ಪ್ರಾತಿನಿಧಿಕ ಚಿತ್ರ 
ದೇಶ

ತಿರುವನಂತಪುರಂನಲ್ಲಿ 'ಕಿಡ್ನಿ, ಲಿವರ್ ಮಾರಾಟಕ್ಕಿದೆ' ಎಂಬ ಪೋಸ್ಟರ್; ಜನರಲ್ಲಿ ಆತಂಕ ಸೃಷ್ಟಿ!

ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್‌ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾತನೇ ಈ ಬೋರ್ಡ್ ಹಾಕಿದ್ದ.

ತಿರುವನಂತಪುರಂ: 'ಕಿಡ್ನಿ, ಲಿವರ್ ಮಾರಾಟಕ್ಕಿದೆ', ಇದು ತಿರುವನಂತಪುರದ ಮಣಕೌಡ್ ಎಂಬಲ್ಲಿನ ಮನೆಯೊಂದರ ಮುಂದೆ ಕಾಣಿಸಿಕೊಂಡ ಪೋಸ್ಟರ್. ಮೊದಲಿಗೆ ಇದು ಯಾರೋ ಮಾಡಿದ ಚೇಷ್ಟೆ ಅಥವಾ ಸರ್ಕಾರವನ್ನು ಟ್ರೋಲ್ ಮಾಡಲು ಮಾಡಿದ್ದು ಎಂದೇ ಆರಂಭದಲ್ಲಿ ಜನರು ಭಾವಿಸುವಂತೆ ಮಾಡಿತು.

ಜಾಹೀರಾತಿನ ಜೊತೆಗೆ ಎರಡು ಫೋನ್ ನಂಬರ್‌ಗಳನ್ನು ಸಹ ನೀಡಲಾಗಿದೆ. ಸಂಖ್ಯೆಗಳನ್ನು ಡಯಲ್ ಮಾಡಿದಾಗ, ಅವು ಅಸಲಿ ಎಂದು ಕಂಡುಬಂದಿದೆ. ಮಣಕೌಡ್ ಪುಥೇನ್ ರಸ್ತೆಯ ಸಂತೋಷ್ ಕುಮಾರ್ (50) ಎಂಬಾತನೇ ಈ ಬೋರ್ಡ್ ಹಾಕಿದ್ದ.

ಹಣ್ಣಿನ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾಗ ಗೋಣಿಚೀಲ ಎತ್ತುವ ವೇಳೆ ಅಪಘಾತ ಸಂಭವಿಸಿದೆ ಎಂದು ಸಂತೋಷ್ ತಿಳಿಸಿದ್ದಾರೆ.

ಚಿಕಿತ್ಸೆಗೆ ಒಳಗಾಗಬೇಕಾಗಿದ್ದ ಅವರ ಬಳಿ ಈಗ ಹಣವಿಲ್ಲ. ಮಣಕೌಡ್ ಜಂಕ್ಷನ್‌ನಲ್ಲಿರುವ ಕುಟುಂಬದ ಭೂಮಿಯ ಒಂದು ಭಾಗವನ್ನು ಮಾರಾಟ ಮಾಡಲು ಅವರು ಬಯಸಿದ್ದರು. ಆದರೆ, ಜಮೀನಿನ ವಿಚಾರವಾಗಿ ಸಹೋದರನ ಜತೆ ಜಗಳವಾಗಿತ್ತು.
ಆಸ್ತಿ ಅವರ ತಾಯಿಯ ಹೆಸರಿನಲ್ಲಿದೆ ಮತ್ತು ಈಗ ಸಂತೋಷ್ ಸೇರಿದಂತೆ ಆರು ಸಹೋದರರ ಹೆಸರಿನಲ್ಲಿದೆ ಎಂದು ಅವರ ಸಹೋದರ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ತನ್ನ ಪತ್ನಿ ಕೆಲವು ಟ್ಯೂಷನ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಆದರೆ, ಕೋವಿಡ್-19 ನಂತರ ಅದೂ ನಿಂತುಹೋಯಿತು ಎನ್ನುತ್ತಾರೆ ಸಂತೋಷ್.

ಅಂತಹ ಕಠಿಣ ಪರಿಸ್ಥಿತಿಯಲ್ಲಿ, ತಮ್ಮ ಪ್ರಮುಖ ಅಂಗಗಳನ್ನು ಮಾರಾಟ ಮಾಡುವುದನ್ನು ಬಿಟ್ಟು ಬೇರೆ ಯಾವುದೇ ಮಾರ್ಗವಿಲ್ಲ ಎಂದು ಕುಟುಂಬ ಹೇಳಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಂಘರ್ಷ ಅಂತ್ಯಕ್ಕೆ ಇರಾನ್ 7 ದಿನಗಳ ಯೋಜನೆ ಪ್ರಸ್ತಾಪ: ಹಾರ್ಮುಜ್ ಜಲಸಂಧಿ ಮತ್ತೆ ಮುಕ್ತ

ವಿಶ್ವಸಂಸ್ಥೆಯಲ್ಲಿ Pak ಪ್ರಧಾನಿಗೆ ಮುಖಭಂಗ: ಭಯೋತ್ಪಾದನೆ ಕುರಿತ ಪ್ರಶ್ನೆ ಎದುರಿಸಲಾಗದೆ ತಲೆತಗ್ಗಿಸಿ ನಡೆದ ಶೆಹಬಾಜ್ ಷರೀಫ್..! Video

ವಿಶ್ವಸಂಸ್ಥೆಯಲ್ಲಿ ನೆತನ್ಯಾಹುಗೆ ಬಿಗ್ ಶಾಕ್: ಭಾಷಣ ಬಹಿಷ್ಕರಿಸಿ ಹೊರನಡೆದ ಹತ್ತಾರು ದೇಶಗಳ ಪ್ರತಿನಿಧಿಗಳು,"ನೈತಿಕ ಹೇಡಿಗಳು" ಎಂದು ಕರೆದ ಇಸ್ರೇಲ್ ಪ್ರಧಾನಿ..!

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