ವಿಜಯವಾಡ: ರಾಜಕೀಯದಲ್ಲಿ ಯಾರೂ ಶಾಶ್ವತವಾಗಿರಲು ಸಾಧ್ಯವಿಲ್ಲ ಎಂದು ಕರ್ನಾಟಕ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ಆಂಧ್ರಪ್ರದೇಶದ ವಿಜಯವಾಡದಲ್ಲಿ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು, ಬೇರು ಮಟ್ಟದಿಂದ ಪಕ್ಷವನ್ನು ಸದೃಢವಾಗಿ ಕಟ್ಟಬಹುದು, ಕಾರ್ಯಕರ್ತರು ಬಲಿಷ್ಠರಾಗಿದ್ದರೆ ಪಕ್ಷ ಸದೃಢವಾಗಿರುತ್ತದೆ. ರಾಜಕೀಯದಲ್ಲಿ ಯಾರೂ ಕೂಡಾ ಶಾಶ್ವತವಾಗಿರಲು ಸಾಧ್ಯವಿಲ್ಲ ಎಂದರು.
ಇದನ್ನೂ ಓದಿ: 500 ರು. ಗೆ ಗ್ಯಾಸ್ ಸಿಲಿಂಡರ್; ಅತ್ತೆಗೆ 4 ಸಾವಿರ, ಸೊಸೆಗೆ ಎರಡೂವರೆ ಸಾವಿರ: 6 ಗ್ಯಾರಂಟಿ ಘೋಷಿಸಿದ ಕಾಂಗ್ರೆಸ್
ತೆಲಂಗಾಣ ಚುನಾವಣೆಗಾಗಿ ನಾನು ಇಲ್ಲಿಗೆ ಬಂದಿದ್ದೇನೆ.ಕಾಂಗ್ರೆಸ್ ಪಕ್ಷ ಗೆಲ್ಲುವ ವಿಶ್ವಾಸವಿದೆ. ತೆಲಂಗಾಣದಲ್ಲಿ ಬದಲಾವಣೆ, ಹೊಸ ಸರ್ಕಾರ ರಚನೆ ಬಗ್ಗೆ ದೊಡ್ಡ ಅಲೆ ಇದೆ. ಎಲ್ಲಾ ರಾಜಕೀಯ ಪಕ್ಷಗಳ ಮೂಲ ಬೇರು ಕಾಂಗ್ರೆಸ್ ಪಕ್ಷವೇ ಆಗಿದೆ. ಅವರು ಬೇರೆ ಏನನ್ನೇ ಹೇಳಲಿ. ವೈಎಸ್ ಆರ್ ಕಾಂಗ್ರೆಸ್ ಕೂಡಾ ಏಕೆ ಕಾಂಗ್ರೆಸ್ ಅಂತಾ ಹೆಸರು ಇಟ್ಟುಕೊಂಡಿದ್ದಾರೆ ಎಂದು ಪ್ರಶ್ನಿಸಿದ ಅವರು, ಈ ದೇಶವನ್ನು ಒಗ್ಗೂಡಿಸಿದ ಪಕ್ಷ ಕಾಂಗ್ರೆಸ್ ಎಂದು ತಿಳಿಸಿದರು.
ಇದನ್ನೂ ಓದಿ: ತೆಲಂಗಾಣ ಚುನಾವಣೆ: ಕರ್ನಾಟಕ ಸಿಎಂ ಸಿದ್ದರಾಮಯ್ಯಗೆ ಕೆ ಚಂದ್ರಶೇಖರ್ ರಾವ್ ಟೀಕಿಸುವ ಹಕ್ಕಿಲ್ಲ- ಕೆ ಕವಿತಾ
ನಿನ್ನೆ ತೆಲಂಗಾಣದ ಕೊದಾಡ್ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪದ್ಮಾವತಿ ಅವರ ಪರ ಡಿಕೆ ಶಿವಕುಮಾರ್ ಪ್ರಚಾರ ನಡೆಸಿ, ಮತಯಾಚಿಸಿದರು.