ಆನ್ ಲೈನ್ ಗೇಮಿಂಗ್ ಮತ್ತು ಚಲನಚಿತ್ರ 
ದೇಶ

ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರಂತೆ!!

ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರೆ ಎಂಬ ಮಹತ್ವದ ಮಾಹಿತಿಯೊಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ನವದೆಹಲಿ: ಭಾರತೀಯರು ಸಿನಿಮಾ ವೀಕ್ಷಣೆಗಿಂತ ಆನ್ ಲೈನ್ ಗೇಮ್ ಗಳಿಗೇ ಹೆಚ್ಚು ಹಣ ವ್ಯಯಿಸುತ್ತಾರೆ ಎಂಬ ಮಹತ್ವದ ಮಾಹಿತಿಯೊಂದು ಸಂಶೋಧನೆಯಿಂದ ಬಹಿರಂಗವಾಗಿದೆ.

ಬಿಸಿನೆಸ್ ಸ್ಯ್ಟಾಂಡರ್ಡ್ (Business Standard) ವರದಿ ಮಾಡಿರುವಂತೆ, Ficci-EY ಬಿಡುಗಡೆ ಮಾಡಿರುವ ಮನರಂಜನಾ (M&E) ವಲಯದ ವರದಿ ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾಗಿದ್ದು, ಈ ವರದಿಯಲ್ಲಿ ಭಾರತದ ಆನ್‌ಲೈನ್ ಗೇಮಿಂಗ್ ಆದಾಯವು 2025 ರ ವೇಳೆಗೆ ಚಿತ್ರೀಕರಿಸಿದ ಮನರಂಜನೆ (ಚಲನಚಿತ್ರ)ಯ ಆದಾಯವನ್ನು ಮೀರುತ್ತದೆ. ಚಿತ್ರೀಕರಿಸಿದ ಮನರಂಜನಾ ವಿಭಾಗದ 2019 ರ ಸಾಂಕ್ರಾಮಿಕ-ಪೂರ್ವ ಆದಾಯವು 19,100 ಕೋಟಿ ರೂ.ಗಳಾಗಿದ್ದು, ಇದೇ ಅವಧಿಯಲ್ಲಿ  ಆನ್‌ಲೈನ್ ಗೇಮಿಂಗ್‌ನ (ರೂ. 6,500 ಕೋಟಿ) ಗಿಂತ ಸುಮಾರು ಮೂರು ಪಟ್ಟು ಹೆಚ್ಚು ಎಂದು ವರದಿ ಹೇಳಿದೆ.

ಕೋವಿಡ್ ಸಾಂಕ್ರಾಮಿಕವು ಚಲನಚಿತ್ರ ಆದಾಯವನ್ನು ಶೇ.62ಪ್ರತಿಶತದಷ್ಟು ಕಡಿಮೆಗೊಳಿಸಿದ್ದು, 19,400 ಕೋಟಿ ಆದಾಯದೊಂದಿಗೆ 2023 ರಲ್ಲಿ ಸಾಂಕ್ರಾಮಿಕ ಪೂರ್ವದ ಮಟ್ಟಕ್ಕೆ ಚೇತರಿಸಿಕೊಳ್ಳಲು ಮಾತ್ರ ಅಂದಾಜಿಸಲಾಗಿದೆ.

ಏತನ್ಮಧ್ಯೆ, ಆನ್‌ಲೈನ್ ಗೇಮಿಂಗ್ ಉದ್ಯಮವು ಬೆಳೆಯುತ್ತಲೇ ಇದ್ದು, ಇದು 2023 ರಲ್ಲಿ ರೂ.16,700 ಕೋಟಿ ಆದಾಯವನ್ನು ಹೊಂದಿದೆ ಎಂದು ಅಂದಾಜಿಸಲಾಗಿದೆ. ಅಂತೆಯೇ ಇದು 2025 ರ ವೇಳೆಗೆ ತನ್ನ ಆದಾಯವನ್ನು ರೂ. 23,100 ಕೋಟಿಗೆ ಹೆಚ್ಚಿಸಿಕೊಳ್ಳುವ ನಿರೀಕ್ಷೆಯಿದೆ.. 

