ದೇಶ

ನಾರ್ಕೋ-ಭಯೋತ್ಪಾದಕರ ನಂಟು: 9 ರಾಜ್ಯಗಳ 324 ಕಡೆಗಳಲ್ಲಿ ಎನ್ಐಎ ರೇಡ್

Srinivas Rao BV

ನವದೆಹಲಿ: ಭಯೋತ್ಪಾದಕ-ಗ್ಯಾಂಗ್ಸ್ಟರ್-ನಾರ್ಕೋ ನಂಟನ್ನು ಬಯಲಿಗೆಳೆದಿರುವ ಎನ್ಐಎ ಆಪರೇಷನ್ ಧ್ವಸ್ತ್ ಹೆಸರಿನ ಕಾರ್ಯಾಚರಣೆ ಮೂಲಕ 324 ಸ್ಥಳಗಳಲ್ಲಿ ರೇಡ್ ಮಾಡಿದೆ. 

ಪಂಜಾಬ್ ಹಾಗೂ ಹರ್ಯಾಣ ಪೊಲೀಸರು ಎನ್ಐಎ ಗೆ ಸಾಥ್ ನೀಡಿದ್ದರು. 9 ರಾಜ್ಯಗಳು ಹಾಗೂ ಕೇಂದ್ರಾಡಳಿತದ 324 ಸ್ಥಳಗಳಲ್ಲಿ ಈ ದಾಳಿ ನಡೆದಿದೆ 

ಪಂಜಾಬ್, ದೆಹಲಿ, ಹರ್ಯಾಣ, ಉತ್ತರ ಪ್ರದೇಶ, ರಾಜಸ್ಥಾನ, ಮಹಾರಾಷ್ಟ್ರ, ಗುಜರಾತ್, ಚಂಡೀಗಢ, ಮಧ್ಯಪ್ರದೇಶಗಳಲ್ಲಿ ದಾಳಿ ನಡೆದಿದ್ದು 39 ಲಕ್ಷ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳು ಹಾಗೂ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ. ಎನ್ಐಎ 129 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದರೆ, ಪಂಜಾಬ್ ಪೊಲೀಸರು 17 ಜಿಲ್ಲೆಗಳ 143 ಪ್ರದೇಶಗಳಲ್ಲಿ ಹಾಗೂ ಹರ್ಯಾಣ ಪೊಲೀಸರು 10 ಜಿಲ್ಲೆಗಳ 52 ಸ್ಥಳಗಳಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ. 

ಕಾರ್ಯಾಚರಣೆಯಲ್ಲಿ ಹಲವು ಶಂಕಿತ ವ್ಯಕ್ತಿಗಳನ್ನು ಬಂಧಿಸಲಾಗಿದೆ. ಈ ದಾಳಿಗಳು ಭಯೋತ್ಪಾದಕ ಅರ್ಶ್ ದಲ್ಲಾ ಮತ್ತು ಲಾರೆನ್ಸ್ ಬಿಷ್ಣೋಯ್, ಚೆನು ಪೆಹಲ್ವಾನ್, ದೀಪಕ್ ತೀತಾರ್, ಭೂಪಿ ರಾಣಾ, ವಿಕಾಶ್ ಲಾಗರ್ಪುರಿಯಾ, ಆಶಿಶ್ ಚೌಧರಿ, ಗುರುಪ್ರೀತ್ ಸೆಖೋನ್, ದಿಲ್ಪ್ರೀತ್ ಸಿಮ್ರತ್ ಬಾಬಾ ಮತ್ತು ದಿಲ್ಪ್ರೀತ್ ಸಿಮ್ರತ್ ಬಾಬಾ ಅವರಂತಹ ಭಯಾನಕ ದರೋಡೆಕೋರ-ಭಯೋತ್ಪಾದಕ ಸಂಬಂಧವನ್ನು ಬಹಿರಂಗಗೊಳಿಸುವ ಗುರಿಯನ್ನು ಹೊಂದಿವೆ ಎಂದು ಎನ್ಐಎ ಹೇಳಿದೆ. 

SCROLL FOR NEXT