ದೇಶ

ನಾಗಾಲ್ಯಾಂಡ್‌ ಮುಖ್ಯಮಂತ್ರಿಯಾಗಿ 5ನೇ ಬಾರಿಗೆ ನೀಫಿಯು ರಿಯೊ ಪ್ರಮಾಣವಚನ ಸ್ವೀಕಾರ

Vishwanath S

ನ್ಯಾಶನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿ(ಎನ್‌ಡಿಪಿಪಿ)ಯ ನೀಫಿಯು ರಿಯೊ ಅವರು ಪ್ರಧಾನಿ ನರೇಂದ್ರ ಮೋದಿಯವರ ಸಮ್ಮುಖದಲ್ಲಿ ಐದನೇ ಅವಧಿಗೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು.

ಕಳೆದ ಶನಿವಾರ ಗವರ್ನರ್ ಲಾ ಗಣೇಶನ್‌ಗೆ ನಾಗಾಲ್ಯಾಂಡ್‌ನ ಮುಖ್ಯಮಂತ್ರಿ ಸ್ಥಾನಕ್ಕೆ ನೀಫಿಯು ರಿಯೋ ರಾಜೀನಾಮೆ ನೀಡಿದ್ದು ರಾಜ್ಯದಲ್ಲಿ ಹೊಸ ಸರ್ಕಾರವನ್ನು ರಚಿಸುವುದಾಗಿ ಹೇಳಿದ್ದರು.

14ನೇ ನಾಗಾಲ್ಯಾಂಡ್ ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಪಿಪಿ 25 ಸ್ಥಾನ ಬಿಜೆಪಿ 12 ಸ್ಥಾನ ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿತ್ತು. ಎನ್‌ಡಿಪಿಪಿ-ಬಿಜೆಪಿ ಒಕ್ಕೂಟವು ಎರಡನೇ ಬಾರಿಗೆ ನಾಗಾಲ್ಯಾಂಡ್‌ನಲ್ಲಿ ಸರ್ಕಾರ ರಚಿಸುತ್ತಿದೆ. 

ನೀಫಿಯು ರಿಯೊ ಜೊತೆಗೆ ಉಪ ಮುಖ್ಯಮಂತ್ರಿ ಕೈಟೊ ಅಯ್ಯೆ, ಕೆ ಜಿ ಕೀನ್ಯೆ, ಮೆಸ್ಟುಬೌ ಜಾಮೀರ್ ಮತ್ತು ಸಾಲ್ಹೌಟುವೊನುವೊ ಕ್ರೂಸಾ ಪ್ರಮಾಣವಚನ ಸ್ವೀಕರಿಸಿದರು.

SCROLL FOR NEXT