ಚಿತ್ರೀಕರಿಸಿದ ಮನರಂಜನೆಯು ಮುಖ್ಯವಾಗಿ ಥಿಯೇಟರ್ ಬಿಡುಗಡೆಗಳಿಂದ ಹಣವನ್ನು ಒಳಗೊಂಡಿರುತ್ತದೆ. ಆದರೆ ಆನ್ ಲೈನ್ ಗೇಮಿಂಗ್ ಗಳು ನೆಟ್‌ಫ್ಲಿಕ್ಸ್ ಮತ್ತು ಇನ್-ಸಿನಿಮಾ ಜಾಹೀರಾತುಗಳಂತಹ ಪ್ಲಾಟ್‌ಫಾರ್ಮ್‌ಗಳಿಂದ ಪ್ರಸಾರ ಹಕ್ಕುಗಳು ಮತ್ತು ಆದಾಯವನ್ನು ಸಹ ಒಳಗೊಂಡಿದೆ. ಆನ್‌ಲೈನ್ ಗೇಮಿಂಗ್ ರಮ್ಮಿ ಮತ್ತು ಪೋಕರ್ ಮೂಲಕ ವಹಿವಾಟು ಆಧಾರಿತ ಆಟದ ಆದಾಯವನ್ನು ಒಳಗೊಂಡಿರುತ್ತದೆ. ಉಳಿದಂತೆ Esports ಮತ್ತು ಕ್ಯಾಶುಯಲ್ ಗೇಮಿಂಗ್ ಜೊತೆಗೆ ಜಾಹೀರಾತು ಆದಾಯವು ಉಳಿದ ಕೊಡುಗೆಯನ್ನು ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

ಚಲನಚಿತ್ರಗಳ 9.8 ಪ್ರತಿಶತಕ್ಕೆ ಹೋಲಿಸಿದರೆ ಆನ್‌ಲೈನ್ ಗೇಮಿಂಗ್‌ನಲ್ಲಿ ಆಸಕ್ತಿ ಹೆಚ್ಚಾದಂತೆ, ಈ ವಿಭಾಗವು 2025 ರವರೆಗೆ 19.5 ಪ್ರತಿಶತದಷ್ಟು ಸಂಯುಕ್ತ ವಾರ್ಷಿಕ ಬೆಳವಣಿಗೆಯ ದರವನ್ನು ಪ್ರದರ್ಶಿಸುವ ನಿರೀಕ್ಷೆಯಿದೆ ಎಂದು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.  .

ಒಟ್ಟಾರೆ ಮಾಧ್ಯಮ ಮತ್ತು ಮನರಂಜನಾ ವಲಯವು ಡಿಜಿಟಲ್ ಮಾಧ್ಯಮ ಮತ್ತು ಇತರ ವಿಭಾಗಗಳ ಬೆಳವಣಿಗೆಯಿಂದ 10.5 ಶೇಕಡಾ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಮುದ್ರಣ ವಿಭಾಗದಿಂದ ಕನಿಷ್ಠ ಬೆಳವಣಿಗೆ ದಾಖಲಾಗಿದ್ದು, ಒಟ್ಟಾರೆ ಬೆಳವಣಿಗೆಯು ಶೇಕಡಾ 3.7 ಕ್ಕಿಂತ ಕಡಿಮೆ ಇದೆ ಎಂದು ವರದಿಯಲ್ಲಿ ಹೇಳಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ. 50 ರಷ್ಟು ಸುಂಕ ನಾಳೆ ಜಾರಿ, ಅಮೆರಿಕ ಕರಡು ಸೂಚನೆ; ಔಷಧ, ಎಲೆಕ್ಟ್ರಾನಿಕ್ಸ್‌ ವಸ್ತುಗಳಿಗೆ ವಿನಾಯಿತಿ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

'ಶಾಂತಿ ಬೇಕಾದರೆ ಯುದ್ಧಕ್ಕೆ ಸಿದ್ಧರಾಗಿ.. Sudarshan Chakra ವಾಯುರಕ್ಷಣಾ ವ್ಯವಸ್ಥೆಗೆ ಮೂರೂ ಸೇನೆಗಳ ಬೃಹತ್ ಪ್ರಯತ್ನ ಬೇಕು': CDS Chauhan

ಧರ್ಮಸ್ಥಳ ಪ್ರಕರಣ: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

SCROLL FOR NEXT