ಏರ್ ಇಂಡಿಯಾ ವಿಮಾನ 
ದೇಶ

Air India ವಿಮಾನದಲ್ಲಿ ಮಹಿಳಾ ಪ್ರಯಾಣಿಕೆಗೆ ಮೂರ್ಛೆ ರೋಗ; ಬೆಂಗಳೂರು ವೈದ್ಯರ ಸಮಯ ಪ್ರಜ್ಞೆಯಿಂದ ತಪ್ಪಿದ ಅಪಾಯ!

ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕೆಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.

ನವದೆಹಲಿ: ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಮಾರ್ಗ ಮಧ್ಯೆ ಮಹಿಳಾ ಪ್ರಯಾಣಿಕೆಗೆ ಮೂರ್ಛೆ ರೋಗ ಕಾಣಿಸಿಕೊಂಡಿದ್ದು, ವಿಮಾನದಲ್ಲಿದ್ದ ಬೆಂಗಳೂರು ಮೂಲದ ವೈದ್ಯರೊಬ್ಬರು ಆಕೆಗೆ ಚಿಕಿತ್ಸೆ ನೀಡುವ ಮೂಲಕ ಸಂಭವಿಸಬಹುದಾದ ಅಪಾಯವನ್ನು ತಪ್ಪಿಸಿದ್ದಾರೆ.

ಬೆಂಗಳೂರು ಮೂಲದ ಡಾ. ಸುಂದರ್ ಶಂಕರನ್ ಅವರ ತ್ವರಿತ ಮತ್ತು ಪರಿಣಾಮಕಾರಿ ಮಧ್ಯಸ್ಥಿಕೆಯಿಂದಾಗಿ ದೆಹಲಿಯಿಂದ ಟೊರೊಂಟೊಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಅಪಾಯಕ್ಕೆ ಸಿಲುಕಿದ್ದ ಮಹಿಳೆಯ ಜೀವ ಉಳಿದಿದೆ. ಈ ಕುರಿತಂತೆ ಸ್ವತಃ ವೈದ್ಯ ಡಾ. ಸುಂದರ್ ಶಂಕರನ್ ಅವರು ಟ್ವಿಟರ್ ನಲ್ಲಿ ಮಾಹಿತಿ ನೀಡಿದ್ದು, ಸಂದರ್ಭಕ್ಕೆ ಸರಿಯಾಗಿ ಮಹಿಳೆಗೆ ಚಿಕಿತ್ಸೆ ನೀಡಿದ್ದರಿಂದ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ.

"ನನಗೆ ಏರ್ ಇಂಡಿಯಾ ಮೂಲಕ ದೆಹಲಿಯಿಂದ ಟೊರೊಂಟೊಗೆ ಹೋಗುವ ದಾರಿಯಲ್ಲಿ ನಾನು ಮತ್ತು ಟೊರೊಂಟೊದ ವಿಕಿರಣಶಾಸ್ತ್ರಜ್ಞ ಸತೀಶ್ ರವರು ಮೂರ್ಛೆ ರೋಗ ಹೊಂದಿದ್ದ ಮಧ್ಯವಯಸ್ಕ ಮಹಿಳೆಗೆ ಚಿಕಿತ್ಸೆ ನೀಡಲು ಕರೆದರು. ವಿಮಾನವು ಇನ್ನೂ ಟೇಕ್ ಆಫ್ ಆಗಿರಲಿಲ್ಲ ಮತ್ತು ಅದೃಷ್ಟವಶಾತ್ ಆಕೆಯ ಅಂಗಾಗಗಳು ಸ್ಥಿರವಾಗಿದ್ದವು ಮತ್ತು ಸ್ಥಳೀಯ ವೈದ್ಯರ ಸಹಾಯದಿಂದ ನಾವು ಆಕೆಯನ್ನು ವಿಮಾನದ ಸಿಬ್ಬಂದಿಗಳ ನೆರವಿನಿಂದ ವಿಮಾನದಿಂದ ಕೆಳಗಿಳಿಸಲಾಯಿತು. ಏರ್ ಇಂಡಿಯಾ ಸಿಬ್ಬಂದಿಗಳು ತುಂಬಾ ಸಹಕಾರಿ ಮತ್ತು ವೃತ್ತಿಪರರಾಗಿದ್ದರು ಭದ್ರತಾ ಕಾಳಜಿಯಿಂದಾಗಿ ಇಡೀ ವಿಮಾನವು ಭದ್ರತಾ ತಪಾಸಣೆಗೆ ಒಳಗಾಯಿತು ಮತ್ತು ಕ್ಲಿಯರೆನ್ಸ್ ಮತ್ತು ಹಾರಾಟವು ಒಂದು ಗಂಟೆ ವಿಳಂಬವಾಯಿತು ಎಂದು ಅವರು ಟ್ವೀಟ್ ಮಾಡಿದ್ದಾರೆ.

