ಮಿರ್ವಾಜಾ ಫಾರೂಕ್ 
ದೇಶ

ಮಿರ್ವಾಜಾ ಫಾರೂಕ್ ಹತ್ಯೆ: 33 ವರ್ಷಗಳ ಬಳಿಕ ಹಿಜ್ಬುಲ್ ನ ಇಬ್ಬರ ಬಂಧನ! 

ಜಮ್ಮು-ಕಾಶ್ಮೀರ ಪೊಲೀಸರು 33 ವರ್ಷಗಳ ಹಿಂದೆ ನಡೆದಿದ್ದ ಕಣಿವೆಯ ಮೌಲ್ವಿ ಮಿರ್ವಾಜಾ ಮೊಹಮ್ಮದ್ ಫರೂಕ್ ಹತ್ಯೆ ಪ್ರಕರಣದ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. 

ಶ್ರೀನಗರ: ಜಮ್ಮು-ಕಾಶ್ಮೀರ ಪೊಲೀಸರು 33 ವರ್ಷಗಳ ಹಿಂದೆ ನಡೆದಿದ್ದ ಕಣಿವೆಯ ಮೌಲ್ವಿ ಮಿರ್ವಾಜಾ ಮೊಹಮ್ಮದ್ ಫರೂಕ್ ಹತ್ಯೆ ಪ್ರಕರಣದ ಸಂಬಂಧ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದಾರೆ. 

ಹಿಜ್ಬುಲ್ ಮುಜಾಹಿದ್ದೀನ್ ದಾಳಿಕೋರರ ಗುಂಡೇಟಿಗೆ ಮಿರ್ವಾಜಾ ಮೊಹಮ್ಮದ್ ಬಲಿಯಾಗಿದ್ದರು.  ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಈಗ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ. 

ಜಮ್ಮು-ಕಾಶ್ಮೀರದ ಸಿಐಡಿ ವಿಭಾಗದ ವಿಶೇಷ ಡಿಜಿ, ಆರ್ ಆರ್ ಸ್ವೈನ್ ಈ ಬಗ್ಗೆ ಮಾಹಿತಿ ನೀಡಿದ್ದು ಎಸ್ಐಎ ಜಾವೇದ್ ಭಟ್ ಹಾಗೂ ಜಹೂರ್ ಭಟ್ ಎಂಬ ಇಬ್ಬರನ್ನು ಬಂಧಿಸಿದೆ ಈ ಇಬ್ಬರೂ 1990 ರ ಮೇ. 21 ರಂದು ಮಿರ್ವಾಜಾ ಫಾರೂಕ್ ಅವರನ್ನು ಹತ್ಯೆ ಮಾಡಿ ಇನ್ನೊಬ್ಬರೊಂದಿಗೆ ಪರಾರಿಯಾಗಿದ್ದರು. 

ಎಲ್ಲಿಂದ ಈ ಇಬ್ಬರನ್ನೂ ಬಂಧಿಸಲಾಗಿದೆ ಎಂಬುದರ ಬಗೆಗಿನ ವಿವರಗಳನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ-ಭಗವಂತನ ಸಂಬಂಧ ಇದೆ; RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿ.ಕೆ ಶಿವಕುಮಾರ್; Video

Tariff ಬೆನ್ನಲ್ಲೇ ಅಮೆರಿಕ ಅಧ್ಯಕ್ಷರಿಗೆ ಯುದ್ಧೋನ್ಮಾದ: "ಯುದ್ಧ ಇಲಾಖೆ" ಬಗ್ಗೆ ಟ್ರಂಪ್ ಒಲವು!

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

Ragigudda Metro ಮೆಟ್ರೋ ನಿಲ್ದಾಣದಲ್ಲಿ ತಪ್ಪಿದ ದುರಂತ, ಆಯತಪ್ಪಿ ಹಳಿ ಮೇಲೆ ಬಿದ್ದ ಸಿಬ್ಬಂದಿ!... ಮುಂದೇನಾಯ್ತು? Video

ಸೌರಭ್ ಭಾರದ್ವಾಜ್ ಮನೆ ಮೇಲೆ ಇಡಿ ದಾಳಿ; ಮೋದಿ ನಕಲಿ ಪದವಿ ಕುರಿತ ಗಮನ ಬೇರೆಡೆ ಸೆಳೆಯಲು ಯತ್ನ ಎಂದ AAP

SCROLL FOR NEXT