ದೇಶ

ರಾಷ್ಟ್ರಪತಿಗಳ ಹೆಲಿಕಾಫ್ಟರ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ್ದ ಫಾರ್ಮಸಿಸ್ಟ್ ಅಮಾನತು

Srinivas Rao BV

ಒಡಿಶಾ: ಒಡಿಶಾದಲ್ಲಿ ದ್ರೌಪದಿ ಮುರ್ಮು ಅವರ ಕಾರ್ಯಕ್ರಮದಲ್ಲಿ ವಿದ್ಯುತ್ ಕಡಿತವಾದ ಘಟನೆ ಚರ್ಚೆಯಲ್ಲಿರುವಾಗಲೇ, ರಾಷ್ಟ್ರಪತಿಗಳ ಹೆಲಿಕಾಫ್ಟರ್ ನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ  ಫಾರ್ಮಸಿಸ್ಟ್ ಓರ್ವನನ್ನು ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಅಮಾನತುಗೊಳಿಸಿದ್ದಾರೆ.
 
ಸಿಡಿಎಂಒ ಡಾ. ರುಪಭಾನು ಮಿಶ್ರ ಫಾರ್ಮಸಿಸ್ಟ್  ಜಶೋಬಂತ ಬೆಹೆರಾ ಎಂಬುವವರನ್ನು ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಕ್ಕೆ ಅಮಾನತು ಮಾಡಿದ್ದಾರೆ. ಜಶೋಬಂದ ಬೆಹೆರಾ ರಾಷ್ಟ್ರಪತಿಗಳ ಹೆಲಿಕಾಫ್ಟರ್ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಅದನ್ನು ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಾಕಿದ್ದರು.

ಮೇ 5 ರಂದು ರಾಷ್ಟ್ರಪತಿಗಳು ಸಿಮಿಲಿಪಾಲ್ ರಾಷ್ಟ್ರೀಯ ಉದ್ಯಾನವನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಬೆಹೆರಾ ಅವರನ್ನು ರಾಷ್ಟ್ರಪತಿಗಳ ವೈದ್ಯಕೀಯ ತಂಡದಲ್ಲಿ ನಿಯೋಜಿಸಲಾಗಿತ್ತು.

"ನಾನು ನನ್ನ ಫೇಸ್‌ಬುಕ್ ಖಾತೆಯಲ್ಲಿ ಕೇವಲ ನೆನಪಿಗಾಗಿ ಮತ್ತು ಮೋಜಿಗಾಗಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದೇನೆ, ಬೇರೆ ಉದ್ದೇಶ ನನಗೆ ಇರಲಿಲ್ಲ. ಆದರೆ, ನಾನು ಹೆಲಿಕಾಪ್ಟರ್‌ನ ಕಾವಲು ನಿರತರಾಗಿದ್ದ ಕೆಲವು ವಾಯುಪಡೆಯ ಸಿಬ್ಬಂದಿಯಿಂದ ಮೌಖಿಕ ಅನುಮತಿಯನ್ನು ತೆಗೆದುಕೊಂಡೆ. ಅಂತಹ ಮಹಾನ್ ವ್ಯಕ್ತಿತ್ವ ಅಧ್ಯಕ್ಷೆ ಜಿಲ್ಲೆಗೆ ಬಂದಿದ್ದಾಗ ನಾನು ಹೆಲಿಪ್ಯಾಡ್‌ನಲ್ಲಿ ಕರ್ತವ್ಯದಲ್ಲಿದ್ದದ್ದನ್ನು ನೆನಪಿಸಿಕೊಳ್ಳುವುದಕ್ಕಾಗಿ ಫೋಟೋಗಳನ್ನು ಕ್ಲಿಕ್ಕಿಸಿದ್ದೆ ”ಎಂದು ಫಾರ್ಮಸಿಸ್ಟ್ ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT