ದೇಶ

ತುಳಿತದಿಂದ ನವಜಾತ ಶಿಶು ಸಾವು: ಐವರು ಪೊಲೀಸರನ್ನು ಅಮಾನತು ಮಾಡಿದ ಜಾರ್ಖಂಡ್ ಸರ್ಕಾರ 

Ramyashree GN

ರಾಂಚಿ: ಪೊಲೀಸ್ ತಂಡವೊಂದು ನವಜಾತ ಶಿಶುವನ್ನು ತುಳಿದು ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ತ್ವರಿತ ಕ್ರಮ ಕೈಗೊಂಡಿರುವ ಜಾರ್ಖಂಡ್ ಸರ್ಕಾರ ಐವರು ಪೊಲೀಸರನ್ನು ಅಮಾನತುಗೊಳಿಸಿದೆ. ಹಲ್ಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪಿಯ ಮನೆ ಮೇಲೆ ಬುಧವಾರ ಗಿರಿದಿಹ್ ಜಿಲ್ಲೆಯಲ್ಲಿ ಪೊಲೀಸರು ದಾಳಿ ನಡೆಸುತ್ತಿದ್ದರು.

ದಾಳಿ ನಡೆಸಿದ ತಂಡದ ವಿರುದ್ಧ ನರಹತ್ಯೆಗೆ ಸಂಬಂಧಿಸಿದ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ದೇವ್ರಿ ಪೋಲಿಸ್ ಠಾಣೆಯಲ್ಲಿ ಸೆಕ್ಷನ್ 304ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಮತ್ತು ಮನೆ ಮೇಲೆ ದಾಳಿ ಮಾಡಲು ಹೋದ ಇನ್‌ಸ್ಪೆಕ್ಟರ್ ಸೇರಿದಂತೆ ಎಲ್ಲಾ ಐವರು ಪೊಲೀಸರನ್ನು ಅಮಾನತುಗೊಳಿಸಲಾಗಿದೆ.

'ರಜೆಯಲ್ಲಿದ್ದ ದೇವ್ರಿ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಯನ್ನೂ ಅಮಾನತುಗೊಳಿಸಲಾಗಿದೆ ಎಂದು ಗಿರಿದಿಹ್ ಎಸ್ಪಿ ಅಮಿತ್ ರೇಣು ತಿಳಿಸಿದ್ದಾರೆ. ಮೃತ ಮಗುವಿನ ಕುಟುಂಬದ ಹೇಳಿಕೆ ಆಧಾರದ ಮೇಲೆ ದೇವ್ರಿ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.

ಈ ಮಧ್ಯೆ, ಗುರುವಾರ ಈ ಬಗ್ಗೆ ತನಿಖೆ ನಡೆಸಲು ಕೊಶೋಗೋಡುಗಿ ಗ್ರಾಮಕ್ಕೆ ತೆರಳಿದ್ದ ಪೊಲೀಸ್ ತಂಡದ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿ, ಭೇಟಿ ನೀಡಿದ ಸಬ್ ಇನ್ಸ್‌ಪೆಕ್ಟರ್ ಪ್ರಕರಣದ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ಅವರನ್ನು ಎಳೆದೊಯ್ದಿದ್ದಾರೆ. ಈ ವಿಷಯವನ್ನು ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರ ಗಮನಕ್ಕೆ ತರಲಾಗಿದೆ.

SCROLL FOR NEXT