ನರೇಂದ್ರ ಮೋದಿ 
ದೇಶ

ಸಿ ವೋಟರ್ ಸಮೀಕ್ಷೆ: ಮೋದಿ ಸರ್ಕಾರಕ್ಕೆ 9 ವರ್ಷ; ಹಿಂದುತ್ವ, ರಾಷ್ಟ್ರೀಯತೆಗೆ ಒತ್ತು; ಬಹುತೇಕ ಭಾರತೀಯರ ಅಭಿಪ್ರಾಯ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಆಡಳಿತವು ಬಹುತೇಕ 'ಹಿಂದುತ್ವ' ಮತ್ತು 'ರಾಷ್ಟ್ರೀಯತೆ'ಗೆ ಸಂಬಂಧಿಸಿದೆ ಎಂದು ಪ್ರತಿ ಐದು ಭಾರತೀಯರಲ್ಲಿ ಮೂವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತ ಒಂಬತ್ತು ವರ್ಷಗಳನ್ನು ಪೂರೈಸಿದ್ದು, ಭಾರತದಾದ್ಯಂತ CVoter ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ನವೆದಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 9 ವರ್ಷಗಳ ಆಡಳಿತವು ಬಹುತೇಕ 'ಹಿಂದುತ್ವ' ಮತ್ತು 'ರಾಷ್ಟ್ರೀಯತೆ'ಗೆ ಸಂಬಂಧಿಸಿದೆ ಎಂದು ಪ್ರತಿ ಐದು ಭಾರತೀಯರಲ್ಲಿ ಮೂವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮೋದಿ ಆಡಳಿತ ಒಂಬತ್ತು ವರ್ಷಗಳನ್ನು ಪೂರೈಸಿದ್ದು, ಭಾರತದಾದ್ಯಂತ CVoter ನಡೆಸಿದ ವಿಶೇಷ ಸಮೀಕ್ಷೆಯಲ್ಲಿ ಈ ವಿಚಾರ ಬಹಿರಂಗವಾಗಿದೆ.

ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯು 282 ಸ್ಥಾನಗಳ ಐತಿಹಾಸಿಕ ಬಹುಮತ ಸಾಧಿಸಿದ ಬಳಿಕ ನರೇಂದ್ರ ಮೋದಿ ಅವರು 2014ರ ಮೇ 26 ರಂದು ಮೊದಲ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

2014ರ ಚುನಾವಣಾ ಪ್ರಚಾರದ ಸಮಯದಲ್ಲಿ, ನರೇಂದ್ರ ಮೋದಿ ಅವರು 'ಹಿಂದೂ' ಮತ್ತು ಯಾವುದೇ ಹಿಂಜರಿಕೆಯಿಲ್ಲದೆ 'ರಾಷ್ಟ್ರೀಯತೆ'ಯ ಬಲವಾದ ಪ್ರಜ್ಞೆಯನ್ನು ಪ್ರತಿಪಾದಿಸಿದ ನಾಯಕರಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.

ಮೋದಿಯವರ ಈ ನಡೆಯು ಭಾರತೀಯ ರಾಜಕೀಯದ ಧ್ರುವೀಕರಣಕ್ಕೆ ಕಾರಣವಾಗಿದೆ ಮತ್ತು ಮೋದಿಯವರನ್ನು ಟೀಕಿಸುವ ಅನೇಕ ಟೀಕಾಕಾರರ ಹುಟ್ಟಿಗೆ ಕಾರಣವಾಯಿತು. 

ಮೋದಿ ಮತ್ತು ಅವರ ಆಡಳಿತದ ವೈಖರಿಯು ಭಾರತದಲ್ಲಿನ ಮುಸ್ಲಿಂ ಸಮುದಾಯವನ್ನು ಹೊರತುಪಡಿಸಿ ಇತರರಿಂದ ಯಾವುದೇ ಪ್ರಮುಖ ಭಿನ್ನಾಭಿಪ್ರಾಯಗಳನ್ನು ಎದುರಿಸಿಲ್ಲ. 

ಹಿಂದೂ ಧರ್ಮವನ್ನು ಗುರುತಿಸುವ ಅತ್ಯಂತ ಹಳೆಯ ಮತ್ತು ಅತ್ಯಂತ ಪವಿತ್ರ ನಗರಗಳಲ್ಲಿ ಒಂದಾದ ವಾರಣಾಸಿಯಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಪ್ರಧಾನಿ ನರೇಂದ್ರ ಮೋದಿ ನಿರ್ಧರಿಸಿದಾಗಿನಿಂದ ರಾಷ್ಟ್ರೀಯತೆ ಮತ್ತು ಹಿಂದುತ್ವವು ಒಂದಕ್ಕೊಂಡು ಜೊತೆಯಾಗೇ ಸಾಗಿವೆ.

