ದೇಶ

ಚೀನಾ ಫೋನ್ ಗಳ ಬಗ್ಗೆ ರಕ್ಷಣಾ ಗುಪ್ತಚರ ಇಲಾಖೆ ಎಚ್ಚರಿಕೆ

Srinivas Rao BV

ನವದೆಹಲಿ: ಎಲ್ಎಸಿಯಲ್ಲಿ ಚೀನಾದೊಂದಿಗಿನ ಗಡಿ ಸಂಘರ್ಷದ ನಡುವೆಯೇ,  ರಕ್ಷಣಾ ಗುಪ್ತಚರ ಏಜೆನ್ಸಿಗಳು ನಮ್ಮ ಸೇನಾ ಸಿಬ್ಬಂದಿಗಳು ಚೀನಾ ಮೊಬೈಲ್ ಗಳನ್ನು ಬಳಕೆ ಮಾಡುತ್ತಿಲ್ಲ ಎಂಬುದನ್ನು ಖಾತ್ರಿಪಡಿಸಿಕೊಳ್ಳುವಂತೆ ಸಲಹೆ ನೀಡಿದೆ. 

ಫಾರ್ಮೇಷನ್ಸ್ ಹಾಗೂ ಯುನಿಟ್ ಗಳು ತಮ್ಮ ಸಿಬ್ಬಂದಿಗಳಿಗೆ ಅಂತಹ (ಚೀನೀ) ಮೊಬೈಲ್ ಫೋನ್ ಸಾಧನಗಳೊಂದಿಗೆ ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಲಾಗಿದೆ ಎಂದು ರಕ್ಷಣಾ ಗುಪ್ತಚರ ಏಜೆನ್ಸಿಗಳು ಎಚ್ಚರಿಕೆ ನೀಡಿವೆ.
 
ಎಎನ್ಐ ಗೆ ಈ ಸಲಹೆಯ ಪ್ರತಿ ಲಭ್ಯವಾಗಿದ್ದು, ಸೇನಾ ಗೂಢಚಾರಿಕೆ ಏಜೆನ್ಸಿಗಳು, ಸಿಬ್ಬಂದಿಗಳು ಭಾರತದ ಶತ್ರು ದೇಶಗಳ ಫೋನ್ ಗಳನ್ನು ಖರೀದಿಸಿ ಬಳಕೆ ಮಾಡದಂತೆ ನೋಡಿಕೊಳ್ಳಬೇಕು ಎಂದು ಹೇಳಿದೆ. 

ಇಂತಹ ಚೀನಾ ಉತ್ಪಾದಿತ ಮೊಬೈಲ್ ಗಳಲ್ಲಿ ಮಾಲ್ವೇರ್ ಗಳು ಹಾಗೂ ಸ್ಪೈ ವೇರ್ ಗಳು ಇರಬಹುದು ಎಂಬ ಶಂಕೆಯನ್ನು ಗುಪ್ತಚರ ಏಜೆನ್ಸಿಗಳು ಬಹಿರಂಗಪಡಿಸಿವೆ. ಸೇನಾ ಸಿಬ್ಬಂದಿಗಳು, ಈ ರೀತಿಯ ಫೋನ್ ಗಳನ್ನು ಹೊರತುಪಡಿಸಿ ಬೇರೆ ಫೋನ್ ಗಳ ಬಳಕೆಯನ್ನು ಹೆಚ್ಚಿಸಬೇಕು ಎಂದೂ ಸಲಹೆಯಲ್ಲಿ ತಿಳಿಸಿವೆ.

SCROLL FOR NEXT