ದೇಶ

ದೆಹಲಿಯಲ್ಲಿ 9.2 ಡಿಗ್ರಿ ಸೆಲ್ಸಿಯಸ್ ದಾಖಲು, ಇದು ಈ ಋತುವಿನ ಅತ್ಯಂತ ಕಡಿಮೆ ಕನಿಷ್ಠ ತಾಪಮಾನ

Lingaraj Badiger

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಕನಿಷ್ಠ ತಾಪಮಾನ 9.2 ಡಿಗ್ರಿ ಸೆಲ್ಸಿಯಸ್‌ ದಾಖಲಾಗಿದ್ದು, ಇದು ಋತುವಿನ ಅತ್ಯಂತ ಕಡಿಮೆ ಕನಿಷ್ಠ ತಾಪಮಾನವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭಾರತೀಯ ಹವಾಮಾನ ಇಲಾಖೆ(IMD) ಪ್ರಕಾರ, ದಿನವಿಡೀ ಆಕಾಶವು ಶುಭ್ರವಾಗಿರುತ್ತದೆ ಮತ್ತು ಗರಿಷ್ಠ ತಾಪಮಾನವು ಸುಮಾರು 26 ಡಿಗ್ರಿ ಸೆಲ್ಸಿಯಸ್ ಆಗುವ ಸಾಧ್ಯತೆಯಿದೆ.

ಬೆಳಗ್ಗೆ 9.30ಕ್ಕೆ ನಗರದ ವಾಯು ಗುಣಮಟ್ಟ 373 ಎಕ್ಯೂಐ ದಾಖಲಾಗಿದೆ.

ಗುರುವಾರ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ 38 ಮೇಲ್ವಿಚಾರಣಾ ಕೇಂದ್ರಗಳಲ್ಲಿ ಕನಿಷ್ಠ 15 ಕೇಂದ್ರಗಳಲ್ಲಿ ಎಕ್ಯೂಐ 'ತೀವ್ರ' ವಿಭಾಗದಲ್ಲಿ ದಾಖಲಾಗಿದ್ದರೆ, 22 ಮೇಲ್ವಿಚಾರಣಾ ಕೇಂದ್ರಗಳು 'ಅತ್ಯಂತ ಕಳಪೆ' ವಿಭಾಗದಲ್ಲಿ ಎಕ್ಯೂಐ ಅನ್ನು ದಾಖಲಿಸಿವೆ.

ಶೂನ್ಯದಿಂದ  50 ರವರೆಗಿನ AQI ಅನ್ನು "ಉತ್ತಮ" ಎಂದು, 51 ರಿಂದ 100 "ತೃಪ್ತಿದಾಯಕ", 101 ರಿಂದ 200 "ಮಧ್ಯಮ", 201 ರಿಂದ 300 "ಕಳಪೆ", 301 ರಿಂದ 400 "ಅತ್ಯಂತ ಕಳಪೆ" ಮತ್ತು 401 ರಿಂದ 500 "ತೀವ್ರ" ಎಂದು ಪರಿಗಣಿಸಲಾಗುತ್ತದೆ.

SCROLL FOR NEXT