ದೇಶ

73% ಮಹಿಳೆಯರು ಋತುಚಕ್ರದ ರಜೆ ಬಯಸುತ್ತಾರೆ-ಸಮೀಕ್ಷೆಯಲ್ಲಿ ಬಹಿರಂಗ

Srinivas Rao BV

ನವದೆಹಲಿ: ಇತ್ತೀಚಿನ ಅಧ್ಯಯನದ ಪ್ರಕಾರ, ಸುಮಾರು 73 ಪ್ರತಿಶತದಷ್ಟು ಮಹಿಳೆಯರು ಋತುಚಕ್ರದ ರಜೆಯನ್ನು ತೆಗೆದುಕೊಳ್ಳಲು ಕಂಪನಿಗಳು ಅವಕಾಶ ನೀಡಬೇಕೆಂದು ಬಯಸುತ್ತಾರೆ.

86.6 ಪ್ರತಿಶತ ಮಹಿಳೆಯರು ನೈರ್ಮಲ್ಯ ವಿಧಾನಗಳು ಮತ್ತು ಋತುಚಕ್ರ ಸ್ನೇಹಿ ಮೂಲಸೌಕರ್ಯಗಳು ಲಭ್ಯವಿರುವ ಕೆಲಸದ ಸ್ಥಳದ ಪರವಾಗಿದ್ದಾರೆ ಎಂಬುದು ಸಮೀಕ್ಷೆಯ ಮೂಲಕ ತಿಳಿದುಬಂದಿದೆ.

ಮಹಿಳೆಯರಿಗೆ ಸಂಬಂಧಿಸಿದಂತೆ ನೈರ್ಮಲ್ಯ ಬ್ರಾಂಡ್ ಎವರ್ಟೀನ್ ನಡೆಸಿದ ಋತುಚಕ್ರ ನೈರ್ಮಲ್ಯ ಸಮೀಕ್ಷೆ 2023 ರ ಸಮೀಕ್ಷೆಯಲ್ಲಿ ಭಾಗವಹಿಸಿದವರ ಪೈಕಿ 71.7 ಪ್ರತಿಶತದಷ್ಟು ಜನರು ಋತುಚಕ್ರದ ರಜೆಯನ್ನು ವೇತನ ಸಹಿತ ರಜೆಯನ್ನಾಗಿಸಲು ಬಯಸುವುದಿಲ್ಲ, ಒಂದು ವೇಳೆ ಋತುಚಕ್ರದ ರಜೆ ವೇತನ ಸಹಿತವಾಗಿದ್ದರೆ, ಅದು ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಹಿಂಜರಿಯುವಂತೆ ಮಾಡುತ್ತದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ದೆಹಲಿ, ಮುಂಬೈ, ಬೆಂಗಳೂರು, ಹೈದರಾಬಾದ್, ಕೋಲ್ಕತ್ತಾ, ಚೆನ್ನೈ, ಪುಣೆ, ಅಹಮದಾಬಾದ್, ಲಕ್ನೋ ಮತ್ತು ಪಾಟ್ನಾ ಸೇರಿದಂತೆ ಹಲವು ನಗರಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 18 ರಿಂದ 35 ವರ್ಷ ವಯಸ್ಸಿನ ಸುಮಾರು 10,000 ಮಹಿಳೆಯರು ಭಾಗವಹಿಸಿದ್ದಾರೆ. ಮೇ 28 ರಂದು ಜಾಗತಿಕ ಋತುಚಕ್ರದ ನೈರ್ಮಲ್ಯ ದಿನಾಚರಣೆಗೆ ಮುನ್ನ ಸಮೀಕ್ಷೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.

SCROLL FOR NEXT