ಸಾಂದರ್ಭಿಕ ಚಿತ್ರ 
ದೇಶ

ತಮಿಳುನಾಡು: ಎಸ್‌ಸಿ ಯುವಕರ ಮೇಲೆ ಹಲ್ಲೆ, ಮೂತ್ರ ವಿಸರ್ಜನೆ ಮಾಡಿದ ಆರು ಮಂದಿ ಬಂಧನ

ಪರಿಶಿಷ್ಟ ಜಾತಿಯ ಇಬ್ಬರು ಯುವಕರ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಆರು ಮಂದಿಯನ್ನು ತಿರುನೆಲ್ವೇಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಂಧಿತರೆಲ್ಲರೂ 21 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ. 

ತಿರುನೆಲ್ವೇಲಿ: ಪರಿಶಿಷ್ಟ ಜಾತಿಯ ಇಬ್ಬರು ಯುವಕರ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ ಮೂತ್ರ ವಿಸರ್ಜನೆ ಮಾಡಿದ ಆರೋಪದ ಮೇಲೆ ಆರು ಮಂದಿಯನ್ನು ತಿರುನೆಲ್ವೇಲಿ ಬಂಧಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ. ಬಂಧಿತರೆಲ್ಲರೂ 21 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಲಾಗಿದೆ. 

ಪರಿಶಿಷ್ಟ ಜಾತಿಯ ಯುವಕರು ತಮ್ಮ ಗುರುತನ್ನು ಬಹಿರಂಗಪಡಿಸಿದ ನಂತರ ಆರು ಜನರ ತಂಡ ತಾಮಿರಬರಣಿ ನದಿಯಿಂದ ಸ್ನಾನ ಮುಗಿಸಿ ಹಿಂದಿರುಗುತ್ತಿದ್ದ ಇಬ್ಬರ ಮೇಲೆ ಹಲ್ಲೆ, ವಿವಸ್ತ್ರಗೊಳಿಸಿ ಮತ್ತು ಮೂತ್ರ ವಿಸರ್ಜನೆ ಮಾಡಿದೆ. ಈ ಸಂಬಂಧ ಎಸ್‌ಸಿ/ಎಸ್‌ಟಿ ದೌರ್ಜನ್ಯ ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಚ್ಚನಲ್ಲೂರು ಪೊಲೀಸರು ತಿಳಿಸಿದ್ದಾರೆ.

ಸದ್ಯ ತಿರುನಲ್ವೇಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಂತ್ರಸ್ತರ ಪ್ರಕಾರ, ಎರಡು ಮೊಬೈಲ್ ಫೋನ್‌ಗಳು, ಬೆಳ್ಳಿ ಆಭರಣ ಹಾಗೂ 5,000 ನಗದನ್ನು ತಂಡ ದರೋಡೆ ಮಾಡಿದೆ.  ಆ ತಂಡ ಸೋಮವಾರ  ನದಿಯಲ್ಲಿ ಸ್ನಾನ ಮುಗಿಸಿ ಬೈಕ್‌ನಲ್ಲಿ ಹೋಗಲು ತಯಾರಾಗುತ್ತಿದ್ದಾಗ  ನಮ್ಮನ್ನು ಕರೆದು  ಜಾತಿ ಮತ್ತು ಸ್ಥಳೀಯ ಸ್ಥಳದ ಬಗ್ಗೆ ಕೇಳಿದರು. ನಂತರ ನಾವು ಉತ್ತರಿಸಿದ ಕೂಡಲೇ  ದೊಣ್ಣೆ ಹಾಗೂ ಚಾಕುವಿನಿಂದ ಹಲ್ಲೆ ಮಾಡಲು ಶುರು ಮಾಡಿದರು ಎಂದು ತಿಳಿಸಿದರು. 
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಮುಖ್ಯಮಂತ್ರಿ ಬದಲಾವಣೆ: ದೆಹಲಿಯಲ್ಲಿ ಕಾಂಗ್ರೆಸ್‌ ಮ್ಯಾರಥಾನ್‌ ಮೀಟಿಂಗ್ ಬಳಿಕ ಕೆ.ಸಿ ವೇಣುಗೋಪಾಲ್ ಹೇಳಿದ್ದೇನು? Video

IPL 2026, qualifier 1: ಟಾಸ್ ಗೆದ್ದ GT ಬೌಲಿಂಗ್ ಆಯ್ಕೆ, ಕುತೂಹಲಕ್ಕೆ ಬ್ರೇಕ್, ವೆಂಕಟೇಶ್ ಅಯ್ಯರ್ ಗೆ ಸ್ಟಿಕ್ ಆದ RCB!

Bengaluru Rains: ಗುಡುಗು, ಸಿಡಿಲು ಸಹಿತ ಭಾರೀ ಮಳೆ; ಹಳಿ ಮೇಲೆ ಮರ ಬಿದ್ದು, ಮೆಟ್ರೋ ಸಂಚಾರ ವ್ಯತ್ಯಯ!

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿ ತಿರಸ್ಕಾರ: 'ಸುಪ್ರೀಂ' ತೀರ್ಪು ಸ್ವಾಗತಿಸಿದ ಡಿಕೆ ಶಿವಕುಮಾರ್

ಮೂಲಭೂತವಾದಿಗಳ ಒತ್ತಡಕ್ಕೆ ಮಣಿದ ಪಾಕ್ ಸರ್ಕಾರ; ಹಿಂದೂ ಹೆಸರುಗಳ ಮರು ನಾಮಕರಣ ಮುಂದೂಡಿಕೆ!

SCROLL FOR NEXT