ದೇಶ

ಶಿಮ್ಲಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಕಾಂಗ್ರೆಸ್ ಕ್ಲೀನ್ ಸ್ವೀಪ್, 24 ವಾರ್ಡ್ ಗಳಲ್ಲಿ ಗೆಲುವು

Nagaraja AB

ಶಿಮ್ಲಾ: ಶಿಮ್ಲಾ ಮಹಾನಗರ ಪಾಲಿಕೆ (ಎಸ್‌ಎಂಸಿ) ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್ ಒಟ್ಟು 34 ವಾರ್ಡ್‌ಗಳ ಪೈಕಿ 24 ವಾರ್ಡ್‌ಗಳನ್ನು ಮೂರನೇ ಎರಡರಷ್ಟು ಬಹುಮತದೊಂದಿಗೆ ಗೆಲ್ಲುವ ಮೂಲಕ  ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದೆ. ಬಿಜೆಪಿ ಒಂಬತ್ತು ವಾರ್ಡ್‌ಗಳಲ್ಲಿ ಗೆದಿದ್ದರೆ, ಸಿಪಿಐ-ಎಂ ಕೇವಲ ಒಂದು ವಾರ್ಡ್ನಲ್ಲಿ  ಗೆಲ್ಲುವಲ್ಲಿ ಯಶಸ್ವಿಯಾಗಿದೆ ಎಂದು ಶಿಮ್ಲಾ ಡೆಪ್ಯುಟಿ ಕಮಿಷನರ್ ಆದಿತ್ಯ ನೇಗಿ ಹೇಳಿದ್ದಾರೆ. 

ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ತಲಾ 34, ಸಿಪಿಐ-ಎಂ ನಾಲ್ಕು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು. ಮಂಗಳವಾರ ನಡೆದ ಎಸ್‌ಎಂಸಿ ಚುನಾವಣೆಯಲ್ಲಿ 21 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ ಆಮ್ ಆದ್ಮಿ ಪಕ್ಷ (ಎಎಪಿ) ಹೀನಾಯ ಸೋಲು ಕಂಡಿದೆ. ಎಲ್ಲಾ ಒಂಬತ್ತು ಸ್ವತಂತ್ರರು ಕೂಡ ಸೋಲು ಕಂಡಿದ್ದಾರೆ.

ಒಟ್ಟು 102 ಸ್ಪರ್ಧಿಗಳು ಚುನಾವಣಾ ಕಣದಲ್ಲಿದ್ದರು. ಡಿಸೆಂಬರ್ 2022 ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 68 ಸ್ಥಾನಗಳಲ್ಲಿ 40 ಸ್ಥಾನಗಳನ್ನು ಗೆದ್ದುಕೊಂಡಿತ್ತು. 2017 ರ ಎಸ್‌ಎಂಸಿ ಚುನಾವಣೆಯಲ್ಲಿ, 32 ವರ್ಷಗಳಲ್ಲಿ ಬಿಜೆಪಿ  ಮೊದಲ ಬಾರಿಗೆ 17 ವಾರ್ಡ್ ಗಳಲ್ಲಿ ಗೆಲುವು ಸಾಧಿಸುವ ಮೂಲಕ ಕಾಂಗ್ರೆಸ್‌ನಿಂದ ಅಧಿಕಾರ ಕಸಿದುಕೊಂಡಿತ್ತು. ಕಾಂಗ್ರೆಸ್ 12, ಸಿಪಿಐ-ಎಂ 1 ಮತ್ತು ಉಳಿದ ನಾಲ್ಕು ವಾರ್ಡ್‌ಗಳನ್ನು ಸ್ವತಂತ್ರ ಅಭ್ಯರ್ಥಿಗಳು ವಶಪಡಿಸಿಕೊಂಡಿದ್ದರು.

SCROLL FOR NEXT