ಪ್ರಿಯಾಂಕಾ ಗಾಂಧಿ 
ದೇಶ

ಹುತಾತ್ಮ ಪ್ರಧಾನಿ ಪುತ್ರ ದೇಶವನ್ನು ಅವಮಾನಿಸಲು ಎಂದಿಗೂ ಸಾಧ್ಯವಿಲ್ಲ: ರಾಹುಲ್ ಗಾಂಧಿ ಸಮರ್ಥಿಸಿಕೊಂಡ ಪ್ರಿಯಾಂಕಾ ಗಾಂಧಿ

ರಾಷ್ಟ್ರೀಯ ಏಕತೆಗಾಗಿ ಸಾವಿರಾರು ಕಿಲೋಮೀಟರ್ ನಡೆದು ಹುತಾತ್ಮರಾದ ಪ್ರಧಾನಮಂತ್ರಿಗಳ ಪುತ್ರ ದೇಶವನ್ನು ಎಂದಿಗೂ ಅವಮಾನಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಹೇಳಿದ್ದಾರೆ.

ನವದೆಹಲಿ: ರಾಷ್ಟ್ರೀಯ ಏಕತೆಗಾಗಿ ಸಾವಿರಾರು ಕಿಲೋಮೀಟರ್ ನಡೆದು ಹುತಾತ್ಮರಾದ ಪ್ರಧಾನಮಂತ್ರಿಗಳ ಪುತ್ರ ದೇಶವನ್ನು ಎಂದಿಗೂ ಅವಮಾನಿಸಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಭಾನುವಾರ ಹೇಳಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ವಿರೋಧಿಸಿ ಕಾಂಗ್ರೆಸ್ ರಾಷ್ಟ್ರವ್ಯಾಪಿ ಪ್ರತಿಭಟನೆ ನಡೆಸುತ್ತಿದೆ.

ಇದರಂತೆ ದೆಹಲಿ ಮಹಾತ್ಮಾ ಗಾಂಧಿಯವರ ಸ್ಮಾರಕ ಇರುವ ರಾಜ್‌ಘಾಟ್‌ನಲ್ಲಿ ಸಂಕಲ್ಪ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದ್ದು, ಈ ಸತ್ಯಾಗ್ರಹವನ್ನು ಉದ್ದೇಶಿಸಿ ಪ್ರಿಯಾಂಕಾ ಗಾಂಧಿಯವರು ಮಾತನಾಡಿದ್ದಾರೆ.

ದುರಹಂಕಾರದ ಸರ್ಕಾರ ರಾಹುಲ್ ಗಾಂಧಿಯವರನ್ನು ಚುನಾವಣೆಯಲ್ಲಿ ಸ್ಪರ್ಧಿಸದಂತೆ ಮಾಡುತ್ತಿದೆ. ಇದು ದೇಶಕ್ಕೆ ಹಾಗೂ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಸರ್ಕಾರದ ವಿರುದ್ಧ ಧ್ವನಿ ಎತ್ತುವ ಸಮಯ ಬಂದಿದೆ. ನನ್ನ ಕುಟುಂಬದ ರಕ್ತ ಈ ದೇಶದಲ್ಲಿ ಪ್ರಜಾತಂತ್ರವನ್ನು ಉಳುಮೆ ಮಾಡಿದೆ. ಈ ದೇಶದ ಪ್ರಜಾಪ್ರಭುತ್ವಕ್ಕಾಗಿ ನಾವು ಏನು ಬೇಕಾದರೂ ಮಾಡಲು ಸಿದ್ಧರಿದ್ದೇವೆ. ಕಾಂಗ್ರೆಸ್ನ ಮಹಾನ್ ನಾಯಕರು ಈ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಅಡಿಪಾಯ ಹಾಕಿದರು. ರಾಹುಲ್ ಗಾಂಧಿ "ಹುತಾತ್ಮರಾದ ಪ್ರಧಾನಮಂತ್ರಿಗಳ ಮಗ". ನೆಹರು-ಗಾಂಧಿ ಕುಟುಂಬವನ್ನು ಕೂಡ ಬಿಡದೆ ಬಿಜೆಪಿ ಪ್ರತಿದಿನ ರಾಹುಲ್‌ನನ್ನು ಅವಮಾನಿಸುತ್ತಿದೆ, ರಾಹುಲ್ ನನ್ನು ದೇಶದ್ರೋಹಿ ಮತ್ತು ಮೀರ್ ಜಾಫರ್ ಎಂದು ಕರೆಯುತ್ತೀರಿ, ಅವರ ತಾಯಿಯನ್ನು ಅವಮಾನಿಸುತ್ತೀರಿ. ನಿಮ್ಮ ಮಂತ್ರಿಗಳು ಸಂಸತ್ತಿನಲ್ಲಿ ನನ್ನ ತಾಯಿಯನ್ನು ಅವಮಾನಿಸುತ್ತಾರೆ. ನಿಮ್ಮ ಸಿಎಂ ಒಬ್ಬರು ರಾಹುಲ್ ಗಾಂಧಿಗೆ ಅವರ ತಂದೆ ಯಾರೆಂದು ತಿಳಿದಿಲ್ಲ ಎನ್ನುತ್ತಾರೆ, ಆದರೆ ಅಂತಹವರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಡಿಸಿದರು.

