ಎಸ್ ಯುವಿನಲ್ಲಿ ಪರಾರಿಯಾಗುತ್ತಿರುವ ಅಮೃತ್ ಪಾಲ್ ಸಿಂಗ್ 
ದೇಶ

ಅಮೃತ್ ಪಾಲ್ ತಪ್ಪಿಸಿಕೊಳ್ಳಲು ಐಎಸ್ಐ ನೆರವಿನೊಂದಿಗೆ ಆತನ ಮಾರ್ಗದರ್ಶಕ ಸಹಾಯ!

ಖಲೀಸ್ಥಾನಿ ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳುವುದರ ಹಿಂದೆ ಇರುವುದು 38 ವರ್ಷದ ಪಪಲ್ ಪ್ರೀತ್ ಸಿಂಗ್ ಎಂಬುದು ಬಹಿರಂಗವಾಗಿದ್ದು ಆತ ಪಾಕಿಸ್ತಾನದ ಐಎಸ್ಎಸ್ ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ. 

ಪಂಜಾಬ್: ಖಲೀಸ್ಥಾನಿ ತೀವ್ರಗಾಮಿ ಅಮೃತ್ ಪಾಲ್ ಸಿಂಗ್ ಪೊಲೀಸ್ ವಶದಿಂದ ತಪ್ಪಿಸಿಕೊಳ್ಳುವುದರ ಹಿಂದೆ ಇರುವುದು 38 ವರ್ಷದ ಪಪಲ್ ಪ್ರೀತ್ ಸಿಂಗ್ ಎಂಬುದು ಬಹಿರಂಗವಾಗಿದ್ದು ಆತ ಪಾಕಿಸ್ತಾನದ ಐಎಸ್ಎಸ್ ನೊಂದಿಗೆ ನಿಕಟ ಸಂಪರ್ಕದಲ್ಲಿದ್ದ ಎಂಬ ಮಾಹಿತಿ ಲಭ್ಯವಾಗಿದೆ. 

ಪಪಲ್ ಪ್ರೀತ್ ಸಿಂಗ್ ನಿರಂತರವಾಗಿ ಐಎಸ್ಐ ನೊಂದಿಗೆ ಸಂಪರ್ಕದಲ್ಲಿದ್ದು ಸೂಚನೆಗಳನ್ನು ಸ್ವೀಕರಿಸುತ್ತಿದ್ದ ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. 

ಪಪಲ್ ಪ್ರೀತ್ ಸಿಂಗ್ ಅಮೃತ್ ಪಾಲ್ ಸಿಂಗ್ ನ ಮಾರ್ಗದರ್ಶಕರ ಪೈಕಿ ಒಬ್ಬರಾಗಿದ್ದು, ಅಮೃತ್ ಪಾಲ್ ಸಿಂಗ್ ಗೆ ಹಲವು ವಿಷಯಗಳ ಬಗ್ಗೆ ಮಾರ್ಗದರ್ಶನ ಮಾಡುತ್ತಿದ್ದ ವ್ಯಕ್ತಿಯಾಗಿದ್ದಾನೆ. 

ಅಮೃತ್ ಪಾಲ್ ಸಿಂಗ್ ಕಳೆದ ವರ್ಷ ಭಾರತಕ್ಕೆ ಬಂದಾಗಿನಿಂದಲೂ ಪಪಲ್ ಪ್ರೀತ್ ಸಿಂಗ್ ಆತನೊಂದಿಗೆ ನಿಕಟವಾಗಿ ಕಾರ್ಯನಿರ್ವಹಿಸುತ್ತಿದ್ದು, 2021 ರಲ್ಲಿ ರಸ್ತೆ ಅಪಘಾತದಲ್ಲಿ ನಿಧನರಾದ ನಟ ದೀಪ್ ಸಿಧು ಅವರು ಸ್ಥಾಪಿಸಿದ 'ವಾರಿಸ್ ಪಂಜಾಬ್ ದೇ' ಸಂಸ್ಥೆಯ ಆಡಳಿತವನ್ನು ವಹಿಸಿಕೊಂಡಿದ್ದ.

