ದೇಶ

ಕರ್ನಾಟಕದಲ್ಲಿ ಕ್ರೀಡಾ ಅಕಾಡೆಮಿ ನಿರ್ಮಿಸುವುದಾಗಿ 18 ಲಕ್ಷ ರೂ. ಪಡೆದು ವಂಚನೆ: ಶ್ರೀಶಾಂತ್ ವಿರುದ್ಧ ಕೇಸ್ ದಾಖಲು

Lingaraj Badiger

ಕಣ್ಣೂರು: ವ್ಯಕ್ತಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಕೇರಳ ಪೊಲೀಸರು ಕ್ರಿಕೆಟಿಗ ಎಸ್ ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ.

ಚೂಂಡಾ ಮೂಲದ ದೂರುದಾರರು, ಆರೋಪಿಗಳಾದ ರಾಜೀವ್ ಕುಮಾರ್ ಮತ್ತು ವೆಂಕಟೇಶ್ ಕಿಣಿ ಅವರು ಕರ್ನಾಟಕದ ಕೊಲ್ಲೂರಿನಲ್ಲಿ ಕ್ರೀಡಾ ಅಕಾಡೆಮಿ ನಿರ್ಮಿಸುವುದಾಗಿ ಹೇಳಿ 2019 ರ ಏಪ್ರಿಲ್ 25 ರಿಂದ ವಿವಿಧ ದಿನಾಂಕಗಳಲ್ಲಿ 18.70 ಲಕ್ಷ ರೂ.ಗಳನ್ನು ತೆಗೆದುಕೊಂಡು ವಂಚಿಸಿದ್ದಾರೆ. ಇದರಲ್ಲಿ ಶ್ರೀಶಾಂತ್ ಸಹ ಪಾಲುದಾರ ಎಂದು ಆರೋಪಿಸಿದ್ದಾರೆ.

ಅಕಾಡೆಮಿಯಲ್ಲಿ ತಮ್ಮನ್ನು ಪಾಲುದಾರರಾಗಿ ಮಾಡುವುದಾಗಿ ಭರವಸೆ ನೀಡಿದ ನಂತರ ತಾನು ಹಣ ಹೂಡಿಕೆ ಮಾಡಿರುವುದಾಗಿ ಸರೀಶ್ ಗೋಪಾಲನ್ ಅವರು ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ಶ್ರೀಶಾಂತ್ ಮತ್ತು ಇತರ ಇಬ್ಬರ ವಿರುದ್ಧ ಐಪಿಸಿ ಸೆಕ್ಷನ್ 420(ವಂಚನೆ ಮತ್ತು ಅಪ್ರಾಮಾಣಿಕವಾಗಿ ಆಸ್ತಿ ವಿತರಣೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಪ್ರಕರಣದಲ್ಲಿ ಶ್ರೀಶಾಂತ್ ಅವರನ್ನು ಮೂರನೇ ಆರೋಪಿ ಎಂದು ಹೆಸರಿಸಲಾಗಿದೆ.

SCROLL FOR NEXT