"ನನ್ನ 45 ವರ್ಷಗಳ ವೈದ್ಯಕೀಯ ವೃತ್ತಿಜೀವನದಲ್ಲಿ ಇದು 3ನೇ ಬಾರಿಗೆ ನನ್ನನ್ನು ವಿಮಾನದೊಳಗೆ ಚಿಕಿತ್ಸೆಗಾಗಿ ಕರೆಯಲಾಗಿದೆ. ಮೊದಲ ಬಾರಿಗೆ ದೆಹಲಿಯಿಂದ ಬೆಂಗಳೂರಿಗೆ ವಿಮಾನದಲ್ಲಿ ಐಎಎಫ್ ಅಧಿಕಾರಿಯೊಬ್ಬರಿಗೆ ಎದೆ ನೋವು ಕಾಣಿಸಿಕೊಂಡಿತ್ತು. ನಾನು ತುರ್ತು ಚಿಕಿತ್ಸೆ ನೀಡಿ ಅಧಿಕಾರಿಯನ್ನು ತಕ್ಷಣವೇ ಕಮಾಂಡ್ ಹಾಸ್ಪಿಟಲ್ ಏರ್ ಫೋರ್ಸ್‌ಗೆ ಕರೆದೊಯ್ಯಲಾಯಿತು. ಅವರಿಗೆ ಎಂಐಗೆ ಚಿಕಿತ್ಸೆ ನೀಡಲಾಯಿತು. ಬಳಿಕ ಅವರು ಚೇತರಿಸಿಕೊಂಡರು. ವಾಯುಪಡೆಯ ಮುಖ್ಯಸ್ಥರು ನನಗೆ ಧನ್ಯವಾದ ಪತ್ರವನ್ನು ಕಳುಹಿಸಿದ್ದಾರೆ. ಆದರೆ IAF ಅಧಿಕಾರಿ ರೋಗಿಯ ಪತ್ನಿ ಮತ್ತು ಮಗಳ ಧನ್ಯವಾದ ಪತ್ರವನ್ನು ಹೃದಯ ಸ್ಪರ್ಶಿಸುತ್ತಿತ್ತು. ತನ್ನ ವೃತ್ತಿಜೀವನವನ್ನು ಪ್ರಾರಂಭಿಸಿದ್ದ ಯುವ ವೈದ್ಯರಿಗೆ ಈ ಪತ್ರಗಳು ಬಹಳಷ್ಟು ಅರ್ಥವನ್ನು ನೀಡುತ್ತವೆ ಎಂದು ಟ್ವೀಟ್ ಮಾಡಿದ್ದಾರೆ.

ಡಾ ಶಂಕರನ್ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಏರ್ ಇಂಡಿಯಾ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದೆ. “ಆತ್ಮೀಯ ಶಂಕರನ್, ನೀವು ನಿರ್ವಹಿಸಿದ ಪಾತ್ರಕ್ಕಾಗಿ ನಾವು ನಿಮ್ಮನ್ನು ಗೌರವಿಸುತ್ತೇವೆ! ಧನ್ಯವಾದ. ಜನರಿಗಾಗಿ ತಮ್ಮ ಸಹಾಯ ಹಸ್ತ ಚಾಚಲು ಯಾವತ್ತೂ ಹಿಂಜರಿಯದ ನಿಮ್ಮಂತಹ ವ್ಯಕ್ತಿತ್ವ ನಮ್ಮ ನಡುವೆ ಇರುವುದು ಯಾವಾಗಲೂ ಧನ್ಯವೆನಿಸುತ್ತದೆ. ನಮ್ಮ ಸಿಬ್ಬಂದಿ ಬದ್ಧತೆಯನ್ನು ಗಮನಿಸಿದ್ದಕ್ಕಾಗಿ ಧನ್ಯವಾದಗಳು ಮತ್ತು ನಿಮ್ಮ ಮೆಚ್ಚುಗೆಯನ್ನು ಖಂಡಿತವಾಗಿ ನಾವು ಅವರಿಗೆ ರವಾನಿಸುತ್ತೇವೆ ಎಂದು ಹೇಳಿ ಟ್ವೀಟ್ ಮಾಡಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT