ದೇಶ

ಜಮ್ಮು-ಕಾಶ್ಮೀರ ಪರಿಸ್ಥಿತಿಯ ಬಗ್ಗೆ ಜಿ20 ಗಮನಹರಿಸಬೇಕು: ಕಾಂಗ್ರೆಸ್

Srinivas Rao BV

ಶ್ರೀನಗರ: 'ಜಿ-20 ಸಭೆ ನಡೆಸುವ ಮೂಲಕ ಜಮ್ಮು-ಕಾಶ್ಮೀರದಲ್ಲಿ ಸಹಜ ಸ್ಥಿತಿ ಸ್ಥಾಪನೆಯಾಗಿದೆ ಎಂಬುದನ್ನು ತೋರಿಸಲು ಸರ್ಕಾರ ಬಯಸಿತ್ತು. ಆದರೆ ಕೇಂದ್ರಾಡಳಿತ ಪ್ರದೇಶದಲ್ಲಿ ತುರ್ತು ಪರಿಸ್ಥಿತಿಯಂತಹ ಸ್ಥಿತಿ ಇದೆ ಎಂದು ವಿಪಕ್ಷ ಕಾಂಗ್ರೆಸ್- ಪಿಡಿಪಿ ಆರೋಪಿಸಿವೆ.

ಜಮ್ಮು-ಕಾಶ್ಮೀರದಲ್ಲಿ ಜಿ-20 ಸಭೆಯಲ್ಲಿ ಭಾಗಿಯಾಗುತ್ತಿರುವ ದೇಶಗಳು ಇಲ್ಲಿನ ಸ್ಥಿತಿಗತಿಗಳ ಬಗ್ಗೆ ಗಮನ ಹರಿಸಬೇಕು.ಇಲ್ಲಿ ಪ್ರಜಾಪ್ರಭುತ್ವವನ್ನು ಅಳಿಸಿಹಾಕಲಾಗುತ್ತಿದ್ದು ಬಿಜೆಪಿ ತುರ್ತು ಪರಿಸ್ಥಿತಿಯಂತಹ ವಾತಾವರಣವನ್ನು ಸೃಷ್ಟಿಸಿದೆ ಎಂದು ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿಕಾರ್ ರಸೂಲ್ ವನಿ ಆರೋಪಿಸಿದ್ದಾರೆ. 

ಸರ್ಕಾರ ನಗರದಲ್ಲಿ ರಸ್ತೆಗಳನ್ನು ಹಾಳುಗೆಡವಿದೆ ಆದರೆ ಈಗ ಜಿ-20 ಪ್ರತಿನಿಧಿಗಳ ಮನಗೆಲ್ಲಲು ಹೋರ್ಡಿಂಗ್ ಗಳನ್ನು ಹಾಕಲಾಗುತ್ತಿದೆ ಎಂದು ಪಿಡಿಪಿ ಹಾಗೂ ಕಾಂಗ್ರೆಸ್ ಆರೋಪಿಸಿವೆ. 

SCROLL FOR NEXT