ಐಐಟಿ ಮದ್ರಾಸ್ 
ದೇಶ

ಐಐಟಿ ಮದ್ರಾಸ್ ನಲ್ಲಿ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ, ಒಂದೇ ತಿಂಗಳಲ್ಲಿ ಇಬ್ಬರು ಸಾವಿಗೆ ಶರಣು

ಐಐಟಿ-ಮದ್ರಾಸ್‌ನ ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ರೂಮ್ ನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಚೆನ್ನೈ: ಐಐಟಿ-ಮದ್ರಾಸ್‌ನ ಮೂರನೇ ವರ್ಷದ ಬಿಟೆಕ್ ವಿದ್ಯಾರ್ಥಿಯೊಬ್ಬ ತನ್ನ ಹಾಸ್ಟೆಲ್ ರೂಮ್ ನಲ್ಲಿ ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ನೆರೆಯ ಆಂಧ್ರಪ್ರದೇಶ ಮೂಲದ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ವಿಭಾಗದ 20 ವರ್ಷದ ವಿದ್ಯಾರ್ಥಿ, ತನ್ನ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ.

ಪ್ರಾಥಮಿಕ ತನಿಖೆಯ ಪ್ರಕಾರ, ಮೃತ ವಿದ್ಯಾರ್ಥಿ ಅಧ್ಯಯನದ ಮೇಲೆ ಕೇಂದ್ರೀಕರಿಸಲು ಮತ್ತು ಶೈಕ್ಷಣಿಕ ಕಾರ್ಯಗಳನ್ನು ಪೂರ್ಣಗೊಳಿಸಲು ವಿಫಲವಾಗಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತನಿಖೆ ಮತ್ತು ಶವಪರೀಕ್ಷೆ ಪೂರ್ಣಗೊಂಡ ನಂತರವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 14 ರಂದು ಐಐಟಿ ಮದ್ರಾಸ್‌ನಲ್ಲಿ ಇಂಜಿನಿಯರಿಂಗ್ ಸ್ನಾತಕೋತ್ತರ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಒಂದು ತಿಂಗಳಲ್ಲೇ ಈ ಘಟನೆ ನಡೆದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಪ್ರತಿಯೊಬ್ಬರಿಗೂ ಕಾರು, ತಿಂಗಳಿಗೆ ₹1 ಲಕ್ಷ ಭತ್ಯೆ': ರಾಜ್ಯದ 234 ಶಾಸಕರಿಗೆ ಭರ್ಜರಿ ಕೊಡುಗೆ ಘೋಷಿಸಿದ ತಮಿಳುನಾಡು CM ವಿಜಯ್!

'BJPಯವನಾದ ಮಾತ್ರಕ್ಕೆ ಮಾಲೀಕರು ಉಚಿತವಾಗಿ ಮನೆ ನೀಡಲಾರರು'; ನಾನು 'leta' or 'beta' ವರ್ಗಕ್ಕೆ ಸೇರಿದವನಲ್ಲ: ಶೆಹಜಾದ್ ಪೂನಾವಾಲಾ

ರಹಸ್ಯವಾಗಿ ಎಂಗೇಜ್ಮೆಂಟ್ ಮಾಡಿಕೊಂಡ್ರಾ ‘ಧುರಂಧರ್’ ನಟಿ? ಡೈಮಂಡ್ ರಿಂಗ್ ಪ್ರದರ್ಶಿಸಿದ ಆಯೇಷಾ; ಫೋಟೋ ವೈರಲ್

"ವಾವ್!! ನನ್ನ ಮಟ್ಟಿಗೆ ಅವರು ಚೆನ್ನಾಗಿ ವಿವರಿಸಿದ್ದಾರೆ": 'ನಾನು ಹೆಮ್ಮೆಯ ಅಂಧಭಕ್ತೆ' ಎಂದ ಬಾಲಿವುಡ್ ನಟಿ ಇಶಾ ಕೊಪ್ಪಿಕರ್'ಗೆ ಕಂಗನಾ ಬೆಂಬಲ

ಬಾಗಲಕೋಟೆ ಬಳಿ ಭೀಕರ ಅಪಘಾತ: ಬೈಕ್‌ಗೆ ಡಿಕ್ಕಿ ಹೊಡೆದು ಖಾಸಗಿ ಬಸ್ ಪಲ್ಟಿ; ಸ್ಥಳದಲ್ಲೇ ಇಬ್ಬರು ಸಾವು