ದೇಶ

ಭಾರತದ ಕ್ಷಮೆ ಕೋರಿದ ರಷ್ಯಾ ವಿದೇಶಾಂಗ ಸಚಿವ ಸರ್ಗೆ ಲಾವ್ರೋವ್

Srinivas Rao BV

ನವದೆಹಲಿ: ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಭಾಗವಹಿಸಿದ್ದ ರಷ್ಯಾ ವಿದೇಶಾಂಗ ಸಚಿವ ಸೆರ್ಗೆ ಲಾವ್ರೋವ್ ಭಾರತದ ಕ್ಷಮೆ ಕೋರಿದ್ದಾರೆ.

ರಷ್ಯಾ- ಉಕ್ರೇನ್ ಯುದ್ಧ ಹಾಗೂ ಚೀನಾ ಪಾಶ್ಚಾತ್ಯ ದೇಶಗಳ ನಡುವೆ ಹೆಚ್ಚುತ್ತಿರುವ ಬಿರುಕಿನ ವಿಷಯವಾಗಿ ಜಿ-20 ವಿದೇಶಾಂಗ ಸಚಿವರ ಸಭೆಯಲ್ಲಿ ಚರ್ಚೆ ನಡೆದಿತ್ತು. 
 
ಪಾಶ್ಚಾತ್ಯ ದೇಶಗಳ ನಿಯೋಗ ಜಿ-20 ಕಾರ್ಯಸೂಚಿಯನ್ನು ಪ್ರಹಸನವನ್ನಾಗಿಸಿದ ಅಸಭ್ಯ ನಡವಳಿಕೆಗೆ ತಾವು ಭಾರತದ ಮತ್ತು ಇತರ ದಕ್ಷಿಣದ ದೇಶಗಳ ಪ್ರತಿನಿಧಿಗಳಲ್ಲಿ ಕ್ಷಮೆ ಕೋರುತ್ತೇನೆ ಎಂದು ಹೇಳಿದ್ದಾರೆ.

ವಿದೇಶಾಂಹಗ ಸಚಿವ ಎಸ್. ಜೈಶಂಕರ್, ಅಮೆರಿಕದ ಆಂಟನಿ ಬ್ಲಿಂಕನ್, ಸೆರ್ಗೆ ಲಾವ್ರೊವ್, ಚೀನಾದ ಕ್ವಿನ್ ಗಾಂಗ್, ಬ್ರಿಟನ್​​ನ ಜೇಮ್ಸ್ ಕ್ಲೆವೆರ್ಲಿ ಹಾಗೂ ಯುರೋಪಿಯನ್ ಒಕ್ಕೂಟದ ವಿದೇಶಾಂಗ ಸಚಿವರ ಪ್ರತಿನಿಧಿ ಜೋಸೆಪ್ ಬೊರೆಲ್ ಫಾಂಟೆಲ್ಲೆಸ್ ಸಭೆಯಲ್ಲಿ ಭಾಗಿಯಾಗಿದ್ದರು. 

ಜಿ-20 ವಿದೇಶಾಂಗ ಸಚಿವರ ಸಭೆ ಹಲವು ವಿಷಯಗಳಿಗೆ ವಿಶೇಷವಾಗಿ ಸುದ್ದಿಯಲ್ಲಿದೆ. ಸಭೆಯಲ್ಲಿ ಪಾಲ್ಗೊಂಡಿದ್ದ ಬ್ರಿಟನ್ ನ ವಿದೇಶಾಂಗ ಸಚಿವ ಜೇಮ್ಸ್ ಕ್ಲೆವರ್ಲಿ,  ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರೊಂದಿಗೆ ದ್ವಿಪಕ್ಷೀಯ ಸಭೆ ನಡೆಸಿದ್ದರು ಈ ವೇಳೆ ಬಿಬಿಸಿ ಇಂಡಿಯಾ ಮೇಲೆ ತೆರಿಗೆ ಇಲಾಖೆ ದಾಳಿಯನ್ನು ಪ್ರಶ್ನಿಸಿದ್ದ ಕ್ಲೆವರ್ಲಿ ಅವರಿಗೆ ಮುಟ್ಟಿನೋಡಿಕೊಳ್ಳುವಂತಹ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದ ಜೈಶಂಕರ್, ಭಾರತದಲ್ಲಿ ಕಾರ್ಯನಿರ್ವಹಿಸುವ ಎಲ್ಲ ಸಂಸ್ಥೆಗಳು ಇಲ್ಲಿನ ಕಾನೂನನ್ನು ಪಾಲಿಸಲೇಬೇಕು. ಬಿಬಿಸಿ ಕೂಡ ಇದಕ್ಕೆ ಹೊರತಲ್ಲ, ಇಲ್ಲಿರುವುದು ಬ್ರಿಟನ್ ಕಾನೂನು ಅಲ್ಲ ಎಂದು ಹೇಳಿದ್ದರು.

SCROLL FOR NEXT