ದೇಶ

ಬಿಜೆಪಿ ಇನ್ನು ಮುಂದೆ ಶಾರೂಖ್ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ನೀಡುವುದಿಲ್ಲ: ಎನ್ ಸಿಪಿ

Srinivas Rao BV

ನವದೆಹಲಿ: ಸಂಸತ್ ಭವನ ಉದ್ಘಾಟನೆಯ ಸಂತಸವನ್ನು ಬಾಲಿವುಡ್ ನಟ ಶಾರೂಖ್ ಖಾನ್ ಹಂಚಿಕೊಂಡಿದ್ದು, ಈ ಬಗ್ಗೆ ಎನ್ ಸಿಪಿ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದೆ. 

ಶಾರೂಖ್ ಖಾನ್ ಟ್ವೀಟ್ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್ ಸಿಪಿ ಬಿಜೆಪಿಯನ್ನು ಟಾರ್ಗೆಟ್ ಮಾಡಿದ್ದು, ಇನ್ನು ಮುಂದೆ ಬಿಜೆಪಿ ಶಾರೂಖ್ ಖಾನ್ ಅವರ ಸಿನಿಮಾಗಳ ಬಹಿಷ್ಕಾರಕ್ಕೆ ಕರೆ ನೀಡುವುದಿಲ್ಲ ಎಂದು ಹೇಳಿದೆ.

ಪ್ರಧಾನಿ ನರೇಂದ್ರ ಮೋದಿ ಹೊಸ ಸಂಸತ್ ಭವನವನ್ನು ಉದ್ಘಾಟಿಸಿದ ಬಗ್ಗೆ ಸಂತೋಷವನ್ನು ವ್ಯಕ್ತಪಡಿಸಿದ್ದ ನಟ ತಮ್ಮ ಧ್ವನಿಯ ವೀಡಿಯೊದೊಂದಿಗೆ ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದಾರೆ.

"ನಮ್ಮ ಸಂವಿಧಾನವನ್ನು ಎತ್ತಿಹಿಡಿಯುವ, ಈ ಮಹಾನ್ ರಾಷ್ಟ್ರದ ಪ್ರತಿಯೊಬ್ಬ ನಾಗರಿಕರನ್ನು ಪ್ರತಿನಿಧಿಸುವ ಮತ್ತು ವೈವಿಧ್ಯತೆಯನ್ನು ರಕ್ಷಿಸುವ ಜನರಿಗೆ ಎಂತಹ ಭವ್ಯವಾದ ಹೊಸ ಮನೆ. ಇದು ನವ ಭಾರತಕ್ಕಾಗಿ ಹೊಸ ಸಂಸತ್ತಿನ ಕಟ್ಟಡ, ಆದರೆ ವೈಭವದ ಭಾರತದ ಪುರಾತನ ಕನಸು, ಜೈ ಹಿಂದ್! #MyParliamentMyPride" ಎಂದು ಖಾನ್ ಟ್ವೀಟ್ ಮಾಡಿದ್ದರು.
 
ದೇಹಕ್ಕೆ ಆತ್ಮ ಹೇಗಿದೆಯೋ ಅದೇ ದೇಶಕ್ಕೆ ಸಂಸತ್ತು ಎಂದು 57 ವರ್ಷದ ನಟ ತಮ್ಮ ಧ್ವನಿ ಇದ್ದ ಕ್ಲಿಪ್‌ನಲ್ಲಿ ಹೇಳಿದ್ದರು.

ಎನ್ ಸಿಪಿ ಸಹಿತ 20 ವಿಪಕ್ಷಗಳು ಸಂಸತ್ ಉದ್ಘಾಟನೆ ಕಾರ್ಯಕ್ರಮವನ್ನು ಬಹಿಷ್ಕರಿಸಿದ್ದವು.
 

SCROLL FOR NEXT