ದೇಶ

ತಮಿಳುನಾಡು ಬಜೆಟ್: ಮನೆಯ ಯಜಮಾನಿಗೆ 1,000 ರೂ. ನೆರವು, ಸೆಪ್ಟೆಂಬರ್ ನಿಂದ ಜಾರಿ

Lingaraj Badiger

ಚೆನ್ನೈ: ಆಡಳಿತಾರೂಢ ಡಿಎಂಕೆ ಚುನಾವಣೆಯಲ್ಲಿ ನೀಡಿದ್ದ ಭರವಸೆಯಂತೆ ಕುಟುಂಬದ ಯಜಮಾನಿಗೆ ತಿಂಗಳ 1000 ರೂಪಾಯಿ ನೆರವು ನೀಡುವುದಾಗಿ ಸೋಮವಾರ ಬಜೆಟ್ ನಲ್ಲಿ ಘೋಷಿಸಿದ್ದು, ಈ ಯೋಜನೆಯನ್ನು ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದೆ.

ಸೆಪ್ಟೆಂಬರ್ 15 ರಂದು ದ್ರಾವಿಡ ಧೀಮಂತ ಮತ್ತು ಪಕ್ಷದ ಸಂಸ್ಥಾಪಕ, ದಿವಂಗತ ಸಿಎನ್ ಅಣ್ಣಾದೊರೈ ಅವರ ಜನ್ಮದಿನದಂದು ಈ ಯೋಜನೆ ಜಾರಿಗೊಳಿಸಲು ತಮಿಳುನಾಡು ಸರ್ಕಾರ ನಿರ್ಧರಿಸಿದೆ. 2024ರ ಲೋಕಸಭಾ ಚುನಾವಣೆಗೆ ಕೆಲವೇ ತಿಂಗಳು ಬಾಕಿ ಇರುವಂತೆ ಪ್ರಮುಖ ಯೋಜನೆ ಜಾರಿಗೊಳಿಸುವ ಮೂಲಕ ಡಿಎಂಕೆ ತಮಿಳುನಾಡಿನ ಎಲ್ಲಾ 39 ಸ್ಥಾನಗಳು ಗೆಲ್ಲಲು ತಂತ್ರ ರೂಪಿಸಿದೆ.

ತಮಿಳುನಾಡು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಅವರು ಇಂದು ವಿಧಾನಸಭೆಯಲ್ಲಿ 2023-24ನೇ ಸಾಲಿನ ಬಜೆಟ್ ಮಂಡಿಸಿದರು ಮತ್ತು ಮಹಿಳೆಯರಿಗೆ ಮಾಸಿಕ ಸಹಾಯ ಯೋಜನೆಯನ್ನು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರು ಪ್ರಾರಂಭಿಸುತ್ತಾರೆ ಎಂದು ಘೋಷಿಸಿದರು.

ಈ ಯೋಜನೆ ಅನುಷ್ಠಾನಕ್ಕೆ ವಿಧಾನಗಳನ್ನು ರೂಪಿಸಲಾಗುತ್ತಿದೆ ಮತ್ತು ಯೋಜನೆಗಾಗಿ 7,000 ಕೋಟಿ ರೂ.ಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿದೆ. ಈ ಯೋಜನೆ "ರಾಜ್ಯದ ಮಹಿಳೆಯರ ಸಾಮಾಜಿಕ-ಆರ್ಥಿಕ ಜೀವನದಲ್ಲಿ ಪ್ರಮುಖ ಬದಲಾವಣೆ ತರಲಿದೆ"  ಎಂದು ಹೇಳಿದರು.

SCROLL FOR NEXT