ದೇಶ

ಜಮ್ಮು-ಕಾಶ್ಮೀರ: ಪೂಂಚ್ ಬಳಿ ಗಡಿ ನುಸುಳಲು ಯತ್ನ, ಮೂವರು ಉಗ್ರರ ಬಂಧನ

Manjula VN

ಪೂಂಚ್ (ಜಮ್ಮು ಮತ್ತು ಕಾಶ್ಮೀರ): ಜಮ್ಮು ಮತ್ತು ಕಾಶ್ಮೀರದ ಪೂಂಚ್ ಗಡಿ ನಿಯಂತ್ರಣ ರೇಖೆ ಬಳಿ ಗಡಿ ನುಸುಳಲು ಯತ್ನಿಸುತ್ತಿದ್ದ ಮೂವರು ಉಗ್ರರನ್ನು ಭಾರತೀಯ ಸೇನಾಪಡೆ ಬಂಧನಕ್ಕೊಳಪಡಿಸಿದೆ.

ಮೇ 30-31 ರ ಮಧ್ಯರಾತ್ರಿ ಪೂಂಚ್ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್‌ಒಸಿ) ಅನುಮಾನಾಸ್ಪ ಓಡಾಟಗಳು ಕಂಡು ಬಂಂದ ಹಿನ್ನೆಲೆಯಲ್ಲಿ  ಜಮ್ಮು ಮತ್ತು ಕಾಶ್ಮೀರ ಪೊಲೀಸರೊಂದಿಗೆ ಸೇನೆಪಡೆಗಳು ಜಂಟಿ ಕಾರ್ಯಾಚರಣೆಗಿಳಿದಿತ್ತು.

ಈ ವೇಳೆ ಬೇಲಿ ದಾಟಲು ಪ್ರಯತ್ನಿಸುತ್ತಿದ್ದ 3 ಉಗ್ರರನ್ನು ಬಂಧಿಸಲುವಲ್ಲಿ ಯಶಸ್ವಿಯಾಗಿದ್ದಾರೆ. ಗಡಿ ನುಸುಳಲು ಯತ್ನಿಸುದ್ದಿದ್ದ ಉಗ್ರರು ಸೇನಾಪಡೆಗಳ ಕಂಡ ಕೂಡಲೇ ಗುಂಡಿನ ದಾಳಿ ನಡೆಸಿದ್ದರು. ಈ ವೇಳೆ ಸ್ಥಳವನ್ನು ಸುತ್ತುವರೆದ ಭದ್ರತಾಪಡೆಗಳು, ದಿಟ್ಟ ಉತ್ತರ ನೀಡಿ ಮೂವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುಂಡಿನ ಚಕಮಕಿಯಲ್ಲಿ ಓರ್ವ ಯೋಧ ಗಾಯಗೊಂಡಿದ್ದು, ಅವರನ್ನು ಸ್ಥಳಾಂತರಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೂವರು ಉಗ್ರರಿಂದ 10 ಕೆಜಿ ಐಇಡಿ ಮತ್ತು ನಾರ್ಕೊ ಸೇರಿದಂತೆ ಇತರೆ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದ್ದಾರೆ.

SCROLL FOR NEXT