ಅಮೃತಪಾಲ್ ಜೊತೆಗೆ ದ್ವಿಚಕ್ರವಾಹನದಲ್ಲಿ ಹಿಂಬದಿಯಲ್ಲಿ ಕುಳಿತ ಪಾಪಲ್ಪ್ರೀತ್ ಮೋಟಾರ್ ಸೈಕಲ್ ಓಡಿಸುತ್ತಿದ್ದದ್ದು ಕಂಡುಬಂದಿತ್ತು. ಬಳಿಕ ಜಲಂಧರ್‌ನ ಫಿಲ್ಲೌರ್‌ನಲ್ಲಿ ದ್ವಿಚಕ್ರ ವಾಹನ ಬಿಟ್ಟುಹೋದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. 

ಪಂಜಾಬ್ ನಲ್ಲಿ ಭಯೋತ್ಪಾದನೆಯನ್ನು ತೀವ್ರಗೊಳಿಸಿ ಖಲಿಸ್ಥಾನದ ವಿಷಯವನ್ನು ಉಲ್ಬಣಿಸುವುದಕ್ಕೆ ಪಲ್ ಪ್ರೀತ್ ಸಿಂಗ್ ಐಎಸ್ಐ ನಿಂದ ಸೂಚನೆಗಳನ್ನು ಪಡೆಯುತ್ತಿದ್ದ. 

ಪಲ್ ಪ್ರೀತ್ ಸಿಂಗ್ ಸೂಚನೆಯ ಬಳಿಕ ಅಮೃತ್ ಪಾಲ್ ಆತನ ಚಹರೆಯನ್ನು ಸಿಖ್ ತೀವ್ರಗಾಮಿಯಿಂದ ಸಾಧಾರಣ ವ್ಯಕ್ತಿಯ ರೀತಿಯಲ್ಲಿ ಬದಲಾಯಿಸಿಕೊಂಡು ತಪ್ಪಿಸಿಕೊಂಡಿದ್ದ ಎಂದು ತಿಳಿದುಬಂದಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಲಾಲ್ ಬಾಗ್ ಅಭಿವೃದ್ಧಿಗೆ 10 ಕೋಟಿ ರೂ; ಸುರಂಗ ರಸ್ತೆ ಯೋಜನೆಯಿಂದ ಸಸ್ಯೋದ್ಯಾನದ ಮೇಲೆ ಯಾವುದೇ ಎಫೆಕ್ಟ್ ಆಗಲ್ಲ: ಡಿ.ಕೆ ಶಿವಕುಮಾರ್; Video

ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಒಂದಾದ ಜಾರಕಿಹೊಳಿ ಬ್ರದರ್ಸ್‌ಗೆ ಜಾಕ್‌ಪಾಟ್; ರಮೇಶ್ ಕತ್ತಿ ಬಣಕ್ಕೆ ಶಾಕ್!

ನೊಬೆಲ್ ಶಾಂತಿ ಪ್ರಶಸ್ತಿ ಘೋಷಣೆಯಾಗುತ್ತಿದ್ದಂತೆಯೇ Maria Corina Machado ವಿವಾದಕ್ಕೆ ಗುರಿ; ಭುಗಿಲೆದ್ದ ಅಶಾಂತಿ!

Shocking: ಹೆಣ್ಣಿನ ಶವ ಎಳೆದೊಯ್ದು ಶವಾಗಾರದಲ್ಲೇ ಅತ್ಯಾಚಾರ, 25ರ ಯುವಕನಿಂದ ಪೈಶಾಚಿಕ ಕೃತ್ಯ, CCTV Video

Belagavi: ಲವರ್ ಜೊತೆ ಮಗಳು ಪರಾರಿ; ಇಡೀ ಊರಿಗೆ 'ತಿಥಿ' ಊಟ ಹಾಕಿಸಿದ ತಂದೆ!

SCROLL FOR NEXT