ಮೋನಾ 
ದೇಶ

ದೆಹಲಿ: ಮಹಿಳಾ ಪೇದೆಯನ್ನು ಕೊಲೆಗೈದಿದ್ದ ಹೆಡ್ ಕಾನ್ಸ್‌ಟೇಬಲ್‌; 2 ವರ್ಷಗಳ ನಂತರ ಅಸ್ಥಿಪಂಜರ ಪತ್ತೆ, ಬಂಧನ!

ಎರಡು ವರ್ಷಗಳ ಹಿಂದೆ 28 ವರ್ಷದ ಮಹಿಳಾ ಪೇದೆಯನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸ್‌ ಹೆಡ್ ಕಾನ್‌ಸ್ಟೆಬಲ್  42 ವರ್ಷದ ವ್ಯಕ್ತಿ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ನವದೆಹಲಿ: ಎರಡು ವರ್ಷಗಳ ಹಿಂದೆ 28 ವರ್ಷದ ಮಹಿಳಾ ಪೇದೆಯನ್ನು ಕೊಲೆ ಮಾಡಿ ನಂತರ ಆಕೆಯ ಶವವನ್ನು ವಿಲೇವಾರಿ ಮಾಡಿದ ಆರೋಪದಲ್ಲಿ ದೆಹಲಿ ಪೊಲೀಸ್‌ ಹೆಡ್ ಕಾನ್‌ಸ್ಟೆಬಲ್  42 ವರ್ಷದ ವ್ಯಕ್ತಿ ಹಾಗೂ ಆತನ ಇಬ್ಬರು ಸಹಚರರನ್ನು ಬಂಧಿಸಲಾಗಿದೆ.

ಸ್ಥಳೀಯ ಪೊಲೀಸರಿಂದ ಪ್ರಕರಣವನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗಕ್ಕೆ ವರ್ಗಾಯಿಸಿದ ನಂತರ ಪ್ರಮುಖ ಆರೋಪಿ ಸುರೇಂದ್ರ ಸಿಂಗ್, ರವೀನ್ ಮತ್ತು ರಾಜ್‌ಪಾಲ್ ರನ್ನು ಬಂಧಿಸಲಾಗಿದೆ. 

2021ರ ಅಕ್ಟೋಬರ್ 20ರಂದು ಮಹಿಳೆಯೊಬ್ಬರು ಕಾಣೆಯಾದ ವರದಿ ದಾಖಲಾಗಿತ್ತು. ತಿಂಗಳಾದರೂ ಆಕೆ ಪತ್ತೆಯಾಗಲಿಲ್ಲ. ಹೀಗಾಗಿ ಆಕೆಯನ್ನು ಹುಡುಕಲು ಪ್ರಾರಂಭಿಸಿದ್ದರು ಎಂದು ವಿಶೇಷ ಪೊಲೀಸ್ ಆಯುಕ್ತ ರವೀಂದ್ರ ಸಿಂಗ್ ಯಾದವ್ ತಿಳಿಸಿದ್ದಾರೆ.

ಆರೋಪಿ ಸುರೇಂದ್ರ ನೀಡಿದ ಮಾಹಿತಿ ಮೇರೆಗೆ ಪೊಲೀಸರು ಮಾಜಿ ಮಹಿಳಾ ಕಾನ್‌ಸ್ಟೆಬಲ್‌ನ ಅಸ್ಥಿಪಂಜರವನ್ನು ಬುರಾರಿ ಪ್ರದೇಶದ ಚರಂಡಿಯಿಂದ ವಶಪಡಿಸಿಕೊಂಡಿದ್ದಾರೆ. ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಶವವನ್ನು ಚರಂಡಿಯಲ್ಲಿ ಕಲ್ಲುಗಳ ಕೆಳಗೆ ಬಚ್ಚಿಟ್ಟಿದ್ದರು. ಪೊಲೀಸರು ಅಸ್ಥಿಪಂಜರವನ್ನು ತಮ್ಮ ವಶಕ್ಕೆ ಪಡೆದು ವಿಧಿವಿಜ್ಞಾನ ವಿಭಾಗಕ್ಕೆ ಕಳುಹಿಸಿದ್ದಾರೆ. ಇದೀಗ ಪೊಲೀಸರು ಮಾಜಿ ಕಾನ್‌ಸ್ಟೆಬಲ್‌ನ ಗುರುತು ದೃಢಪಡಿಸಲು ಆಕೆಯ ತಾಯಿಯ ಡಿಎನ್‌ಎ ಮಾದರಿಯನ್ನು ತೆಗೆದುಕೊಂಡು ಡಿಎನ್‌ಎ ಮಾದರಿಯನ್ನು ಹೊಂದಿಸಲು ಸಿದ್ಧತೆ ನಡೆಸಿದ್ದಾರೆ.

ಬುಲಂದ್‌ಶಹರ್‌ನ ಕೋಟಾ ಗ್ರಾಮದ ನಿವಾಸಿ ಮೋನಾ. ಇಲ್ಲಿ ಪಿಜಿಯಲ್ಲಿ ಉಳಿದುಕೊಂಡು ಯುಪಿಎಸ್‌ಸಿಗೆ ತಯಾರಿ ನಡೆಸುತ್ತಿದ್ದರು. ಮೋನಾ 2011ರ ಸೆಪ್ಟೆಂಬರ್ 8ರಿಂದ ಪಿಜಿಯಿಂದ ಕಾಣೆಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಮೋನಾ 2014ರಲ್ಲಿ ದೆಹಲಿ ಪೊಲೀಸ್ ಪೇದೆಯಾಗಿ ಸೇರಿದ್ದರು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. 

