ದೇಶ

ತುರ್ತು ಪರಿಸ್ಥಿತಿಯ ಕರಾಳ ದಿನಗಳು ನಮ್ಮ ಇತಿಹಾಸದಲ್ಲಿ ಮರೆಯಲಾಗದ ದಿನಗಳು: ಪ್ರಧಾನಿ ಮೋದಿ

Ramyashree GN

ನವದೆಹಲಿ: ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಎಲ್ಲ ಧೈರ್ಯಶಾಲಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಭಾನುವಾರ ನಮನ ಸಲ್ಲಿಸಿದರು ಮತ್ತು ಆ 'ಕರಾಳ ದಿನಗಳು' ನಮ್ಮ ಇತಿಹಾಸದಲ್ಲಿ ಮರೆಯಲಾಗದ ಅವಧಿಯಾಗಿ ಉಳಿದಿವೆ. ತುರ್ತು ಪರಿಸ್ಥಿತಿಯು ಭಾರತದ ಸಂವಿಧಾನವು ಆಚರಿಸುವ ಮೌಲ್ಯಗಳಿಗೆ ಸಂಪೂರ್ಣವಾಗಿ ವಿರುದ್ಧವಾಗಿದೆ ಎಂದರು.

ಈ ದಿನದಂದು 1975 ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರವು ದೇಶದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿತು.

'ತುರ್ತು ಪರಿಸ್ಥಿತಿಯನ್ನು ವಿರೋಧಿಸಿದ ಮತ್ತು ನಮ್ಮ ಪ್ರಜಾಪ್ರಭುತ್ವದ ಮನೋಭಾವವನ್ನು ಬಲಪಡಿಸಲು ಶ್ರಮಿಸಿದ ಎಲ್ಲ ಧೈರ್ಯಶಾಲಿ ಜನರಿಗೆ ನಾನು ಗೌರವ ಸಲ್ಲಿಸುತ್ತೇನೆ' ಎಂದು ಸದ್ಯ ಈಜಿಪ್ಟ್‌ಗೆ ಭೇಟಿ ನೀಡಿರುವ ಮೋದಿ ಟ್ವೀಟ್ ಮಾಡಿದ್ದಾರೆ.

'ತುರ್ತು ಪರಿಸ್ಥಿತಿಯ ಕರಾಳ ದಿನಗಳು ನಮ್ಮ ಇತಿಹಾಸದಲ್ಲಿ ಮರೆಯಲಾಗದಂತ ದಿನಗಳಾಗಿ ಉಳಿದಿವೆ. ಇದು ನಮ್ಮ ಸಂವಿಧಾನವು ಆಚರಿಸುವ ಮೌಲ್ಯಗಳಿಗೆ ಸಂಪೂರ್ಣ ವಿರುದ್ಧವಾಗಿದೆ' ಎಂದು ಪ್ರಧಾನಿ ಹೇಳಿದರು.

ಕಳೆದ ವಾರ, ತಮ್ಮ ಮಾಸಿಕ ಮನ್ ಕಿ ಬಾತ್ ರೇಡಿಯೊ ಕಾರ್ಯಕ್ರಮದಲ್ಲಿಯೂ ಪ್ರಧಾನಿ ಮೋದಿ, ತುರ್ತು ಪರಿಸ್ಥಿತಿಯನ್ನು ಭಾರತದ ಇತಿಹಾಸದಲ್ಲಿ 'ಕರಾಳ ಅವಧಿ' ಎಂದು ಬಣ್ಣಿಸಿದ್ದರು.

'ಆ ಸಮಯದಲ್ಲಿ ಪ್ರಜಾಪ್ರಭುತ್ವವನ್ನು ಬೆಂಬಲಿಸಿದವರಿಗೆ ಚಿತ್ರಹಿಂಸೆ ನೀಡಲಾಯಿತು ಮತ್ತು ದೇಶದ ಸ್ವಾತಂತ್ರ್ಯಕ್ಕೆ ಅಪಾಯ ಉಂಟುಮಾಡುವ ಇಂತಹ ಅಪರಾಧಗಳತ್ತ ಕಣ್ಣು ಹಾಯಿಸಿದರೆ ಯುವ ಪೀಳಿಗೆಗೆ ಪ್ರಜಾಪ್ರಭುತ್ವದ ಅರ್ಥ ಮತ್ತು ಮಹತ್ವವನ್ನು ಅರ್ಥಮಾಡಿಕೊಳ್ಳಲು ಸುಲಭವಾಗುತ್ತದೆ' ಎಂದು ಅವರು ಹೇಳಿದ್ದರು.

SCROLL FOR NEXT