ಸಾಂದರ್ಭಿಕ ಚಿತ್ರ 
ದೇಶ

ಕೇರಳ: ತಂದೆ, ಎಂಟು ವರ್ಷದ ಮಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

ಕೊಟ್ಟಾಯಂ ಸಮೀಪದ ಮೀನಾದಂನಲ್ಲಿರುವ ತಮ್ಮ ನಿವಾಸದ ಸಮೀಪವಿರುವ ಜನವಸತಿ ಇಲ್ಲದ ಮನೆಯೊಂದರ ಶೆಡ್‌ನಲ್ಲಿ ಭಾನುವಾರ ತಂದೆ ಮತ್ತು ಅವರ ಎಂಟು ವರ್ಷದ ಮಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಟ್ಟಾಯಂ: ಇಲ್ಲಿಗೆ ಸಮೀಪದ ಮೀನಾದಂನಲ್ಲಿರುವ ತಮ್ಮ ನಿವಾಸದ ಸಮೀಪವಿರುವ ಜನವಸತಿ ಇಲ್ಲದ ಮನೆಯೊಂದರ ಶೆಡ್‌ನಲ್ಲಿ ಭಾನುವಾರ ತಂದೆ ಮತ್ತು ಅವರ ಎಂಟು ವರ್ಷದ ಮಗ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮೀನಾದಂ ನಿವಾಸಿಗಳಾದ ಬಿನು ಕುಮಾರ್ (48) ಮತ್ತು ಅವರ ಮಗ ಶ್ರೀಹರಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಬೆಳಿಗ್ಗೆ 8 ಗಂಟೆಗೆ ಪತ್ತೆಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಶೆಡ್‌ನಲ್ಲಿ ನೇಣು ಬಿಗಿದುಕೊಂಡಿರುವುದನ್ನು ಕಂಡ ಸ್ಥಳೀಯರು, ಅಕ್ಕಪಕ್ಕದ ಮನೆಯವರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

'ಅವರು ಬೆಳಗಿನ ವಾಕಿಂಗ್‌ಗೆ ಹೋಗುತ್ತಿದ್ದರು. ಇಂದು ಬೆಳಗ್ಗೆಯೂ ಅನೇಕ ಜನರು ಅವರನ್ನು ನೋಡಿದ್ದಾರೆ. ನಾವು ಘಟನೆಯ ಹಿಂದಿನ ಕಾರಣ ಏನೆಂಬುದನ್ನು ತನಿಖೆ ಮಾಡುತ್ತಿದ್ದೇವೆ' ಎಂದು ಪೊಲೀಸರು ತಿಳಿಸಿದ್ದಾರೆ.

ಕುಮಾರ್ ಅವರಿಗೆ ತಂದೆ-ತಾಯಿ, ಪತ್ನಿ ಹಾಗೂ ಓರ್ವ ಪುತ್ರಿ ಇದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಸಾಕಪ್ಪಾ ಸಾಕು ಯುದ್ಧ, ನಾವ್ ಯಾರಿಗೂ ಸಹಾಯ ಮಾಡಲ್ಲ, ನಿಮ್ ಎಣ್ಣೆ ನೀವೆ ಹುಡುಕಿಕೊಳ್ಳಿ: ಜಗತ್ತಿಗೆ ದೊಡ್ಡಣ್ಣ Trump ಶಾಕ್!

ಇರಾನ್ ಯುದ್ಧಕ್ಕೆ ಹೌತಿಗಳ ಪ್ರವೇಶ: 2ನೇ ಕದನರಂಗ; ಬಾಬ್ ಅಲ್-ಮಂದಾಬ್‌ ಜಲಸಂಧಿ ಬಂದ್ ಆದರೆ ಭಾರತಕ್ಕೇನು ಸಂಕಷ್ಟ? ಇಲ್ಲಿದೆ ಮಾಹಿತಿ

ಬೆಂಗಳೂರು: RCB ಪಂದ್ಯದ ವೇಳೆ ಸರಣಿ ಮೊಬೈಲ್ ಕಳ್ಳತನ; ಪ್ರಮುಖ ಆರೋಪಿ, ಅಪ್ರಾಪ್ತರ ಬಂಧನ

IndiGo ನೂತನ CEO ಆಗಿ ವಿಲಿಯಂ ವಾಲ್ಷ್ ನೇಮಕ

ಖಜಾನೆ ಖಾಲಿ? ಇರಾನ್ ಯುದ್ಧಕ್ಕೆ ಹಣ ನೀಡಲು ಅರಬ್ ರಾಷ್ಟ್ರಗಳಿಗೆ ಅಮೆರಿಕ ಒತ್ತಾಯ..: ವೈಟ್ ಹೌಸ್ ಹೇಳಿದ್ದೇನು?

SCROLL FOR NEXT