ದೇಶ

ರೀಲ್ಸ್ ಗಾಗಿ ಗರಿಗಳನ್ನು ಒಂದೊಂದಾಗಿ ಕಿತ್ತ ಯುವಕ; ನರಳಿ ನರಳಿ ನವಿಲು ಸಾವು: ವಿಡಿಯೋ ವೈರಲ್ ಬಳಿಕ ಆರೋಪಿ ಪರಾರಿ

Vishwanath S

ಮಧ್ಯಪ್ರದೇಶದ ಕಟ್ನಿ ಜಿಲ್ಲೆಯಲ್ಲಿ ರಾಷ್ಟ್ರೀಯ ಪಕ್ಷಿ ನವಿಲಿನ ಗರಿಯನ್ನು ಒಂದೊಂದಾಗಿ ಕಿತ್ತಿದ್ದು ಇದೀಗ ನವಿಲು ಮೃತಪಟ್ಟಿದೆ. ನವಿಲಿಗೆ ಚಿತ್ರಹಿಂಸೆ ನೀಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

ಯುವಕನೊಬ್ಬ ನವಿಲಿನ ಗರಿಗಳನ್ನು ಕೀಳುತ್ತಿರುವುದು ಈ ವಿಡಿಯೋದಲ್ಲಿ ತೋರಿಸಲಾಗಿದೆ. ಆತನ ಜೊತೆ ಒಬ್ಬ ಹುಡುಗಿಯೂ ಇದ್ದಾಳೆ. ಈ ವಿಡಿಯೋ ಇದೀಗ ಅರಣ್ಯ ಇಲಾಖೆಗೆ ತಲುಪಿದ್ದು ಈ ಬಗ್ಗೆ ತನಿಖೆ ಆರಂಭಿಸಿದೆ. 

ರೀತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ನವಿಲು ಸಾವು ಪ್ರಕರಣ ವರದಿಯಾಗುತ್ತಿದೆ. ಈ ವಿಷಯದ ಕುರಿತು, ವಿಭಾಗೀಯ ಅರಣ್ಯ ಅಧಿಕಾರಿ(ಡಿಎಫ್‌ಒ) ಗೌರವ್ ಶರ್ಮಾ ಅವರು ಕೆಲವು ದಿನಗಳ ಹಿಂದೆ ಗುಜರಾತ್‌ನ ಎನ್‌ಜಿಒ ಈ ವೀಡಿಯೊವನ್ನು ತನ್ನ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿತ್ತು. ಅದು ಕ್ರಮೇಣ ವೈರಲ್ ಆಗಿತ್ತು.

ವೈರಲ್ ಆಗಿರುವ ವೀಡಿಯೋ ಕುರಿತು ಪರಿಶೀಲನೆ ನಡೆಸಲಾಗಿದೆ ಎಂದು ಡಿಎಫ್‌ಒ ತಿಳಿಸಿದ್ದಾರೆ. ವಿಡಿಯೋದಲ್ಲಿ ಕಂಡ ಬೈಕ್ ನಂಬರ್ ಆಧರಿಸಿ ಯುವಕನನ್ನು ಗುರುತಿಸಲಾಗಿದೆ. ಆರೋಪಿಯ ಹೆಸರು ಅತುಲ್, ಕಟ್ನಿಯ ರೀತಿ ಪ್ರದೇಶದ ನಿವಾಸಿ. ಆರೋಪಿಯನ್ನು ಬಂಧಿಸಲು ತಂಡ ತಲುಪಿದಾಗ ಮನೆಯಲ್ಲಿ ಪತ್ತೆಯಾಗಿರಲಿಲ್ಲ. ಆತನನ್ನು ಬಂಧಿಸಲು ಪೊಲೀಸರ ಸಹಾಯವನ್ನೂ ಪಡೆಯಲಾಗುತ್ತಿದೆ.

ನಾಯಿ ಕೊಂದ ವಿಡಿಯೋ ವೈರಲ್
ಪ್ರಾಣಿ-ಪಕ್ಷಿಗಳ ಜೊತೆ ವಿಧ್ವಂಸಕ ಕೃತ್ಯವೆಸಗುವ ಸುದ್ದಿ ದಿನವೂ ಕೇಳಿ ಬರುತ್ತಿದೆ. ಈ ಹಿಂದೆ ಇದೇ ರೀತಿಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಅಲ್ಲಿ ಕೆಲವರು ನಾಯಿಯನ್ನು ಕೊಲ್ಲುವುದನ್ನು ಕಾಣಬಹುದು. ಈ ವಿಡಿಯೋ ವೈರಲ್ ಆದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಜನರ ಆಕ್ರೋಶ ವ್ಯಕ್ತವಾಗಿತ್ತು. ಬಳಿಕ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕ್ರಮ ಕೈಗೊಂಡಿದ್ದಾರೆ.

ವಾಸ್ತವವಾಗಿ, ಗಾಜಿಯಾಬಾದ್‌ನ ಲೋನಿ ಬಳಿಯ ಟ್ರೋನಿಕಾ ಸಿಟಿಯ ಎಲೈಚಿಪುರ ಪ್ರದೇಶದಲ್ಲಿ ಕೆಲವರು ನಾಯಿಯನ್ನು ಬರ್ಬರವಾಗಿ ಕೊಂದಿದ್ದರು. ವೀಡಿಯೊದಲ್ಲಿ, ಇಬ್ಬರು ನಾಯಿಯನ್ನು ಸರಪಳಿಯಿಂದ ನೇತುಹಾಕಿ ಸಾಯಿಸುತ್ತಿರುವುದು ಕಂಡುಬಂದಿತ್ತು. ಮತ್ತೊಬ್ಬ ಅವನ ಪಕ್ಕದಲ್ಲಿ ನಿಂತು ಈ ವಿಧ್ವಂಸಕ ಕೃತ್ಯವನ್ನು ನೋಡುತ್ತಿದ್ದನು. ಪೊಲೀಸರು ಆ ಯುವಕರನ್ನು ವಿಚಾರಣೆಗೊಳಪಡಿಸಿದಾಗ ತಮ್ಮ ನಾಯಿಗೆ ಬಹಳ ದಿನಗಳಿಂದ ಅನಾರೋಗ್ಯವಿದೆ ಎಂದು ತಿಳಿಸಿದ್ದಾರೆ.

ಪ್ರತಿದಿನ ನಾಯಿ ಅನಾರೋಗ್ಯದಿಂದ ನರಳುವುದನ್ನು ನೋಡಿ ನಮಗೆ ಬೇಸರವಾಗುತ್ತಿತ್ತು. ಅದಕ್ಕೆ ನಾಯಿ ನರಳಿ ಸಾಯಬಾರದೆಂದು ಒಮ್ಮೆಲೇ ಕೊಂದುಬಿಟ್ಟೇವು ಎಂದು ಹೇಳಿದ್ದರು.

SCROLL FOR NEXT