ದೇಶ

ಡಿಆರ್ ಡಿಒ ಬೇಹುಗಾರಿಕೆ ಪ್ರಕರಣ: ಮಹಿಳಾ ಪಾಕ್ ಏಜೆಂಟ್ ನ್ನು ಆರೋಪಿಯನ್ನಾಗಿಸಿದ ಎಟಿಎಸ್

Srinivas Rao BV

ನವದೆಹಲಿ: ಡಿಆರ್ ಡಿಒ ಬೇಹುಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ದಳ ಮಹಿಳಾ ಪಾಕ್ ಏಜೆಂಟ್ ಳನ್ನು ಆರೋಪಿಯನ್ನಾಗಿಸಿದೆ. 

ಈ ಪಾಕಿಸ್ತಾನ ಏಜೆಂಟ್ ಡಿಆರ್ ಡಿಒ ವಿಜ್ಞಾನಿ ಪ್ರದೀಪ್ ಕುರುಲ್ಕರ್ ಅವರನ್ನು ಹನಿ ಟ್ರ್ಯಾಪ್ ಮಾಡಿದ್ದು, ಈಕೆಯನ್ನು ಪ್ರಕರಣದ ಸಹ ಆರೋಪಿಯನ್ನಾಗಿ ಮಾಡಲಾಗಿದೆ.

ಕುರುಲ್ಕರ್ ರಕ್ಷಣಾ ಸಂಶೋಧನೆ ಹಾಗೂ ಡಿಆರ್ ಡಿಒ ನ ಪ್ರಯೋಗಾಲಯಗಳ ಪೈಕಿ ಒಂದರಲ್ಲಿ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಪಾಕ್ ಮಹಿಳೆಯೊಬ್ಬರಿಗೆ ಗೌಪ್ಯ ಮಾಹಿತಿ ಸೋರಿಕೆ ಆರೋಪದಡಿ ಇವರನ್ನು ಮೇ.03 ರಂದು ಎಟಿಎಸ್ ಬಂಧನಕ್ಕೊಳಪಡಿಸಿತ್ತು.
 
ಪಾಕ್ ಮಹಿಳೆ ಜಾರಾ ದಾಸ್‌ಗುಪ್ತಾ ಎಂಬ ಹೆಸರಿನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದಳು ಮತ್ತು ಕುರುಲ್ಕರ್ ಜೊತೆ ಸಂಪರ್ಕದಲ್ಲಿದ್ದಳು ಎಂದು ಮೂಲಗಳು ತಿಳಿಸಿವೆ. ಏಜೆಂಟ್‌ನ ಐಪಿ ವಿಳಾಸ ಪಾಕಿಸ್ತಾನದಲ್ಲಿ ಪತ್ತೆಯಾದ ನಂತರ ಎಟಿಎಸ್ ಮೊದಲ ಮಾಹಿತಿ ವರದಿಗೆ (ಎಫ್‌ಐಆರ್) “ಜಾರಾ ದಾಸ್‌ಗುಪ್ತಾ” ಎಂಬ ಹೆಸರನ್ನು ಸೇರಿಸಿದೆ ಎಂದು ಮೂಲಗಳು ತಿಳಿಸಿವೆ.

SCROLL FOR NEXT