ನಿತ್ಯಾನಂದ 
ದೇಶ

ಅಮೆರಿಕದ 30 ನಗರಗಳ ಜೊತೆ ನಿತ್ಯಾನಂದನ ಸಾಂಸ್ಕೃತಿಕ ಸಹಭಾಗಿತ್ವ: ಕೈಲಾಸದ ಜೊತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ ರದ್ಧು!

ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದನ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವು ಅಮೆರಿಕದ 30ಕ್ಕೂ ಹೆಚ್ಚು ನಗರಗಳೊಂದಿಗೆ ಸಾಂಸ್ಕೃತಿಕ ಸಹಭಾಗಿತ್ವಕ್ಕೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ನ್ಯೂಯಾರ್ಕ್: ದೇಶಭ್ರಷ್ಟ, ಭಾರತ ಮೂಲದ ನಿತ್ಯಾನಂದನ ‘ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ’ವು ಅಮೆರಿಕದ 30ಕ್ಕೂ ಹೆಚ್ಚು ನಗರಗಳೊಂದಿಗೆ ಸಾಂಸ್ಕೃತಿಕ ಸಹಭಾಗಿತ್ವಕ್ಕೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.

ಅಮೆರಿಕದ ನ್ಯೂಜೆರ್ಸಿಯ ನೆವಾರ್ಕ್ ನಗರವು ನಿತ್ಯಾನಂದನ ಕಾಲ್ಪನಿಕ ದೇಶ ಕೈಲಾಸದ ಜೊತೆಗಿನ ‘ಸಿಸ್ಟರ್‌ ಸಿಟಿ ಒಪ್ಪಂದ’ವನ್ನು ರದ್ದುಗೊಳಿಸಿದ ಕೆಲ ದಿನಗಳ ಬಳಿಕ ಈ ವರದಿ ಬಂದಿದೆ. ಅತ್ಯಾಚಾರ ಆರೋಪದಿಂದ ದೇಶ ಬಿಟ್ಟಿರುವ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮತ್ತೆ ಸುದ್ದಿಗೆ ಬಂದಿದ್ದಾನೆ. ದೇಶವನ್ನು ಬಿಟ್ಟು ಪರಾರಿಯಾಗಿರುವ ನಿತ್ಯಾನಂದ ಈಕ್ವೆಡಾರ್‌ನ ಕರಾವಳಿಯಲ್ಲಿ ನೆಲೆಗೊಂಡಿರುವ ಒಂದು ದ್ವೀಪದಲ್ಲಿ ತನ್ನದೇ ಆದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿದ್ದಾನೆ.

ಇದರೊಂದಿಗೆ ನಿತ್ಯಾನಂದನ 'ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ' ಅಮೆರಿಕದ 30 ಕ್ಕೂ ಹೆಚ್ಚು ನಗರಗಳೊಂದಿಗೆ "ಸಾಂಸ್ಕೃತಿಕ ಪಾಲುದಾರಿಕೆ" ಗೆ ಸಹಿ ಹಾಕಿದೆ ಎಂದು ಮಾಧ್ಯಮ ವರದಿಯೊಂದು ಇತ್ತೀಚೆಗೆ ತಿಳಿಸಿದೆ. ಆದರೆ ಒಪ್ಪಂದ ಮಾಡಿಕೊಂಡಿರುವ ದೇಶಗಳಿಗೆ ನಿತ್ಯಾನಂದ ಅಥವಾ ಕೈಲಾಸದ ಅಸಲಿಯತ್ತುಗಳು ತಿಳಿಯದೇ ಇರುವುದು ಪರಿಶೀಲನೆ ಬಳಿಕ ತಿಳಿದು ಬಂದಿದೆ ಎಂದು ಫಾಕ್ಸ್ ನ್ಯೂಸ್ ವರದಿ ಮಾಡಿದೆ.

ನೆವಾರ್ಕ್ ಮತ್ತು ನಕಲಿ "ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ" ನಡುವಿನ 'ಸಹೋದರ-ನಗರ' ಒಪ್ಪಂದಕ್ಕೆ ಈ ವರ್ಷ ಜನವರಿ 12 ರಂದು ಸಹಿ ಹಾಕಲಾಗಿದೆ. ಸಹಿ ಮಾಡುವ ಸಮಾರಂಭ ನೆವಾರ್ಕ್‌ನ ಸಿಟಿ ಹಾಲ್‌ನಲ್ಲಿ ನಡೆದಿದೆ. ಆಶ್ಚರ್ಯ ಅಂದರೆ ನೆವಾರ್ಕ್ ಗೆ ಒಪ್ಪಂದದ ವೇಳೆ ಕೈಲಾಸದ ಬಗ್ಗೆ ಆಗಲಿ ಅಥವಾ ನಿತ್ಯಾನಂದನ ಬಗ್ಗೆಯಾಗಲಿ ತಿಳಿದಿರಲಿಲ್ಲ. ತಿಳಿದ ಬಳಿಕ ಈ ಕಾಲ್ಪನಿಕ ದೇಶದೊಂದಿಗೆ 'ಸಿಸ್ಟರ್ ಸಿಟಿ' ಒಪ್ಪಂದವನ್ನು ನೆವಾರ್ಕ್ ರದ್ದುಗೊಳಿಸಿದೆ.

