ದೇಶ

ಜಿತನ್ ರಾಮ್ ಮಾಂಝಿ ನೇತೃತ್ವದ ಹಿಂದುಸ್ಥಾನಿ ಅವಾಮ್ ಮೋರ್ಚಾ ಎನ್ ಡಿಎ ಸೇರ್ಪಡೆ

Srinivas Rao BV

ನವದೆಹಲಿ: ಮಹಾ ಮೈತ್ರಿಕೂಟಕ್ಕೆ ನೀಡಿದ್ದ ಬೆಂಬಲವನ್ನು ವಾಪಸ್ ಪಡೆದ ಎರಡು ದಿನಗಳಲ್ಲಿ ಬಿಹಾರದ ಮಾಜಿ ಸಿಎಂ ಜಿತನ್ ರಾಮ್ ಮಾಂಝಿ ನೇತೃತ್ವದ ಹೆಚ್ಎಎಂ (ಎಸ್) ಎನ್ ಡಿಎ ಗೆ ಸೇರ್ಪಡೆಗೊಂಡಿದೆ. 

ಪಕ್ಷದ ಮುಖ್ಯಸ್ಥ ಸಂತೋಷ್ ಕುಮಾರ್ ಸುಮನ್ ಎನ್ ಡಿಎ ಗೆ ಸೇರ್ಪಡೆಯಾಗುವುದನ್ನು ಘೋಷಿಸಿದ್ದಾರೆ. 2024 ರ ಲೋಕಸಭಾ ಚುನಾವಣೆ ಹಾಗೂ 2025 ರ ಬಿಹಾರ ವಿಧಾನಸಭಾ ಚುನಾವಣೆಗಳನ್ನು ಎನ್ ಡಿಎ ಮೈತ್ರಿ ಅಡಿಯಲ್ಲಿ ಎದುರಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. 

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಹೆಚ್ಎಎಂ ಸ್ಥಾಪಕ ಮಾಂಝಿ ಹಾಗೂ ಅವರ ಪುತ್ರ, ಮಾಜಿ ಸಚಿವ ಸಂತೋಷ್ ಕುಮಾರ್ ಸುಮನ್ ಭೇಟಿ ಮಾಡಿದ ಬೆನ್ನಲ್ಲೇ ಹೆಚ್ಎಎಂ ಈ ನಿರ್ಧಾರ ಪ್ರಕಟಿಸಿದೆ. 

ಹೆಚ್ಎಎಂ ನ್ನು ಜೆಡಿಯುನೊಂದಿಗೆ ವಿಲೀನಗೊಳಿಸಲು ನಿತೀಶ್ ಒತ್ತಡ ಹೇರಿದ್ದಕ್ಕೆ ಸುಮನ್ ಜೂನ್ 13 ರಂದು ನಿತೀಶ್ ಕುಮಾರ್ ಸಂಪುಟಕ್ಕೆ ರಾಜೀನಾಮೆ ನೀಡಿದ್ದರು. ಸುಮನ್ ನಿತೀಶ್ ಕುಮಾರ್ ಸಂಪುಟದಲ್ಲಿ ಎಸ್‌ಟಿ/ಎಸ್‌ಟಿ ಕಲ್ಯಾಣ ಇಲಾಖೆ ಸಚಿವರಾಗಿದ್ದರು. ನಂತರ ಆ ಸ್ಥಾನವನ್ನು ಜೆಡಿಯು ಶಾಸಕ ರಂತೇಶ್ವರ್ ಸದಾ ಅವರಿಗೆ ನೀಡಲಾಗಿದೆ. ಬಿಹಾರ ವಿಧಾನಸಭೆಯಲ್ಲಿ ಹೆಚ್ಎಎಂ 4 ಶಾಸಕರನ್ನು ಹೊಂದಿದೆ.
 

SCROLL FOR NEXT