ಇಂತಹ ಹೇಳಿಕೆಗಳ ನೀಡವವರನ್ನು ಸಂಸತ್ತಿನಿಂದ ಅನರ್ಹಗೊಳಿಸುವುದಿಲ್ಲ, ಜೈಲಿಗೆ ಕಳುಹಿಸುವುದಿಲ್ಲ ಹಾಗೂ  ಅವರನ್ನು ವರ್ಷಗಟ್ಟಲೆ ಚುನಾವಣೆಗೆ ಸ್ಪರ್ಧಿಸದಂತೆ ತಡೆಯಲಾಗಿಲ್ಲ, ಅವರು ನನ್ನ ಕುಟುಂಬವನ್ನು ಸಾಕಷ್ಟು ಬಾರಿ ಅವಮಾನಿಸಿದ್ದಾರೆ, ಇಷ್ಟಾದರೂ ನಾವು ಮೌನವಾಗಿದ್ದೆವು. ಆದರೆ, ಇನ್ನು ಮುಂದೆ ಮೌನವಾಗಿರುವುದಿಲ್ಲ ಎಂದು ಹೇಳಿದರು.

ದೇಶದ ಸಂಪತ್ತನ್ನು ಲೂಟಿ ಮಾಡಿ ಒಬ್ಬರಿಗೆ ನೀಡಲಾಗುತ್ತಿದೆ, ಈ ಸಂಪತ್ತು ಜನರಿಗೆ ಸೇರಿದ್ದು, ಅದನ್ನು ಯಾರೂ ಕಸಿದುಕೊಳ್ಳಲು ಸಾಧ್ಯವಿಲ್ಲ. “ಅಹಂಕಾರಿ ಸರ್ವಾಧಿಕಾರಿಗಳು ನಾವು ಎತ್ತುವ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಾಗದಿದ್ದಾಗ, ಪ್ರಶ್ನೆಗಳನ್ನು ಕೇಳುವವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ. ಇಡೀ ಸಚಿವ ಸಂಪುಟ, ಸರ್ಕಾರ ಮತ್ತು ಸಂಸದರು ಒಬ್ಬ ವ್ಯಕ್ತಿಯನ್ನು ಉಳಿಸಲು ಪ್ರಯತ್ನಿಸುತ್ತಿದ್ದಾರೆ, ವಿಚಾರಣೆ ನಡೆಸುತ್ತಿಲ್ಲ. ಈ ಅದಾನಿ ಯಾರು, ಅವರ ಹೆಸರು ಸುದ್ದಿಯಾಗುತ್ತಿದ್ದಂತೆಯೇ ಎಲ್ಲರೂ ಏಕೆ ಬೆಂಬಲಕ್ಕೆ ಬರುತ್ತಾರೆ? ಎಂದು ಪ್ರಶ್ನಿಸಿದರು.

ಬಳಿಕ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಅವರ ಭಾರತ್ ಜೋಡೋ ಯಾತ್ರೆಯಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದನ್ನು ಸ್ಮರಿಸಿದ ಪ್ರಿಯಾಂಕಾ ಗಾಂಧಿ, ‘ದೇಶವನ್ನು ಒಗ್ಗೂಡಿಸಲು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ನಡೆದಾಡುವ ವ್ಯಕ್ತಿ ದೇಶವನ್ನು ಅವಮಾನಿಸುತ್ತಾನೆಯೇ? ರಾಹುಲ್ ಗಾಂಧಿಯವರು ಬಡವರು, ಯುವಕರು ಮತ್ತು ಮಹಿಳೆಯರು ತಮ್ಮ ಹಕ್ಕುಗಳನ್ನು ಪಡೆಯಬೇಕೆಂದು ಬಯಸುತ್ತಾರೆ. ದೊಡ್ಡ ವ್ಯಕ್ತಿಗಳೊಂದಿಗೆ ಕೈಜೋಡಿಸಿ, ಸ್ನೇಹಿತನಾಗಲು ಬಯಸುವುದಿಲ್ಲ. ರಾಹುಲ್ ಗಾಂಧಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾನಿಲಯಗಳಾದ ಹಾರ್ವರ್ಡ್ ಮತ್ತು ಕೇಂಬ್ರಿಡ್ಜ್‌ನಲ್ಲಿ ಓದಿದ್ದಾರೆ. ಆದರೆ, ಅವರನ್ನು "ಪಪ್ಪು" ಎಂದು ಕರೆಯುತ್ತಾರೆ. ರಾಹುಲ್ ಪಪ್ಪು ಅಲ್ಲ, ಆತನೊಂದಿಗೆ ಲಕ್ಷಾಂತರ ಜನರು ನಡೆಯುತ್ತಿದ್ದಾರೆ ಎಂಬ ವಿಚಾರ ತಿಳಿದಾಗ, ಬಿಜೆಪಿ ನಾಯಕರು ವಿಚಲಿತರಾದರು.

