ದೇಶ

ಸ್ಪ್ಯಾಮ್ ಕರೆ: ಗ್ರಾಹರ ಸುರಕ್ಷತೆ ಹೊಣೆಗಾರಿಕೆ ಸಂಸ್ಥೆಯದ್ದು- ವಾಟ್ಸ್ ಆಪ್ ಗೆ ಸರ್ಕಾರದ ನೊಟೀಸ್

Srinivas Rao BV

ನವದೆಹಲಿ: ಅನಾಮಿಕ, ಅಂತಾರಾಷ್ಟ್ರೀಯ ಸಂಖ್ಯೆಗಳಿಂದ ಗ್ರಾಹಕರಿಗೆ ಸ್ಪ್ಯಾಮ್ ಕರೆಗಳು ಬರುತ್ತಿರುವುದರ ಸಂಬಂಧ ವಾಟ್ಸ್ ಆಪ್ ಗೆ ನೊಟೀಸ್ ಜಾರಿ ಮಾಡುವುದಾಗಿ ಕೇಂದ್ರ ಮಾಹಿತಿ ತಂತ್ರಜ್ಞಾನ ಇಲಾಖೆಯ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. 

ಬಳಕೆದಾರರ ಸುರಕ್ಷತೆಯ ಹೊಣೆಗಾರಿಕೆ ಡಿಜಿಟಲ್ ವೇದಿಕೆಗಳದ್ದೇ ಆಗಿರುತ್ತದೆ ಎಂದು ಸಚಿವರು ಹೇಳಿದ್ದಾರೆ.
 
ಡಿಜಿಟಲ್ ನಾಗರಿಕರ ಸುರಕ್ಷತೆಗೆ ಡಿಜಿಟಲ್ ವೇದಿಕೆಗಳು ಉತ್ತರದಾಯಿಗಳಾಗಿರುತ್ತವೆ. ದುರ್ಬಳಕೆ ಅಥವಾ ಬಳಕೆದಾರರ ಗೌಪ್ಯತೆಯ ಉಲ್ಲಂಘನೆಯ ಪ್ರತಿ ಪ್ರಕರಣಕ್ಕೂ ಸರ್ಕಾರ ಪ್ರತಿಕ್ರಿಯಿಸುತ್ತದೆ ಎಂದು ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.

ಭಾರತದಲ್ಲಿ ವಾಟ್ಸಾಪ್ ಬಳಕೆದಾರರು ಕಳೆದ ಕೆಲವು ದಿನಗಳಿಂದ ಒಳಬರುವ ಅಂತರರಾಷ್ಟ್ರೀಯ ಸ್ಪ್ಯಾಮ್ ಕರೆಗಳಲ್ಲಿ ಭಾರಿ ಏರಿಕೆಯನ್ನು ವರದಿ ಮಾಡಿರುವುದರಿಂದ ಸಚಿವರ ಹೇಳಿಕೆ ಪ್ರಾಮುಖ್ಯತೆ ಪಡೆದುಕೊಂಡಿದೆ.

SCROLL FOR NEXT