ದೇಶ

ಜಾರ್ಖಂಡ್: ಪ್ರಧಾನಿ ಮೋದಿ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಮಹಿಳೆಯ ಬಂಧನ

Lingaraj Badiger

ರಾಂಚಿ: ಜಾರ್ಖಂಡ್‌ಗೆ ಎರಡು ದಿನಗಳ ಭೇಟಿಯ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಾವಲು ವಾಹನಕ್ಕೆ ಅಡ್ಡ ಬಂದ ಮಹಿಳೆಯನ್ನು ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ.

ಧನ್‌ಬಾದ್ ಎಸಿಬಿ ಇನ್ಸ್‌ಪೆಕ್ಟರ್ ವಿನೋದ್ ಕುಮಾರ್ ಪಾಸ್ವಾನ್ ಹೇಳಿಕೆಯನ್ನು ಆಧರಿಸಿ, ರಾಂಚಿಯ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಸಂಗೀತಾ ಝಾ ಎಂಬ ಮಹಿಳೆ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಘಟನೆಯ ನಂತರ ಎನ್‌ಎಸ್‌ಜಿ ರಾಂಚಿ ಪೊಲೀಸರಿಂದ ವರದಿ ಕೇಳಿತ್ತು.

ಪ್ರಧಾನಿ ಮೋದಿ ಅವರು ಭಗವಾನ್ ಬಿರ್ಸಾ ಮುಂಡಾ ಸ್ಮಾರಕ ವಸ್ತುಸಂಗ್ರಹಾಲಯಕ್ಕೆ ತೆರಳುತ್ತಿದ್ದಾಗ ಸಂಗೀತಾ ಝಾ ಎಂಬ ಮಹಿಳೆ ಇದ್ದಕ್ಕಿದ್ದಂತೆ ಬೆಂಗಾವಲು ವಾಹನಕ್ಕೆ ಅಡ್ಡ ಬಂದಿದ್ದಾರೆ. ಆದಾಗ್ಯೂ, ಮಹಿಳೆಯನ್ನು ತಕ್ಷಣವೇ ಪ್ರಧಾನಿಯ ಭದ್ರತೆಗಾಗಿ ನಿಯೋಜಿಸಲಾಗಿದ್ದ ಭದ್ರತಾ ಪಡೆಗಳು ಮಹಿಳೆಯನ್ನು ಹಿಡಿದು ಕಸ್ಟಡಿಗೆ ತೆಗೆದುಕೊಂಡರು. ಮಹಿಳೆ ಪ್ರಧಾನಿಯನ್ನು ಭೇಟಿಯಾಗಲು ಉತ್ಸುಕರಾಗಿದ್ದರು ಎಂದು ಹೇಳಲಾಗಿದೆ.

ಈ ಸಂಬಂಧ ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಸಂಗೀತಾ ಝಾ ಅವರು ತೆಗೆದುಕೊಂಡ ಕ್ರಮಗಳು ಗಂಭೀರ ಅಪರಾಧದ ವರ್ಗಕ್ಕೆ ಸೇರುತ್ತವೆ. ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 341,283,353,186 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

SCROLL FOR NEXT