐದು ದಿನ ಮಳೆ ಸಾಧ್ಯತೆ, ಕೆಲ ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ

Ramyashree GN

ಚೆನ್ನೈ: ಚೆನ್ನೈ, ತಿರುವಳ್ಳೂರು ಚೆಂಗಲ್ಪಟ್ಟು ಮತ್ತು ಕಾಂಚೀಪುರಂ ಜಿಲ್ಲೆಗಳಲ್ಲಿ ನಿರಂತರ ಮಳೆಯಿಂದಾಗಿ ಇಂದು ಶಾಲೆಗಳಿಗೆ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.

ಭಾನುವಾರ ಬೆಳಿಗ್ಗೆಯಿಂದಲೂ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುತ್ತಿದ್ದು, ಸೋಮವಾರ ಚೆನ್ನೈ ಮತ್ತು ಅದರ ನೆರೆಯ ಜಿಲ್ಲೆಗಳಲ್ಲಿ ಮುಂದುವರಿದಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಪ್ರಕಾರ, ರಾಜ್ಯದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆ ಬೀಳಲಿದೆ. ಮೊದಲ ಎರಡು ದಿನಗಳಲ್ಲಿ ವ್ಯಾಪಕ ಮಳೆಯಾಗಲಿದ್ದರೆ, ಇನ್ನುಳಿದ ಮುಂದಿನ ಮೂರು ದಿನಗಳ ಕಾಲ ರಾಜ್ಯದ ಪ್ರತ್ಯೇಕ ಭಾಗಗಳಲ್ಲಿ ಮಳೆಯಾಗಲಿದೆ. ಮುಂದಿನ ಎರಡು ದಿನಗಳ ಕಾಲ ಚೆನ್ನೈನಲ್ಲಿ ಗುಡುಗು ಸಹಿತ ಮಳೆ ಬೀಳಲಿದೆ ಎಂದು ಸೂಚಿಸಿದೆ.

ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಪಶ್ಚಿಮ ಭಾಗದ ಮೇಲಿನ ವಾಯು ಸೈಕ್ಲೋನಿಕ್ ಪರಿಚಲನೆಯ ಪರಸ್ಪರ ಕ್ರಿಯೆಯಿಂದಾಗಿ ಮಳೆಯಾಗುತ್ತಿದೆ. ತಮಿಳುನಾಡಿನ ಹಲವಡೆ ಸುರಿಯುತ್ತಿರುವ ಮಳೆಯು ಬಿರು ಬೇಸಿಗೆಯಿಂದ ಕಂಗೆಟ್ಟಿದ ಜನತೆಗೆ ತಂಪೆರೆದಿದೆ. ವಿಶೇಷವಾಗಿ ಚೆನ್ನೈನಲ್ಲಿ, ಭೀಕರ ಬೇಸಿಗೆಯಿಂದ ವಿರಾಮ ನೀಡಿದೆ.

ಟಿಎನ್ಐಇಯೊಂದಿಗೆ ಮಾತನಾಡಿದ ಚೆನ್ನೈನ ಏರಿಯಾ ಸೈಕ್ಲೋನ್ ವಾರ್ನಿಂಗ್ ಸೆಂಟರ್‌ನ ನಿರ್ದೇಶಕ ಪಿ. ಸೆಂತಮರೈ ಕಣ್ಣನ್, ಚಂಡಮಾರುತದ ಈಶಾನ್ಯ ಚಲನೆಯು ಗಾಳಿಯ ಮಾದರಿಯಲ್ಲಿ ಬದಲಾವಣೆಗಳನ್ನು ಉಂಟುಮಾಡಿದ ನಂತರ ಕಳೆದ ಕೆಲವು ದಿನಗಳಲ್ಲಿ ತಾಪಮಾನವು ವಿಶೇಷವಾಗಿ ಹೆಚ್ಚಾಗಿದೆ. ಚಂಡಮಾರುತವು ಹಾದುಹೋಗಿರುವುದರಿಂದ, ಗಾಳಿಯ ಹರಿವು ಸಹಜ ಸ್ಥಿತಿಗೆ ಮರಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.

'ಇನ್ಮುಂದೆ ಗಾಳಿಯ ಹರಿವು ಸಾಮಾನ್ಯವಾಗಿದ್ದು, ಮಳೆಯ ಚಟುವಟಿಕೆ ಆರಂಭವಾಗಿರುವುದರಿಂದ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ಹರಡುವ ಸಾಧ್ಯತೆ ಇಲ್ಲ. ಕರೂರ್ ಮತ್ತು ಪಾಲಯಂಕೊಟ್ಟೈನಂತಹ ಪ್ರತ್ಯೇಕ ಸ್ಥಳಗಳು ಸಾಮಾನ್ಯ ತಾಪಮಾನಕ್ಕಿಂತ ಸ್ವಲ್ಪ ಹೆಚ್ಚು ತಾಪಮಾನವನ್ನು ಅನುಭವಿಸಬಹುದು' ಎಂದು ಸೆಂತಮರೈ ಕಣ್ಣನ್ ಹೇಳಿದರು.

SCROLL FOR NEXT