ಈ ವಿಚಾರವಾಗಿ ಬಹುಶಃ ಎನ್‌ಡಿಎ ಮತ್ತು ಯುಪಿಎ ಬೆಂಬಲಿಗರಲ್ಲಿ ಮಾತ್ರ ಪ್ರಮುಖ ಭಿನ್ನಾಭಿಪ್ರಾಯಗಳು ಕೇಳಿಬಂದಿವೆ.

ಶೇ 61ಕ್ಕಿಂತ ಹೆಚ್ಚು ಯುಪಿಎ ಬೆಂಬಲಿಗರು 'ನರೇಂದ್ರ ಮೋದಿ ಆಡಳಿತದ ರಾಜಕೀಯವು ಮುಖ್ಯವಾಗಿ ಹಿಂದುತ್ವ ಮತ್ತು ರಾಷ್ಟ್ರೀಯತೆಯ ಸುತ್ತ ಸುತ್ತುತ್ತದೆ' ಎಂದು ಅಭಿಪ್ರಾಯಪಟ್ಟರೆ, ಸುಮಾರು ಶೇ 52 ರಷ್ಟು ಎನ್‌ಡಿಎ ಬೆಂಬಲಿಗರು ಅದೇ ಭಾವನೆಯನ್ನು ಹಂಚಿಕೊಂಡಿದ್ದಾರೆ.

ಅಲ್ಲದೆ, ಎನ್‌ಡಿಎ ಬೆಂಬಲಿಗರು ಕಲ್ಯಾಣ ಯೋಜನೆಗಳನ್ನು ಕೂಡ ಮೋದಿ ಆಡಳಿತದ ಪ್ರಮುಖ ಕಾರ್ಯಸೂಚಿಯ ಭಾಗವಾಗಿ ಉಲ್ಲೇಖಿಸುತ್ತಾರೆ.

ಅದೇನೇ ಇದ್ದರೂ, ನರೇಂದ್ರ ಮೋದಿ ಪ್ರಧಾನಿಯಾದ ನಂತರವೇ ಸುಪ್ರೀಂ ಕೋರ್ಟ್ ತೀರ್ಪು ಪ್ರಕಟವಾಯಿತು. ನಂತರ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವು ಬಿರುಸಿನಿಂದ ಪ್ರಾರಂಭವಾಯಿತು. ಕಾಶಿ ವಿಶ್ವನಾಥ ಕಾರಿಡಾರ್ ಪೂರ್ಣಗೊಂಡಿದೆ. ಉಜ್ಜಯಿನಿ ಮಹಾಕಾಲ ದೇವಾಲಯದ ನವೀಕರಣ ಕಾರ್ಯಗಳು ಪೂರ್ಣಗೊಂಡಿವೆ ಮತ್ತು ಹಲವಾರು ಧಾರ್ಮಿಕ ಪ್ರವಾಸೋದ್ಯಮ ಯಾತ್ರೆಗಳನ್ನು ಪ್ರಾರಂಭಿಸಲಾಗಿದೆ.

ಮೋದಿಯವರ ಆಳ್ವಿಕೆಯಲ್ಲಿ, ಪಶ್ಚಿಮ ಏಷ್ಯಾದ ಅನೇಕ ದೇಶಗಳಲ್ಲಿ ಹಿಂದೂ ದೇವಾಲಯಗಳನ್ನು ತೆರೆಯಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

BDA ಯೋಜನಾ ಪ್ರಾಧಿಕಾರದ ಜವಾಬ್ದಾರಿ ಹಸ್ತಾಂತರ: GBA ವಿರೋಧಿಸುವವರು ಪಾಲಿಕೆ ಚುನಾವಣೆ ಬಹಿಷ್ಕರಿಸಲಿ; ಡಿಕೆಶಿ ಸವಾಲು

ಮೈಸೂರು ಪೊಲೀಸರಿಗೆ CM ಪುತ್ರನ ಕಾಟ: ಯಾವುದೇ ವರ್ಗಾವಣೆಯಾಗಬೇಕಾದರೂ ಯತೀಂದ್ರಗೆ ಟ್ಯಾಕ್ಸ್ ಕಟ್ಟಬೇಕು; ಪ್ರತಾಪ್ ಸಿಂಹ

ಬಾಂಬೆ ಮಾದರಿಯಲ್ಲಿ ಕೊಳಗೇರಿ ಪುನಶ್ಚೇತನಕ್ಕೆ ಸಮಿತಿ ರಚನೆ: GBA ವ್ಯಾಪ್ತಿಗೆ ಆನೇಕಲ್ ಸೇರಿಸುವುದು ಕಷ್ಟ; ಡಿಕೆ ಶಿವಕುಮಾರ್

'ನನ್ನ ಪ್ರಶಸ್ತಿ ಟ್ರಂಪ್‌ಗೆ ಸಮರ್ಪಿತ...' Noble ಶಾಂತಿ ಪ್ರಶಸ್ತಿ ಗೆದ್ದ ಬೆನ್ನಲ್ಲೇ ಮಾರಿಯಾ ಶಾಕಿಂಗ್ ಹೇಳಿಕೆ!

SCROLL FOR NEXT