ದೇಶ

ಉತ್ತರ ಪ್ರದೇಶ: ಅತೀಕ್ ಜಮೀನಿನಲ್ಲಿ ಫ್ಲಾಟ್ ನಿರ್ಮಿಸಿ ಬಡವರಿಗೆ ಹಸ್ತಾಂತರಿಸಿದ ಸಿಎಂ ಯೋಗಿ ಆದಿತ್ಯನಾಥ್

Nagaraja AB

ಪ್ರಯಾಗ್ ರಾಜ್:  ಇತ್ತೀಚಿಗೆ ಹತ್ಯೆಯಾದ ದರೋಡೆಕೋರ- ರಾಜಕಾರಣಿ ಅತೀಕ್ ಅಹ್ಮದ್ ಜಮೀನನ್ನು ಜಪ್ತಿ ಮಾಡಿದ್ದ ಸರ್ಕಾರ ಇದೀಗ ಆ ಭೂಮಿಯಲ್ಲಿ 76 ಫ್ಲಾಟ್ ಗಳನ್ನು ನಿರ್ಮಿಸಿದ್ದು, ಬಡವರಿಗೆ ಹಂಚಿಕೆ ಮಾಡಿದೆ.

ಶುಕ್ರವಾರ ನಡೆದ ಸಮಾರಂಭದಲ್ಲಿ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರು ಫ್ಲ್ಯಾಟ್‌ಗಳ ಕೀಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ನಗರದಲ್ಲಿ 226 ಅಭಿವೃದ್ಧಿ ಯೋಜನೆಗಳನ್ನು ಸಿಎಂ ಉದ್ಘಾಟಿಸಿದರು.

ಎರಡು ಬ್ಲಾಕ್‌ಗಳಲ್ಲಿ 76 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದ್ದು, ಲಾಟರಿ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದೆ. ಈ  ಫ್ಲಾಟ್‌ಗಳಿಗೆ ಒಟ್ಟು 6,030 ಅರ್ಜಿದಾರರು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 1, 590 ಮಂದಿ ಲಾಟರಿ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರಾಗಿದ್ದರು.  ಫಲಾನುಭವಿಗಳು 41 ಚದರ ಮೀಟರ್‌ನಲ್ಲಿ 3.5 ಲಕ್ಷ ರೂ.ಗೆ ಫ್ಲಾಟ್ ಪಡೆಯಲಿದ್ದಾರೆ. 

SCROLL FOR NEXT