‘ಕೈಲಾಸ ಎಂಬ ದೇಶ ಅಸ್ತಿತ್ವಕ್ಕೆ ಬಂದ ಸಂದರ್ಭಗಳನ್ನು ಗಮನಿಸಲಾಯಿತು. ಈ ಹಿಂದೆ ವಂಚನೆ ಇರುವುದು ಖಚಿತವಾದ ಬೆನ್ನಲ್ಲೇ ಒಪ್ಪಂದವನ್ನು ರದ್ದುಗೊಳಿಸುವ ನಿರ್ಧಾರ ಕೈಗೊಳ್ಳಲಾಯಿತು’ ಎಂದು ನೆವಾರ್ಕ್ ನಗರದ ಸಂವಹನ ಇಲಾಖೆಯ ಪತ್ರಿಕಾ ಕಾರ್ಯದರ್ಶಿ ಸುಸಾನ್ ಗರೊಫಾಲೊ ಹೇಳಿದ್ದರು.

ವಿಜ್ಞಾನದ ಉಲ್ಲೇಖದ ಮೂಲಕ ನಿತ್ಯಾನಂದನ ಆಧ್ಯಾತ್ಮಿಕ ಪ್ರಚಾರಗಳು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುತ್ತವೆ. ಅದರ ಮುಂದುವರಿದ ಭಾಗವಾಗಿ, 2019 ರಲ್ಲಿ ಯುನೈಟೆಡ್ ಸ್ಟೇಟ್ಸ್ ಆಫ್ ಕೈಲಾಸ ಎಂಬ ದೇಶವನ್ನು ಸ್ಥಾಪಿಸಿರುವುದಾಗಿ ಹೇಳಿಕೊಂಡಿದ್ದಾನೆ.

ಅದರ ವೆಬ್‌ಸೈಟ್‌ ಪ್ರಕಾರ, ಅಮೆರಿಕದ 30ಕ್ಕೂ ಹೆಚ್ಚು ನಗರಗಳು ಕೈಲಾಸದೊಂದಿಗೆ ಸಾಂಸ್ಕೃತಿಕ ಪಾಲುದಾರಿಕೆಗೆ ಸಹಿ ಹಾಕಿವೆ. ರಿಚ್ಮಂಡ್, ವರ್ಜೀನಿಯಾದಿಂದ ಡೇಟನ್, ಓಹಿಯೊ, ಬ್ಯೂನಾ ಪಾರ್ಕ್, ಫ್ಲಾರಿಡಾದವರೆಗಿನ ಭೂಪಟದ ಬಹುತೇಕ ನಗರಗಳು ಈ ಒಪ್ಪಂದಕ್ಕೆ ಒಳಪಟ್ಟಿವೆ ಎಂದು ಉಲ್ಲೇಖಿಸಲಾಗಿದೆ.

ನಕಲಿ ದೇಶದ ಜೊತೆ ಸಹಿ ಹಾಕಿರುವ ಸತ್ಯಾಸತ್ಯತೆ ಕುರಿತ ಪರಿಶೀಲನೆಗೆ ಅಮೆರಿಕದ ನಗರಗಳ ಆಡಳಿತವನ್ನು ಸಂಪರ್ಕಿಸುತ್ತಿದ್ದೇವೆ. ಈವರೆಗೆ ಸಂಪರ್ಕ ಮಾಡಿದ ಹೆಚ್ಚಿನ ನಗರಗಳು ಈ ಘೋಷಣೆಗಳು ನಿಜವೆಂದು ದೃಢಪಡಿಸಿವೆ ಎಂದು ಫಾಕ್ಸ್‌ ನ್ಯೂಸ್ ವರದಿ ಹೇಳಿದೆ.

ಈ ಪೈಕಿ ಹಲವು ನಗರಗಳು ಕೈಲಾಸ ತಮಗೆ ಮೋಸ ಮಾಡಿದ್ದನ್ನು ಕೂಡ ಒಪ್ಪಿಕೊಂಡಿದ್ದಾರೆ. ನಾವು ಕೈಲಾಸದೊಂದಿಗೆ ಯಾವ ರೀತಿಯ ಒಪ್ಪಂದ ಮಾಡಿಕೊಂಡಿದ್ದೇವೆ ಎನ್ನುವುದು ಈಗ ತಿಳಿಸುವ ವಿಚಾರವಲ್ಲ ಎಂದು ಉತ್ತರ ಕೆರೋಲಿನಾದ ಜಾಕ್ಸನ್‌ವಿಲ್ಲೆ ನಗರವು ಫಾಕ್ಸ್‌ನ್ಯೂಸ್‌ಗೆ ತಿಳಿಸಿದೆ.

ಕೈಲಾಸ ದೇಶದ ಹೆಸರಿನಲ್ಲಿ ಕೆಲವು ದಿನಗಳ ಹಿಂದೆ ನಮಗೆ ಮನವಿ ಬಂದಿತ್ತು. ಅದಕ್ಕೆ ನಾವು ಸ್ಪಂದಿಸಿದ್ದೇವೆ. ಆದರೆ, ಅವರು ಮಾಡಿದ ವಿನಂತಿ ಏನೆಂದು ಈಗ ತಿಳಿಸಲು ಸಾಧ್ಯವಿಲ್ಲ. ಸರಿಯಾದ ಮಾಹಿತಿ ಸಂಗ್ರಹಣೆ ಮಾಡದೆ ಕೈಲಾಸದೊಂದಿಗೆ ಒಪ್ಪಂದ ಮಾಡಿಕೊಂಡಿದ್ದು ನಗರಗಳ ಅಧಿಕಾರಿಗಳ ತಪ್ಪು ಎಂದು ವರದಿಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಮೂವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

SCROLL FOR NEXT