ನನ್ನ ವಿರುದ್ಧ ಕೇಸು ದಾಖಲಿಸಿ, ನನ್ನನ್ನು ಜೈಲಿಗೆ ಹಾಕಿ, ಆದರೆ ಭಾರತದ ಪ್ರಧಾನಿ ಒಬ್ಬ ಹೇಡಿ. ಅವರು ಅಧಿಕಾರದ ಹಿಂದೆ ಅಡಗಿ ಕುಳಿತಿದ್ದಾರೆ. ದುರಹಂಕಾರಿ. ಆದರೆ, ಈ ದೇಶದ ಸಂಪ್ರದಾಯವೆಂದರೆ ದುರಹಂಕಾರಿ ರಾಜನಿಗೆ ಜನರು ಉತ್ತರ ನೀಡುವುದು. ದೇಶವು ದುರಹಂಕಾರಿ ರಾಜನನ್ನು ಗುರ್ತಿಸುತ್ತದೆ. ಸತ್ಯಾಸತ್ಯತೆಗಳು ಈ ದೇಶಕ್ಕೆ ತಿಳಿದಿದೆ ಎಂದರು.

"ಪ್ರಜಾಪ್ರಭುತ್ವ ಅಪಾಯದಲ್ಲಿದೆ" ಎಂಬುದನ್ನು ಅರಿತು ಮಾಧ್ಯಮಗಳು ತಮ್ಮ ಜವಾಬ್ದಾರಿಗಳನ್ನು ಅರ್ಥ ಮಾಡಿಕೊಳ್ಳಬೇಕು. ಪ್ರಶ್ನಿಸುವವರನ್ನು ಎಂಟು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ತಡೆದರೆ ಅದು ದೇಶಕ್ಕೆ ಅಥವಾ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ಇದರ ವಿರುದ್ಧ ಒಗ್ಗೂಡಿ ಧ್ವನಿ ಎತ್ತುವ ಸಮಯ ಬಂದಿದೆ. ಭಯ ಪಡದಿರಿ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Kabaddi World Cup 2025: ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ, ಸತತ 2ನೇ ಬಾರಿಗೆ ಪ್ರಶಸ್ತಿ ಗೆದ್ದ ಭಾರತ

ಆಫ್ರಿಕಾದಲ್ಲಿ ಜ್ವಾಲಾಮುಖಿ ಸ್ಫೋಟ: ಭಾರತದತ್ತ ಬರುತ್ತಿರುವ ಬೂದಿ ಹೊಗೆ, ವಿಮಾನಗಳ ಹಾರಾಟಕ್ಕೆ ಅಡ್ಡಿ

Kabaddi World Cup 2025: ವಿಶ್ವಕಪ್ ಗೆದ್ದ ಭಾರತದ ವನಿತೆಯರಿಗೆ ಪ್ರಧಾನಿ ಮೋದಿ, ಅಮಿತ್ ಶಾ ಶ್ಲಾಘನೆ

ದೇವರ ಮೊರೆ ಹೋದ ಡಿಕೆಶಿ ಬೆಂಬಲಿಗರು: ಅಯ್ಯಪ್ಪ ಮಾಲಾಧಾರಿಗಳ ವಿಶೇಷ ಪೂಜೆ; ಗಣಪತಿ ದೇವಾಲಯಲ್ಲಿ ಈಡುಗಾಯಿ ಸೇವೆ!

ಎತ್ತಿನಹೊಳೆ ಯೋಜನೆಗೆ ಕೇಂದ್ರ ಸರ್ಕಾರವೇ ಅಡ್ಡಿ ಸೃಷ್ಟಿಸುತ್ತಿದೆ: DCM ಡಿ.ಕೆ. ಶಿವಕುಮಾರ್

SCROLL FOR NEXT