ದೇಶ

ಗಜ ಕಾಳಗಕ್ಕೆ ಬೆಚ್ಚಿ ಬಿದ್ದ ದಟ್ಟಾರಣ್ಯ; ಮದಗಜಗಳ ಕಾದಾಟದ ವಿಡಿಯೋ ವೈರಲ್

Srinivasamurthy VN

ನವದೆಹಲಿ: ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶವು ಅಪಾಯಕಾರಿಯಾಗಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಆನೆಗಳು ಭೂಮಿಯ ಮೇಲಿನ ಅತಿದೊಡ್ಡ ಸಸ್ತನಿಗಳಾಗಿವೆ ಮತ್ತು ಬೃಹತ್ ದೇಹಗಳು, ದೊಡ್ಡ ಕಿವಿಗಳು ಮತ್ತು ಉದ್ದವಾದ ಸೊಂಡಿಲನ್ನು ಹೊಂದಿವೆ. ಅವುಗಳ ಸೊಂಡಿಲಿನ ಎರಡೂ ಬದಿಯಲ್ಲಿರುವ ಬಿಳಿಯ ದಂತಗಳು ಅವುಗಳ ದೈತ್ಯತೆಯನ್ನು ಹೆಚ್ಚಿಸುತ್ತವೆ. 

ಸಾಮಾನ್ಯವಾಗಿ ಆನೆಗಳು ಕೋಪಗೊಳ್ಳದ ಅಥವಾ ಪ್ರಚೋದಿಸದ ಹೊರತು ಸಾಮಾನ್ಯವಾಗಿ ಸೌಮ್ಯವಾಗಿರುತ್ತವೆ. ಆದರೆ ಒಮ್ಮೆ ಅವುಗಳಿಗೆ ಕೋಪ ಬಂದರೆ ಮಾತ್ರ ವಿಧ್ವಂಸ ಗ್ಯಾರಂಟಿ..

ಅದರಲ್ಲೂ ಎರಡು ಕೋಪಗೊಂಡ ಆನೆಗಳು ಮುಖಾಮುಖಿಯಾಗಿ ಬಂದಾಗ, ಫಲಿತಾಂಶವು ಅಪಾಯಕಾರಿಯಾಗಬಹುದು. ಅಂತಹುದೇ ಒಂದು ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿವೆ.

ಎರಡು ದೈತ್ಯ ಆನೆಗಳು ಕ್ರೂರ ಕಾಳಗದಲ್ಲಿ ತೊಡಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದನ್ನು ಭಾರತೀಯ ಅರಣ್ಯ ಅಧಿಕಾರಿ (ಐಎಫ್‌ಎಸ್) ಸುಶಾಂತ ನಂದಾ ಅವರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ.

ಈ ಆನೆಗಳ ಕಾದಾಟಕ್ಕೆ ಕಾರಣದ ಬಗ್ಗೆ ಅರಣ್ಯಾಧಿಕಾರಿ ಮಾಹಿತಿ ನೀಡಿಲ್ಲ. "ಟೈಟಾನ್ಸ್ ಪರಸ್ಪರ ಘರ್ಷಣೆಗಿಳಿದಾಗ, ಅರಣ್ಯವು ನಡುಗುತ್ತದೆ" ಎಂದು ಸೂಕ್ತವಾಗಿ ಶೀರ್ಷಿಕೆ ವಿಡಿಯೋ ಷೇರ್ ಮಾಡಿದ್ದಾರೆ.

ಈ ವಿಡಿಯೋವನ್ನು 28,000 ಕ್ಕೂ ಹೆಚ್ಚು ಬಾರಿ ವೀಕ್ಷಿಸಿದ್ದು, 1,000 ಲೈಕ್‌ಗಳು ಬಂದಿವೆ.  

ವೀಡಿಯೊ ಚಿತ್ರೀಕರಣಗೊಂಡ ಸ್ಥಳ ತಿಳಿದಿಲ್ಲ.. ಆದರೆ ಎರಡು ಆನೆಗಳು ರಸ್ತೆಯ ಮಧ್ಯದಲ್ಲಿ ಕಾದಾಡುತ್ತಿರುವುದು ಕಂಡುಬಂದಿದೆ.

ದೈತ್ಯ ಆನೆಗಳು ತಮ್ಮ ದಂತಗಳನ್ನು ಒಂದೊಕ್ಕೊಂದು ತಿವಿದುಕೊಂಡು ಪರಸ್ಪರ ಹೂಳಿಡುತ್ತಾ ಹಿಂದಕ್ಕೆ ಮುಂದಕ್ಕೆ ತಳ್ಳಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.

ಈ ದೈತ್ಯ ಆನೆಗಳ ಸಂಘರ್ಷ ಮತ್ತು ಶಬ್ದಕ್ಕೆ ಸುತ್ತಮುತ್ತಲ ಪ್ರಾಣಿಗಳು ಅಕ್ಷರಶಃ ಬೆಚ್ಚಿಬಿದ್ದಿದ್ದು, ಆನೆಗಳ ಸಂಘರ್ಷ ನೋಡಿದ ಪಕ್ಷಿಗಳು ಆತಂಕದಿಂದ ಕಿರುಚಾಡುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ.
 

SCROLL FOR NEXT