ಕಾರ್ಮಿಕ 
ದೇಶ

ಉತ್ತರಕಾಶಿಯ ಸಿಲ್ಕ್ಯಾರಾ ಸುರಂಗ ಕಾರ್ಯಾಚರಣೆ: ಸುರಕ್ಷಿತವಾಗಿ ಹೊರಬಂದ ಕಾರ್ಮಿಕರೊಂದಿಗೆ ಪ್ರಧಾನಿ ಮೋದಿ ಸಂಭಾಷಣೆ

ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿದು ಒಳಗೆ ಸಿಕ್ಕಿಹಾಕಿಕೊಂಡಿದ್ದ 41 ಮಂದಿ ಕಾರ್ಮಿಕರನ್ನು ಘಟನೆ ನಡೆದ 17 ದಿನಗಳ ನಂತರ ನಿನ್ನೆ ರಾತ್ರಿ ಸುರಕ್ಷಿತವಾಗಿ ಹೊರತರಲಾಗಿದ್ದು ಅವರೊಂದಿಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

ನವದೆಹಲಿ: ಉತ್ತರಾಖಂಡದ ಉತ್ತರಕಾಶಿಯಲ್ಲಿ ನಿರ್ಮಾಣ ಹಂತದ ಸಿಲ್ಕ್ಯಾರಾ ಸುರಂಗ ಕುಸಿದು ಒಳಗೆ ಸಿಕ್ಕಿಹಾಕಿಕೊಂಡಿದ್ದ 41 ಮಂದಿ ಕಾರ್ಮಿಕರನ್ನು ಘಟನೆ ನಡೆದ 17 ದಿನಗಳ ನಂತರ ನಿನ್ನೆ ರಾತ್ರಿ ಸುರಕ್ಷಿತವಾಗಿ ಹೊರತರಲಾಗಿದ್ದು ಅವರೊಂದಿಗೆ ಸ್ವತಃ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ದೂರವಾಣಿ ಮೂಲಕ ಸಂಭಾಷಣೆ ನಡೆಸಿದ್ದಾರೆ.

ಸುರಂಗದಿಂದ ರಕ್ಷಿಸಲ್ಪಟ್ಟ ಕಾರ್ಮಿಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ದೂರವಾಣಿಯಲ್ಲಿ ಮಾತನಾಡಿ ಅವರ ಆರೋಗ್ಯ ವಿಚಾರಿಸಿದರು. ಕಾರ್ಮಿಕರನ್ನು ಯಶಸ್ವಿಯಾಗಿ ಮತ್ತು ಸುರಕ್ಷಿತವಾಗಿ ಹೊರಗೆ ಕರೆದೊಯ್ಯಲು ಅವಿರತ ಶ್ರಮಿಸಿದ ರಕ್ಷಣಾ ತಂಡದ ಮತ್ತು ತಾಂತ್ರಿಕ ವರ್ಗದವರ ಪ್ರಯತ್ನಗಳಿಗೆ ಶ್ಲಾಘಿಸಿದರು.

ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾಗಿರುವ ಸುರಂಗದ ನಿರ್ಮಾಣ ನವೆಂಬರ್ 12 ರಂದು ಕುಸಿದಿತ್ತು. ಕಾರ್ಮಿಕರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಕೇಂದ್ರ ಮತ್ತು ಉತ್ತರಾಖಂಡ ರಾಜ್ಯ ರಕ್ಷಣಾ ತಂಡಗಳ ಬೃಹತ್ ಕಾರ್ಯಾಚರಣೆಯ ನಂತರ ಕಾರ್ಮಿಕರು 17 ದಿನಗಳ ನಂತರ ಕೊನೆಗೂ 'ಸುರಂಗದ ಕೊನೆಯಲ್ಲಿ ಬೆಳಕು' ಕಂಡರು.

