ಸಾಂದರ್ಭಿಕ ಚಿತ್ರ 
ದೇಶ

ಅಪ್ರಾಪ್ತೆಯ ಮೇಲೆ ಅತ್ಯಾಚಾರ: ಅಪರಾಧಿಗೆ 135 ವರ್ಷ ಜೈಲು ಶಿಕ್ಷೆ!

ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೇರಳ ಕೋರ್ಟ್ 135 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ತಿರುವನಂತಪುರಂ: ಅಪ್ರಾಪ್ತೆಯ ಮೇಲೆ ಅತ್ಯಾಚಾರವೆಸಗಿದ್ದ ಅಪರಾಧಿಗೆ ಕೇರಳ ಕೋರ್ಟ್ 135 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. 

ಈ ಅಪರಾಧಿ ತನ್ನ ಸೋದರ ಸಂಬಂಧಿಯ ಮೇಲೆ 2 ವರ್ಷಗಳ ಹಿಂದೆ ಅತ್ಯಾಚಾರವೆಸಗಿದ್ದ.  ಫಾಸ್ಟ್ ಟ್ರ್ಯಾಕ್ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಜಿ ಕುಮಾರ್ ತೀರ್ಪು ಪ್ರಕಟಿಸಿದ್ದು, ಪೋಕ್ಸೋ ಕಾಯ್ದೆ, ಐಪಿಸಿ, ಐಟಿ ಕಾಯ್ದೆ, ಬಾಲಾಪರಾಧಿ ನ್ಯಾಯಾಂಗ ಕಾಯ್ದೆ ಸೇರಿದಂತೆ ಹಲವು ಕಾಯ್ದೆಗಳ ಅಡಿಯಲ್ಲಿ ಅಪರಾಧಿಗೆ 135 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಿದ್ದಾರೆ.

ಈಗ ಆತ ಜೈಲಿನಲ್ಲೆ ಇರುವುದರಿಂದ ಹಾಗೂ ಆ ಪೈಕಿ ಗರಿಷ್ಠವಾದ್ದು 20 ವರ್ಷವಾಗಿದ್ದರಿಂದ ಅಪರಾಧಿ 20 ವರ್ಷಗಳ ಕಾಲ ಜೈಲಿನಲ್ಲಿರಲಿದ್ದಾನೆ. 

ಅಪರಾಧಿಗೆ 5.1 ಲಕ್ಷ ರೂಪಾಯಿ ದಂಡ ವಿಧಿಸಿದ್ದು, ಸಂತ್ರಸ್ತೆಗೆ 4 ಲಕ್ಷ ರೂಪಾಯಿ ಪರಿಹಾರ ನೀಡಬೇಕು ಎಂದು ಕೋರ್ಟ್ ಸೂಚಿಸಿದೆ. ಪ್ರಾಸಿಕ್ಯೂಷನ್ ಪ್ರಕಾರ, ಅಪರಾಧಿ ಸಂತ್ರಸ್ತೆಯ ತಂದೆಯ ಹಿರಿಯ ಸಹೋದರನ ಮಗನಾಗಿದ್ದು, ಅವಳನ್ನು ತನ್ನ ಶಾಲೆಗೆ ಕರೆದೊಯ್ದು ತನ್ನ ತಾಯಿಯ ಅಜ್ಜಿಯ ಮನೆಗೆ ಮರಳಿ ಕರೆತರುತ್ತಿದ್ದನು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್