ದೇಶ

ಭಾರತ, ಪ್ರದಾನಿ ಮೋದಿ ಬಗ್ಗೆ ಅಪ ಪ್ರಚಾರ: ನ್ಯೂಯಾರ್ಕ್ ಟೈಮ್ಸ್ ವಿರುದ್ಧ ಕೇಂದ್ರ ವಾರ್ತಾ ಸಚಿವರ ವಾಗ್ದಾಳಿ

Nagaraja AB

ನವದೆಹಲಿ: ಭಾರತ ಮತ್ತು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅಪ ಪ್ರಚಾರ ನಡೆಸಲಾಗುತ್ತಿದೆ ಎಂದು ನ್ಯೂಯಾರ್ಕ್ ಟೈಮ್ಸ್ ಸೇರಿದಂತೆ ಕೆಲ ವಿದೇಶಿ ಮಾಧ್ಯಮಗಳ ವಿರುದ್ಧ ಕೇಂದ್ರ ವಾರ್ತಾ ಸಚಿವ ಅನುರಾಗ್ ಸಿಂಗ್ ಠಾಕೂರ್ ಶುಕ್ರವಾರ ವಾಗ್ದಾಳಿ ನಡೆಸಿದ್ದಾರೆ. 

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಠಾಕೂರ್, ಕೆಲವು ವಿದೇಶಿ ಮಾಧ್ಯಮಗಳು ಭಾರತ ಮತ್ತು ಪ್ರಧಾನಿ ಮೋದಿ  ವಿರುದ್ಧ ದ್ವೇಷ ಹೊಂದಿದ್ದು, ನಮ್ಮ ಪ್ರಜಾಪ್ರಭುತ್ವ ಮತ್ತು  ಒಕ್ಕೂಟ ವ್ಯವಸ್ಥೆಬಗ್ಗೆ ವ್ಯವಸ್ಥಿತವಾಗಿ ಸುಳ್ಳನ್ನು ಹರಡಲು ಬಹಳ ಹಿಂದಿನಿಂದಲೂ ಪ್ರಯತ್ನಿಸುತ್ತಿವೆ. "ನ್ಯೂಯಾರ್ಕ್ ಟೈಮ್ಸ್ ಭಾರತದ ಬಗ್ಗೆ ಏನನ್ನಾದರೂ ಪ್ರಕಟಿಸುವಾಗ ತಟಸ್ಥತೆಯ ಎಲ್ಲಾ ಸೋಗುಗಳನ್ನು ಬಹಳ ಹಿಂದೆಯೇ ಕೈಬಿಟ್ಟಿದೆ. ಕಾಶ್ಮೀರದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಕುರಿತ ನ್ಯೂಯಾರ್ಕ್ ಟೈಮ್ಸ್ ಅಭಿಪ್ರಾಯ ಕುಚೇಷ್ಟೆಯಾಗಿದೆ. ಭಾರತ ಮತ್ತು ಪ್ರಜಾಸತಾತ್ಮಕ ಸಂಸ್ಥೆಗಳು ಮತ್ತು ಮೌಲ್ಯಗಳ ಬಗ್ಗೆ ಅಪ ಪ್ರಚಾರ ಮಾಡಲಾಗುತ್ತಿದೆ ಎಂದು ಫೋಸ್ಟ್ ಮಾಡಿದ್ದಾರೆ. 

ನ್ಯೂಯಾರ್ಕ್ ಟೈಮ್ಸ್ ನಂತಹ ಕೆಲ ಸಮನ ಮನಸ್ಕ ವಿದೇಶಿ ಮಾಧ್ಯಮಗಳು ಧೀರ್ಘ ಕಾಲದಿಂದಲೂ ನಮ್ಮ ಪ್ರಜಾಪ್ರಭುತ್ವ ಮತ್ತು ಪ್ರಧಾನಿ ಮೋದಿ ವಿರುದ್ಧ ಇಂತಹ ಸುಳ್ಳನ್ನು ಹರಡುವ ಕೆಲಸ ಮಾಡುತ್ತಿವೆ. ಭಾರತದಲ್ಲಿ ಪತ್ರಿಕಾ ಸ್ವಾತಂತ್ರ್ಯವು ಇತರ ಮೂಲಭೂತ ಹಕ್ಕುಗಳಂತೆಯೇ ಪವಿತ್ರವಾಗಿದೆ ಎಂದು ಅವರು ಸಮರ್ಥಿಸಿಕೊಂಡಿದ್ದಾರೆ. 

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ಇತ್ತೀಚಿಗೆ ಯುಕೆಗೆ ಭೇಟಿ ನೀಡಿದ್ದ ರಾಹುಲ್ ಗಾಂಧಿ, ಭಾರತದ ಪ್ರಜಾಪ್ರಭುತ್ವದ ಮೇಲೆ ಕೇಂದ್ರ ಸರ್ಕಾರ ದಾಳಿ ನಡೆಸುತ್ತಿದೆ ಎಂದು ಟೀಕಿಸಿದ್ದರು. 

SCROLL FOR NEXT