ದೇಶ

ಭ್ರಷ್ಟಾಚಾರ ಆರೋಪ: ಜೆಡಿಯು ತೊರೆದಿರುವ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಇಂದು ಬಿಜೆಪಿ ಸೇರ್ಪಡೆ ಸಾಧ್ಯತೆ

Ramyashree GN

ನವದೆಹಲಿ: ಜನತಾ ದಳ (ಯುನೈಟೆಡ್) ಮಾಜಿ ಅಧ್ಯಕ್ಷ ಆರ್‌ಸಿಪಿ ಸಿಂಗ್ ಇಂದು ರಾಷ್ಟ್ರ ರಾಜಧಾನಿಯಲ್ಲಿ ಭಾರತೀಯ ಜನತಾ ಪಕ್ಷಕ್ಕೆ ಸೇರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

ಪಕ್ಷವು 'ಸ್ಥಿರಾಸ್ತಿಗಳಲ್ಲಿನ ವ್ಯತ್ಯಾಸಗಳಿಗೆ' ಸಂಬಂಧಿಸಿದ ಭ್ರಷ್ಟಾಚಾರ ಆರೋಪಗಳ ಕುರಿತು ಉತ್ತರವನ್ನು ಕೋರಿದ ಬಳಿಕ ಕಳೆದ ವರ್ಷ ಆಗಸ್ಟ್‌ನಲ್ಲಿ ಆರ್‌ಸಿಪಿ ಸಿಂಗ್ ಅವರು ಜೆಡಿಯುನಿಂದ ನಿರ್ಗಮಿಸುವುದಾಗಿ ಘೋಷಿಸಿದರು. 

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಜೆಡಿಯು ತೊರೆದ ಮಾಜಿ ಕೇಂದ್ರ ಸಚಿವ ಆರ್‌ಸಿಪಿ ಸಿಂಗ್ ಅವರನ್ನು ಟೀಕಿಸಿದ್ದರು. ಪಕ್ಷವು ಅವರಿಗೆ ಜವಾಬ್ದಾರಿಯುತ ಸ್ಥಾನಗಳನ್ನು ನೀಡಿದರೂ ಅವರು ಬಹಳಷ್ಟು 'ಅವ್ಯವಸ್ಥೆಗೊಳಿಸಿದ್ದಾರೆ' ಎಂದು ದೂರಿದ್ದರು.

'ಅವರು ಬಹಳಷ್ಟು ಗೊಂದಲಕ್ಕೊಳಗಾದರು. ಮೊದಲು ಅವರು ಯಾರಿಗದೆ ತಿಳಿದಿದ್ದರು?. ನಾನು ಅವರನ್ನು ಹೊಸ ಎತ್ತರಕ್ಕೆ ಏರಿಸಿದೆ. 2020ರಲ್ಲಿ ಅವರಿಗೆ ಪಕ್ಷದ ಮುಖ್ಯಸ್ಥರ ಸ್ಥಾನ ನೀಡಿದ್ದೇನೆ. ಪ್ರಮುಖ ಜವಾಬ್ದಾರಿಗಳನ್ನು ನೀಡಲಾಗಿದೆ. ನಾವು ಅವರಿಗೆ ಸಾಕಷ್ಟು ಗೌರವ ನೀಡಿದ್ದೇವೆ. ಅವರು ಕೇಂದ್ರದಲ್ಲಿ ಸಚಿವರಾದಾಗ ಮಾತ್ರ ನಾವು ಪಕ್ಷದ ಮುಖ್ಯಸ್ಥ ಸ್ಥಾನವನ್ನು ಬಿಟ್ಟು ಕೊಡುವಂತೆ ಕೇಳಿದ್ದೆವು ಮತ್ತು ಲಾಲನ್‌ಜೀ ಅವರಿಗೆ ನೀಡಿದ್ದೆವು. ತಮ್ಮ ಹೇಳಿಕೆಗಳಿಂದ ಪಕ್ಷದ ಜನರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ' ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಆರ್‌ಸಿಪಿ ಸಿಂಗ್ ಅವರನ್ನು ಬಿಹಾರದ ಏಕನಾಥ್ ಶಿಂಧೆ ಮಾಡಲು ಮತ್ತು ಜೆಡಿಯು ಪಕ್ಷವನ್ನು ಪ್ರತ್ಯೇಕಿಸಲು ಭಾರತೀಯ ಜನತಾ ಪಕ್ಷ (ಬಿಜೆಪಿ) ಬಯಸಿದೆ ಎಂದು ಆರೋಪಿಸಿದರು.

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲು ಪ್ರತಿಪಕ್ಷಗಳ ಬೆಂಬಲವನ್ನು ಗಳಿಸುವುದರತ್ತ ಮಾತ್ರ ನಿತೀಶ್ ಕುಮಾರ್ ಅವರ ಗಮನವಿದೆ ಎಂದು ಆರ್‌ಸಿಪಿ ಸಿಂಗ್ ಈ ಹಿಂದೆ ಆರೋಪಿಸಿದ್ದರು.

2020ರಲ್ಲಿ ಅವರು (ನಿತೀಶ್ ಕುಮಾರ್) ಮುಖ್ಯಮಂತ್ರಿಯಾದಾಗಿನಿಂದ ಅವರು ಸಿಎಂ ಜವಾಬ್ದಾರಿಯನ್ನು ನಿರ್ವಹಿಸುತ್ತಿಲ್ಲ. ಬದಲಿಗೆ, ಅವರನ್ನು ಪ್ರಧಾನಿ ಅಭ್ಯರ್ಥಿಯನ್ನಾಗಿ ಮಾಡಲು ವಿರೋಧ ಪಕ್ಷದ ಜನರು ಹೇಗೆ ಬೆಂಬಲಿಸುತ್ತಾರೆ ಎಂಬುದರ ಬಗ್ಗೆ ಅವರು ಹೆಚ್ಚು ಗಮನ ಹರಿಸಲು ಪ್ರಾರಂಭಿಸಿದ್ದಾರೆ ಎಂದು ಅವರು ಹೇಳಿದ್ದರು.

SCROLL FOR NEXT