ದೇಶ

ನವದೆಹಲಿ: ಏಪ್ರಿಲ್ 22 ರೊಳಗೆ ಅಧಿಕೃತ ಬಂಗಲೆ ಖಾಲಿ ಮಾಡುವಂತೆ ರಾಹುಲ್ ಗಾಂಧಿಗೆ ಸೂಚನೆ

Nagaraja AB

ನವದೆಹಲಿ: ಅನರ್ಹಗೊಂಡ ಲೋಕಸಭಾ ಸದಸ್ಯ ರಾಹುಲ್ ಗಾಂಧಿ ಅವರಿಗೆ ನೀಡಲಾದ ಅಧಿಕೃತ ಬಂಗಲೆಯನ್ನು ಏಪ್ರಿಲ್ 22 ರೊಳಗೆ ಖಾಲಿ ಮಾಡುವಂತೆ ಸೂಚಿಸಲಾಗಿದೆ ಎಂದು ಅಧಿಕೃತ ಮೂಲಗಳು ಸೋಮವಾರ  ತಿಳಿಸಿವೆ. 

ಕಳೆದ ವಾರ ಅನರ್ಹತೆಯ ನೋಟಿಸ್ ನೀಡಿದ ನಂತರ 12 ತುಘಲಕ್ ಮಾರ್ಗದ ಬಂಗಲೆಯನ್ನು ಖಾಲಿ ಮಾಡುವಂತೆ ಗಾಂಧಿ ಅವರಿಗೆ ಲೋಕಸಭೆಯ ವಸತಿ ಸಮಿತಿಯಿಂದ ನೋಟಿಸ್ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾನಹಾನಿ ಹೇಳಿಕೆ ಪ್ರಕರಣದಲ್ಲಿ  ಗುಜರಾತ್‌ನ ಸ್ಥಳೀಯ ನ್ಯಾಯಾಲಯ ಮಾರ್ಚ್ 23 ರಂದು ಗಾಂಧಿಯನ್ನು ದೋಷಿ ಎಂದು ಘೋಷಿಸಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. 

ಅನರ್ಹಗೊಂಡ ಲೋಕಸಭಾ ಸದಸ್ಯರು ಸದಸ್ಯತ್ವವನ್ನು ಕಳೆದುಕೊಂಡ ಒಂದು ತಿಂಗಳೊಳಗೆ ಅಧಿಕೃತ ಬಂಗಲೆಯನ್ನು ಖಾಲಿ ಮಾಡಬೇಕು ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆ ಬಂಗಲೆಯಲ್ಲಿಯೇ ಉಳಿಯಲು ರಾಹುಲ್ ಗಾಂಧಿ ವಸತಿ ಸಮಿತಿಗೆ ಪತ್ರ ಬರೆಯಬಹುದು, ಆ ಮನವಿಯನ್ನು ಸಮಿತಿಯೂ ಪರಿಗಣಿಸಬಹುದು ಎಂದು ಮತ್ತೋರ್ವ ಅಧಿಕಾರಿ ತಿಳಿಸಿದ್ದಾರೆ. 

SCROLL FOR NEXT