ಹೈಟೆಕ್ ಡ್ರಿಲ್ಲಿಂಗ್ ಯಂತ್ರಗಳು ಕೊನೆಯ ಕೆಲವು ಮೀಟರ್‌ಗಳನ್ನು ತೆರವುಗೊಳಿಸಲು ವಿಫಲವಾದ ನಂತರ ರೋಲ್-ಹೋಲ್ ಗಣಿಗಾರಿಕೆಯಲ್ಲಿ ಪರಿಣಿತರನ್ನು ಒಳಪಡಿಸಿದ ನಂತರ ಯಶಸ್ಸು ಕಂಡಿತು. ಇಲಿ ಗಣಿಗಾರರು ಉತ್ತರಾಖಂಡದಲ್ಲಿ ತಮ್ಮ ಕಾರ್ಯದಲ್ಲಿ ಯಶಸ್ಸು ಕಂಡರು, ಕೊನೆಯ 12 ಮೀಟರ್ ವಿಸ್ತಾರವನ್ನು ಅಗೆಯಲು 24 ಗಂಟೆಗಿಂತಲೂ ಕಡಿಮೆ ಸಮಯ ತೆಗೆದುಕೊಂಡರು. 

ಕಾರ್ಮಿಕರನ್ನು ಹೊರತೆಗೆಯುವ ಕಾರ್ಯಾಚರಣೆ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಪ್ರಾರಂಭವಾಗಿ ನಂತರ ಸರಿಸುಮಾರು ಒಂದು ಗಂಟೆಯಲ್ಲಿ ಎಲ್ಲಾ ಕಾರ್ಮಿಕರನ್ನು ಸ್ಟ್ರೆಚರ್‌ಗಳಲ್ಲಿ ಹೊರಗೆ ಕರೆತರಲಾಯಿತು. ಕೆಲಸಗಾರರನ್ನು ವಿಶೇಷವಾಗಿ ಮಾರ್ಪಡಿಸಿದ ಸ್ಟ್ರೆಚರ್‌ಗಳಲ್ಲಿ ಹೊರಗೆ ತರಲಾಯಿತು; ಕಾರ್ಮಿಕರನ್ನು ಹೊರಗೆ ತರಲು ಎರಡು-ಮೀಟರ್-ಅಗಲದ ಪೈಪ್ ನ್ನು ಕೈಯಾರೆ ಕೆಳಗೆ ಇಳಿಸಲಾಗಿತ್ತು. ಅದನ್ನು ಬೆಟ್ಟದ ಮೇಲೆ ಕೊರೆಯಲಾದ ರಂಧ್ರಗಳಿಗೆ ಸೇರಿಸಲಾಯಿತು. ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಈ ಕಾರ್ಯಾಚರಣೆ ವೇಳೆ ಸ್ಥಳದಲ್ಲಿದ್ದರು, ಕಾರ್ಮಿಕರು ಹೊರಗೆ ಬರುತ್ತಿದ್ದಂತೆ ಅವರನ್ನು ತಬ್ಬಿಕೊಂಡು ಅಭಿನಂದನೆ ಸಲ್ಲಿಸಿದರು. 

ಸ್ಥಳದಲ್ಲಿ ಹಬ್ಬದ ವಾತಾವರಣ: ಕಾರ್ಮಿಕರು ಸುರಂಗದಿಂದ ಹೊರಬಂದ ತಕ್ಷಣ, ರಕ್ಷಣಾ ಸಿಬ್ಬಂದಿ ಮತ್ತು ಸ್ಥಳದಲ್ಲಿದ್ದವರು ಹೂಮಾಲೆ, ಸಿಹಿತಿಂಡಿಗಳು ಮತ್ತು ಹರ್ಷೋದ್ಗಾರಗಳೊಂದಿಗೆ ಅವರನ್ನು ಸ್ವಾಗತಿಸಿದರು. ಸಿಕ್ಕಿಬಿದ್ದ ಕಾರ್ಮಿಕರ ಕುಟುಂಬಗಳು 17 ದಿನಗಳಲ್ಲಿ ಮೊದಲ ಬಾರಿಗೆ ತಮ್ಮ ಪ್ರೀತಿಪಾತ್ರರನ್ನು ಭೇಟಿ ಮಾಡಿ ಸಂತಸಪಟ್ಟರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT