ದೇಶ

ಭಾರತಕ್ಕೆ ಎಲ್ಟನ್ ಮತ್ತು ಫ್ರೆಡ್ಡಿ ಚೀತಾಗಳ ಆಗಮನ!

Srinivas Rao BV

ಭೋಪಾಲ್: ಎರಡು ಗಂಡು ಚೀತಾಗಳು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಆಗಮಿಸಿವೆ. 

ಎಲ್ಟನ್ ಮತ್ತು ಫ್ರೆಡ್ಡಿ ಎಂಬ ಹೆಸರಿನ ಚೀತಾಗಳು ಭಾರತಕ್ಕೆ ಆಗಮಿಸಿದ್ದು, ಫ್ರೀ ರೇಂಜಿಂಗ್ ಪ್ರದೇಶದಲ್ಲಿ ಬಿಡಲಾಗಿದೆ. ಎರಡೂ ಚೀತಾಗಳು ಆರೋಗ್ಯವಾಗಿದೆ ಎಂದು ಕುನೋ ರಾಷ್ಟ್ರೀಯ ಉದ್ಯಾನವನ ಟ್ವೀಟ್ ಮಾಡಿದೆ. 

ಮಾ.13 ರಂದು ಗಂಡು ಚೀತಾ ಒಬಾನ್ ಮತ್ತು ಹೆಣ್ಣು ಚೀತಾ ಆಶಾ, 24 ಗಂಟೆಗಳಲ್ಲಿ ಜಿಂಕೆಯೊಂದನ್ನು ಬೇಟೆಯಾಡಿತ್ತು.

ಎಎನ್ಐ ಜೊತೆ ಮಾತನಾಡಿರುವ 24 ಗಂಟೆಯೊಳಗೆ ಎರಡೂ ಚಿರತೆಗಳು ಬೇಟೆಯಾಡಲು ಹೊರಟಿದ್ದು, ಎರಡೂ ಕಾಡಿನ ಪರಿಸರದಲ್ಲಿ ಹೊಂದಿಕೊಂಡಿವೆ ಎಂದು ಶಿಯೋಪುರ ಡಿಎಫ್‌ಒ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. 

ಕಾಡಿನಲ್ಲಿ ಬೇಟೆಯಾಡಲು ಸಾಕಷ್ಟು ಪ್ರಾಣಿಗಳಿವೆ, ನೀರಿನ ವ್ಯವಸ್ಥೆಯೂ ಸುಗಮವಾಗಿದೆ. ಗಂಡು ಚಿರತೆ ಓಬನ್ ನ್ನು ನಿನ್ನೆ ಬೆಳಿಗ್ಗೆ ಹೆಣ್ಣು ಚಿರತೆ ಆಶಾವನ್ನು ಸಂಜೆ ವೇಳೆಗೆ ತೆರೆದ ಅರಣ್ಯದಲ್ಲಿ ಬಿಡಲಾಯಿತು ಎಂದು ವಿಭಾಗೀಯ ಅರಣ್ಯಾಧಿಕಾರಿ ಪ್ರಕಾಶ್ ಕುಮಾರ್ ವರ್ಮಾ ತಿಳಿಸಿದ್ದಾರೆ. ಅದೇ ರೀತಿ ಇತರ ಚಿರತೆಗಳನ್ನೂ ಒಂದೊಂದಾಗಿ ಆವರಣದಿಂದ ಬಿಡಲಾಗುವುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

SCROLL FOR NEXT