ದೇಶ

ಮರಾಠ ಮೀಸಲಾತಿ ಕಾರ್ಯಕರ್ತ ಮನೋಜ್ ಜಾರಂಗೆ ಉಪವಾಸ ಸತ್ಯಾಗ್ರಹ ಹಿಂದಕ್ಕೆ: ಸರ್ಕಾರಕ್ಕೆ 2 ತಿಂಗಳ ಗಡುವು

Srinivas Rao BV

ಮುಂಬೈ: ಮರಾಠಾ ಮೀಸಲಾತಿ (Maratha reservation) ಆಂದೋಲನದ ಹೋರಾಟಗಾರ ಮನೋಜ್ ಜಾರಂಗೆ ಪಾಟೀಲ್​ ಆಮರಣಾಂತ ಉಪವಾಸ ಸತ್ಯಾಗ್ರಹವನ್ನು ಹಿಂಪಡೆದಿದ್ದಾರೆ.

ಸರ್ಕಾರದ ನಿಯೋಗ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ ಬೆನ್ನಲ್ಲೇ ಅವರು ಉಪವಾಸ ಹಿಂಪಡೆದಿದ್ದಾರೆ. 

ಉಪವಾಸ ಅಂತ್ಯಗೊಳಿಸುವುದಕ್ಕೂ ಮುನ್ನ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿರುವ ಅವರು, 2 ತಿಂಗಳ ಒಳಗಾಗಿ ತಮ್ಮ ಬೇಡಿಕೆಗೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ನಿರ್ಧಾರ ತೆಗೆದುಕೊಳ್ಳದೇ ಇದ್ದರೆ, ಮುಂಬೈ ಗೆ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗುವುದು ಎಂಬ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಸಂದೀಪ್ ಶಿಂಧೆ, ಎಂಜಿ ಗಾಯಕವಾಡ್ ಮತ್ತು ಕೆಲವು ಅಧಿಕಾರಿಗಳ ನಿಯೋಗವೂ ಜಾರಂಗೆ ಅವರನ್ನು ಭೇಟಿ ಮಾಡಿದೆ. 

ಜಾರಂಗೆ ಯಾವುದೇ ತಕರಾರಿಲ್ಲದ, "ಮೀಸಲಾತಿ" ಜಾರಿಗೊಳಿಸಲು ಒತ್ತಾಯಿಸಿದರು ಮತ್ತು ರಾಜ್ಯ ಸರ್ಕಾರವು ಆ ಭರವಸೆಯನ್ನು ನೀಡುವಂತೆ ಕೇಳಿದರು.

ಮುಖ್ಯಮಂತ್ರಿ ಏಕನಾಥ್ ಶಿಂಧೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ಮನೋಜ ಜಾರಂಗೆ ಪಾಟೀಲ್​ ಹಾಗೂ ಸಕಲ ಮರಾಠ ಸಮುದಾಯಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಕಾನೂನು ತಜ್ಞರೊಬ್ಬರು ಉಪವಾಸ ಸತ್ಯಾಗ್ರಹ ನಡೆಸುತ್ತಿರುವವರನ್ನು ಮನವೊಲಿಸಲು ನಿಯೋಗದಲ್ಲಿ ಜೊತೆಯಾಗಿರುವುದು ಇತಿಹಾಸದಲ್ಲೇ ಮೊದಲ ನಿದರ್ಶನವಾಗಲಿದೆ. ಗಾಯಕ್ವಾಡ್ ಅವರಿಗೆ ಈ ವಿಷಯದ ಸಂಪೂರ್ಣ ಜ್ಞಾನವಿತ್ತು. ನಿವೃತ್ತ ನ್ಯಾಯಾಧೀಶರ ಜತೆ ಮಾತನಾಡಿದ ಬಳಿಕ ಮನೋಜ್ ಜಾರಂಗೆ ಅವರಿಗೆ ಮನವರಿಕೆ ಆಗಿರಬೇಕು ಎಂದು ಸಿಎಂ ಶಿಂಧೆ ಹೇಳಿದ್ದಾರೆ.

SCROLL FOR NEXT