ದೇಶ

'ದಿ ಕೇರಳ ಸ್ಟೋರಿ' ತಡೆಗೆ ಕೇರಳ ಹೈಕೋರ್ಟ್ ನಕಾರ

Srinivas Rao BV

ತಿರುವನಂತಪುರಂ: ವಿವಾದಕ್ಕೆ ಗ್ರಾಸವಾಗಿರುವ ಬಹುಭಾಷೆ ಸಿನಿಮಾ ದಿ ಕೇರಳ ಸ್ಟೋರಿಗೆ ತಡೆ ನೀಡುವುದಕ್ಕೆ ಕೇರಳ ಹೈಕೋರ್ಟ್ ನಿರಕಾರಿಸಿದೆ.

ಕೇರಳದಲ್ಲಿ ಇಸ್ಲಾಮ್ ಗೆ ಮತಾಂತರವಾದ 32,000 ಮಹಿಳೆಯರ ಕಥೆ ಇದಾಗಿದ್ದು, ನಿರ್ದಿಷ್ಟ ಸಮುದಾಯದ ವಿರುದ್ಧವಾಗಿ ಸಿನಿಮಾ ಮಾಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಿನಿಮಾ ಟೀಸರ್ ಸಾಕಷ್ಟು ಚರ್ಚೆಗೆ ಗುರಿಯಾಗಿತ್ತು.  ಆದರೆ ಕೇರಳ ಹೈಕೋರ್ಟ್ ಸಿನಿಮಾ ಟೀಸರ್ ಯಾವುದೇ ಸಮುದಾಯದ ವಿರುದ್ಧವಾಗಿಲ್ಲ ಎಂದು ಹೇಳಿದ್ದು, ಸಿನಿಮಾಗೆ ತಡೆ ನೀಡಲು ನಿರಾಕರಿಸಿದೆ.

ನ್ಯಾ. ನಗರೇಶ್ ಹಾಗೂ ಸೋಫಿ ಥಾಮಸ್ ಅವರಿದ್ದ ಪೀಠದೆದುರು ಸಿನಿಮಾ ನಿರ್ಮಾಪಕರು ಮನವಿ ಮಾಡಿದ್ದು, ಟೀಸರ್ ನಲ್ಲಿ ಕೇರಳದ 32,000 ಮಹಿಳೆಯರು ಮತಾಂತರವಾಗಿ ಭಯೋತ್ಪಾದಕ ಸಂಘಟನೆಗಳನ್ನು ಸೇರಿದ್ದರು ಎಂಬ ಹೇಳಿಕೆಯನ್ನು ಹಾಗೆಯೇ ಉಳಿಸಿಕೊಳ್ಳುವ ಉದ್ದೇಶವಿಲ್ಲ ಎಂದು ಹೇಳಿದರು.

ಆದರೆ ನ್ಯಾಯಮೂರ್ತಿಗಳು ಟ್ರೈಲರ್ ಬಗ್ಗೆ ಮಾತನಾಡಿದ್ದು, ಟ್ರೈಲರ್ ನ್ನು ನೋಡಿದರೆ, ಒಟ್ಟಾರೆಯಾಗಿ ನಿರ್ದಿಷ್ಟ ಸಮುದಾಯಕ್ಕೆ ಅವಮಾನ ಮಾಡುವ ರೀತಿಯಲ್ಲಾಗಲೀ, ನಿರ್ದಿಷ್ಟ ಸಮುದಾಯದ ವಿರುದ್ಧವಾಗಲೀ ಇರುವಂತೆ ಕಂಡುಬಂದಿಲ್ಲ" ಎಂದು ಹೇಳಿದ್ದಾರೆ.

ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಶನ್ (CBFC) ಚಲನಚಿತ್ರವನ್ನು ಪರಿಶೀಲಿಸಿದೆ ಮತ್ತು ಇದು ಸಾರ್ವಜನಿಕ ಪ್ರದರ್ಶನಕ್ಕೆ ಸೂಕ್ತವಾಗಿದೆ ಎಂದು ನ್ಯಾಯಾಲಯ ಹೇಳಿದೆ.

SCROLL FOR NEXT