ಮೋನಾ 2014ರಲ್ಲಿ ದೆಹಲಿ ಪೊಲೀಸ್‌ಗೆ ಸೇರಿದ್ದರು. ಅವರನ್ನು ಪಿಸಿಆರ್‌ನಲ್ಲಿ ಪೋಸ್ಟ್ ಮಾಡಲಾಗಿತ್ತು. ಸುರೇಂದ್ರ ಕೂಡ ಆಗ ಪಿಸಿಆರ್‌ನಲ್ಲಿ ಕಾನ್‌ಸ್ಟೆಬಲ್ ಆಗಿದ್ದರು. ಸುರೇಂದ್ರ ಕೂಡ ಬುಲಂದ್ ಶಹರ್ ನಲ್ಲಿರುವ ಮೋನಾ ಮನೆಗೆ ಬರತೊಡಗಿದ. ಕುಟುಂಬದ ಕಾರ್ಯಕ್ರಮಗಳಲ್ಲೂ ಭಾಗವಹಿಸುತ್ತಿದ್ದನು. ಸುರೇಂದ್ರ ಮದುವೆಯಾಗಿದ್ದು ಆತನಿಗೆ ಒಂದು ಮಗುವಿತ್ತು. ಅವನ ಕುಟುಂಬ ಅಲಿಪುರದಲ್ಲಿ ವಾಸಿಸುತ್ತಿತ್ತು. 

ಸುರೇಂದ್ರ ತನ್ನನ್ನು ಮದುವೆಯಾಗುವಂತೆ ಮೋನಾಗೆ ಒತ್ತಡ ಹೇರಲು ಪ್ರಾರಂಭಿಸಿದನು. ಆದರೆ ಮೋನಾ ಅದಕ್ಕೆ ಆಗಲ್ಲ ಎಂದಿದ್ದಳು. ಮೋನಾ ತನ್ನ ಮನೆಯವರಿಗೆ ಈ ವಿಚಾರವನ್ನು ಬಹಿರಂಗಪಡಿಸಬಹುದು ಎಂದು ಸುರೇಂದ್ರ ಆತಂಕಗೊಂಡಿದ್ದು, ಹೀಗಾಗಿ ಆಕೆಯನ್ನು ಕೊಲೆ ಮಾಡಲು ಯೋಜನೆ ರೂಪಿಸಿದ್ದನು. ಕೊಲೆ ಮಾಡಿದ ಬಳಿಕ ಮೋನಾಳ ಕುಟುಂಬ ಜೊತೆ ಹುಡುಕುವ ನಾಟಕವಾಡಿದ್ದನು. ಅವರು ನಿಯಮಿತವಾಗಿ ಮುಖರ್ಜಿ ನಗರ ಪೊಲೀಸ್ ಠಾಣೆಗೆ ಬಂದು ಮೋನಾ ಅವರನ್ನು ಹುಡುಕುವಂತೆ ಪೊಲೀಸರ ಮೇಲೆ ಒತ್ತಡ ಹೇರಿದ್ದನು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಬ್ಯಾಂಕ್‌ಗೆ ನಕಲಿ ಗ್ಯಾರಂಟಿ: ರಿಲಯನ್ಸ್‌ ಪವರ್‌ನ ಮುಖ್ಯ ಹಣಕಾಸು ಅಧಿಕಾರಿ ಅಶೋಕ್ ಪಾಲ್ ಬಂಧನ

ಸಮಸ್ತ ಜನರಿಗೆ ಸುಗಮ ಆಡಳಿತ, ಶುದ್ಧ ನೀರಿನ ಪೂರೈಕೆ: ಸ್ವಚ್ಚತೆ- ಸಂಚಾರ ವ್ಯವಸ್ಥೆಗೆ ಸಿಎಂ ಸಿದ್ದರಾಮಯ್ಯ ಕಟ್ಟಪ್ಪಣೆ

ಸಿದ್ದರಾಮಯ್ಯ ಮೇಲೆ ತೂಗುಗತ್ತಿ: ಅಧಿಕಾರದಲ್ಲಿ ಉಳಿಯಲು ಸಂಪುಟ ಪುನಾರಚನೆ ಕಸರತ್ತು; ಬಿಹಾರ-ಕೇರಳ ಚುನಾವಣೆಯತ್ತ ಡಿಕೆಶಿ ಚಿತ್ತ!

ವೀರೇಂದ್ರ ಪಪ್ಪಿ ಕರ್ಮಕಾಂಡ ನೋಡುತ್ತಿದ್ದರೆ CM- DCM ಇನ್ಯಾವ ಪರಿ ಲೂಟಿ ಮಾಡಿ ಹೈಕಮಾಂಡ್ ಗೆ ಕಪ್ಪ ನೀಡುತ್ತಿರಬೇಡಾ?

ಈ ಬಾರಿ ನಾನು ಸಚಿವನಾಗುವ ಭರವಸೆ ಇದೆ: ಸಂಪುಟ ವಿಸ್ತರಣೆಯೇ ನವೆಂಬರ್ ಕ್ರಾಂತಿಯಿರಬಹುದು; ಸಲೀಂ ಅಹ್ಮದ್

SCROLL FOR NEXT