ದೇಶ

ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿರುವ ಮಣಿಪುರ: ಗುಂಪನ್ನು ಚದುರಿಸಲು ಅಶ್ರುವಾಯು ಪ್ರಯೋಗ- ವಿಡಿಯೋ

Nagaraja AB

ಇಂಫಾಲ್: ಮಣಿಪುರ ಜನಾಂಗೀಯ ಹಿಂಸಾಚಾರದಲ್ಲಿ ಹೊತ್ತಿ ಉರಿಯುತ್ತಿದೆ. ಇಂದು ನಡೆದ ಗುಂಡಿನ ದಾಳಿಯಲ್ಲಿ ಒಬ್ಬರು ಸಾವನ್ನಪ್ಪಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಇಂಫಾಲ್ ಪಶ್ಚಿಮ ಜಿಲ್ಲೆಯಲ್ಲಿ  ಶಸ್ತ್ರಸಜ್ಜಿತ ದುಷ್ಕರ್ಮಿಗಳು ಗ್ರಾಮಸ್ಥರ ಮೇಲೆ ಗುಂಡು ಹಾರಿಸಿದ ನಂತರ ಒಬ್ಬರು ಸಾವನ್ನಪ್ಪಿದ್ದಾರೆ ಮತ್ತು ಇಬ್ಬರು ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಜನಾಂಗೀಯ ಕಲಹದಿಂದ ಸ್ಥಳಾಂತರಗೊಂಡ ಜನರನ್ನು ಪರಿಹಾರ ಶಿಬಿರಗಳಲ್ಲಿ ಭೇಟಿ ಮಾಡಲು ಚುರಾಚಂದ್‌ಪುರಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಬೆಂಗಾವಲು ವಾಹನದ ಮೇಲೆ ದಾಳಿ ಭೀತಿಯಿಂದ ಪೊಲೀಸರು ಬಿಷ್ಣುಪುರದಲ್ಲಿ ತಡೆದಿದ್ದಾರೆ. ತದನಂತರ ರಾಜ್ಯಸರ್ಕಾರದ ಹೆಲಿಕಾಪ್ಟರ್ ನಲ್ಲಿ ಚುರಚಂದಪುರಕ್ಕೆ ರಾಹುಲ್ ಗಾಂಧಿ ತೆರಳಿದ್ದಾರೆ. ಈ ಮಧ್ಯೆ ಇಂಫಾಲದಲ್ಲಿರುವ ಬಿಜೆಪಿಯ ಪ್ರಾದೇಶಿಕ ಕಚೇರಿ ಬಳಿ ನೆರೆದಿದ್ದ ಗುಂಪನ್ನು  ಚದುರಿಸಲು ಪೊಲೀಸರು ಹಲವು ಸುತ್ತಿನ ಅಶ್ರುವಾಯು ಸಿಡಿಸಿದ್ದಾರೆ. 

ಪರಿಶಿಷ್ಟ ಪಂಗಡ ಸ್ಥಾನಮಾನಕ್ಕಾಗಿ ಮೈತೇಯಿ ಸಮುದಾಯದ ಬೇಡಿಕೆಯನ್ನು ಪ್ರತಿಭಟಿಸಲು ಮೇ 3 ರಂದು ಮೆರವಣಿಗೆ ಆಯೋಜಿಸಿದ ನಂತರ ಮಣಿಪುರದಲ್ಲಿ  ಘರ್ಷಣೆಗಳು ಆರಂಭವಾದವು. ಮೈತೇಯಿ ಸಮುದಾಯ ಮತ್ತು ಬೆಟ್ಟಗಳಲ್ಲಿ ನೆಲೆಸಿರುವ ಕುಕಿ ಬುಡಕಟ್ಟು ಜನಾಂಗದವರ ನಡುವಿನ ಘರ್ಷಣೆಯಲ್ಲಿ 100 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

SCROLL FOR NEXT