ನಟಿ ಖುಷ್ಬೂಗೆ ನಾರಿ ಪೂಜೆ 
ದೇಶ

ಕೇರಳ: ತ್ರಿಶೂರ್​ನ ವಿಷ್ಣುಮಾಯ ದೇವಾಲಯದಲ್ಲಿ ನಟಿ ಖುಷ್ಬೂ ಪಾದ ತೊಳೆದು ನಾರಿ ಪೂಜೆ !

ಬಹುಭಾಷಾ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ  ಸದಸ್ಯೆ ಖುಷ್ಬೂ ಸುಂದರ್ ಅವರಿಗೆ ಕೇರಳದ ದೇಗುಲದಲ್ಲಿ ನಾರಿ ಪೂಜೆ ನೆರವೇರಿಸಲಾಗಿದೆ.

ಕೇರಳ: ಬಹುಭಾಷಾ ನಟಿ ಹಾಗೂ ರಾಷ್ಟ್ರೀಯ ಮಹಿಳಾ ