ಸಾಂದರ್ಭಿಕ ಚಿತ್ರ 
ದೇಶ

ಮುಂಬೈ: 24 ಕೋಟಿ ರೂ. ಮೌಲ್ಯದ ವಿದೇಶಿ ಸಿಗರೇಟ್ ಜಪ್ತಿ, ಐವರ ಬಂಧನ

ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ ) ಅಂದಾಜು 24 ಕೋಟಿ ರೂಪಾಯಿ ಮೌಲ್ಯದ 1.2 ಕೋಟಿ ವಿದೇಶಿ ಮೂಲದ ಸಿಗರೇಟ್‌ಗಳನ್ನು ಜಪ್ತಿ ಮಾಡಿದೆ ಮತ್ತು ಅವುಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ...

ಮುಂಬೈ: ಮುಂಬೈನ ಕಂದಾಯ ಗುಪ್ತಚರ ನಿರ್ದೇಶನಾಲಯ(ಡಿಆರ್ ಐ ) ಅಂದಾಜು 24 ಕೋಟಿ ರೂಪಾಯಿ ಮೌಲ್ಯದ 1.2 ಕೋಟಿ ವಿದೇಶಿ ಮೂಲದ ಸಿಗರೇಟ್‌ಗಳನ್ನು ಜಪ್ತಿ ಮಾಡಿದೆ ಮತ್ತು ಅವುಗಳ ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಆಮದುದಾರ ಸೇರಿದಂತೆ ಐವರನ್ನು ಬಂಧಿಸಿದೆ. 

ಈ ಸಿಗರೇಟ್‌ಗಳು ಭಾರತೀಯ ಮಾನದಂಡಗಳನ್ನು ಅನುಸರಿಸದ ಕಾರಣ ಭಾರತಕ್ಕೆ ಆಮದು ಮಾಡಿಕೊಳ್ಳುವುದನ್ನು ನಿಷೇಧಿಸಲಾಗಿದೆ ಎಂದು ಡಿಆರ್‌ಐ ಭಾನುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ನಿರ್ದಿಷ್ಟ ಗುಪ್ತಚರ ಮಾಹಿತಿ ಆಧರಿಸಿ, ಕಂಟೇನರ್‌ನಿಂದ ನಿಷೇಧಿತ ವಿದೇಶಿ ಸಿಗರೇಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದನ್ನು ಹೆಚ್ಚಿನ ಕ್ಲಿಯರೆನ್ಸ್‌ಗಾಗಿ ಅರ್ಷಿಯಾ ಮುಕ್ತ ವ್ಯಾಪಾರ ಉಗ್ರಾಣ ವಲಯಕ್ಕೆ(ಎಫ್‌ಟಿಡಬ್ಲ್ಯೂಜೆಡ್) ರವಾನಿಸಲಾಗಿದೆ ಎಂದು ಡಿಆರ್ ಐ ಹೇಳಿದೆ.

ಕಂಟೈನರ್ ಚಲನವಲನದ ಮೇಲೆ ಡಿಆರ್ ಐ ಅಧಿಕಾರಿಗಳು ಪ್ರತ್ಯೇಕ ನಿಗಾ ವಹಿಸಿದ್ದರು.

ಕಂಟೇನರ್ ನವಿ ಮುಂಬೈನ ನ್ಹವಾ ಶೇವಾ ಬಂದರಿನಿಂದ ಹೊರಟ ನಂತರ, ಅದರ ಗಮ್ಯಸ್ಥಾನವನ್ನು ತಲುಪುವ ಮುನ್ನ ಡಿಆರ್ ಐ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

40 ಅಡಿ ಕಂಟೇನರ್‌ನಲ್ಲಿ ಸಂಪೂರ್ಣ ವಿದೇಶಿ ಮೂಲದ ಸಿಗರೇಟ್‌ಗಳನ್ನು ತುಂಬಿರುವುದು ಕಂಡುಬಂದಿದೆ. ಇವು ಭಾರತೀಯ ಮಾನದಂಡಗಳನ್ನು ಅನುಸರಿಸದ ಕಾರಣ ಭಾರತಕ್ಕೆ ಆಮದು ಮಾಡಿಕೊಳ್ಳಲು ನಿಷೇಧಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ತಮಿಳುನಾಡು: TVK ಸರ್ಕಾರ ರಚನೆಗೆ ರಾಜ್ಯಪಾಲರ ಗ್ರೀನ್ ಸಿಗ್ನಲ್, ನಾಳೆ ವಿಜಯ್ ಸಿಎಂ ಆಗಿ ಪದಗ್ರಹಣ!

ಕೊನೆಗೂ ವಿಜಯ್​ಗೆ ಸಿಕ್ತು ಮ್ಯಾಜಿಕ್​ ನಂಬರ್: CPI, VCKಯಿಂದಲೂ ಬೆಂಬಲ; ಶೀಘ್ರ CM ಆಗಿ ದಳಪತಿ ಪ್ರಮಾಣ!

ವಿಜಯ್ ಸಾಧನೆ ಅಚ್ಚರಿ ತಂದಿದೆ, ಆದ್ರೆ ಗ್ಯಾರಂಟಿಗಳಿಗೆ 6-7 ಲಕ್ಷ ಕೋಟಿ ಬೇಕು, ಹಣ ಹೇಗೆ ಹೊಂದಿಸ್ತಾರೆ? ದೇವರೇ ಕಾಪಾಡಬೇಕು: HDK

ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಯ್ತು, ಇನ್ನುಮುಂದೆ ಗೋವು ಕಳ್ಳಸಾಗಣೆ, ಒಳನುಸುಳುವಿಕೆ ಅಸಾಧ್ಯ: ಅಮಿತ್ ಶಾ

ಬೆಂಗಳೂರಿನ ಹೃದಯ ಭಾಗದಲ್ಲಿ ಹೃದಯವಿದ್ರಾವಕ ಘಟನೆ: MG ರಸ್ತೆಯಲ್ಲಿ ಹಿಟ್ ಅಂಡ್ ರನ್‌ಗೆ ವ್ಯಕ್ತಿ ಬಲಿ

SCROLL FOR NEXT