ದೇಶ

ಟೆಲಿಗ್ರಾಂನಲ್ಲಿ ಮಕ್ಕಳ ಪೋರ್ನ್ ಉಚಿತವಾಗಿ ಲಭ್ಯ: ತೆಲಂಗಾಣ ಪೊಲೀಸರಿಗೆ ಕಾರ್ಯಕರ್ತೆ ದೂರು

Lingaraj Badiger

ಹೈದರಾಬಾದ್: ಸಾಮಾಜಿಕ ಕಾರ್ಯಕರ್ತೆ ಸುನೀತಾ ಕೃಷ್ಣನ್ ಅವರು ನೀಡಿದ ದೂರಿನ ಆಧಾರದ ಮೇಲೆ ಸಂದೇಶ ಕಳುಹಿಸುವ ಅಪ್ಲಿಕೇಶನ್‌ಗಳಲ್ಲಿ ಮಕ್ಕಳ ಲೈಂಗಿಕ ನಿಂದನೆ ಮೆಟೀರಿಯಲ್(ಸಿಎಸ್‌ಎಎಂ) ಲಭ್ಯತೆಗೆ ಕಡಿವಾಣ ಹಾಕಲು ತೆಲಂಗಾಣ ಪೊಲೀಸರು ಮುಂದಾಗಿದ್ದಾರೆ.

ಕೃಷ್ಣನ್ ಅವರು ಡಿಜಿಪಿ ಅಂಜನಿ ಕುಮಾರ್ ಅವರಿಗೆ ನೀಡಿದ ದೂರಿನಲ್ಲಿ, ಟೆಲಿಗ್ರಾಮ್‌ನಂತಹ ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳಲ್ಲಿ ಸಿಎಸ್‌ಎಎಂ ಉಚಿತ ಲಭ್ಯತೆ ಮತ್ತು ಮಕ್ಕಳ ಪೋರ್ನ್ ವಿಡಿಯೋಗೆ ಪ್ರವೇಶಿಸಲು ಫೋನ್‌ಪೇ ಮತ್ತು ಪೇಟಿಎಂನಂತಹ ಪಾವತಿ ಸೌಲಭ್ಯಗಳನ್ನು ಸುಲಭವಾಗಿ ಬಳಸಿಕೊಳ್ಳುವ ಗಂಭೀರ ಸಮಸ್ಯೆಯನ್ನು ಎತ್ತಿದ್ದಾರೆ.

ಪ್ರಜ್ವಲ ಸಂಸ್ಥೆಯ ಸಹ ಸಂಸ್ಥಾಪಕಿಯಾಗಿರುವ ಸಾಮಾಜಿಕ ಕಾರ್ಯಕರ್ತೆಯಾಗಿರುವ ಕೃಷ್ಣನ್ ಅವರು ಮಕ್ಕಳ ದಿನಾಚರಣೆಯಂದು ದೂರು ದಾಖಲಿಸಿದ್ದಾರೆ. ತಮ್ಮ ಚಾನೆಲ್‌ಗಳಲ್ಲಿ ವಿನಿಮಯವಾಗುತ್ತಿರುವ ವಿಷಯವನ್ನು ಫಿಲ್ಟರ್ ಮಾಡುವ ಜವಾಬ್ದಾರಿಯನ್ನು ಮೆಸೇಜಿಂಗ್ ಪ್ಲಾಟ್‌ಫಾರ್ಮ್‌ಗಳು ತೆಗೆದುಕೊಳ್ಳುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಈ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ರ್ ಪ್ರೆಸ್ ಗೆ ಪ್ರತಿಕ್ರಿಯಿಸಿದ ಮಹಿಳಾ ಸುರಕ್ಷತಾ ವಿಭಾಗದ ಎಡಿಜಿಪಿ ಶಿಖಾ ಗೋಯೆಲ್ ಅವರು CSAM ಚಲಾವಣೆಯಲ್ಲಿದೆ ಎಂದು ಒಪ್ಪಿಕೊಂಡಿದ್ದಾರೆ. 

ನಮ್ಮ ಇಲಾಖೆಯು ಈ ಬಗ್ಗೆ ಇನ್ನೂ ಯಾವುದೇ ದೂರನ್ನು ಸ್ವೀಕರಿಸದಿದ್ದರೂ, ಅಂತಹ ವಸ್ತುಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

SCROLL FOR NEXT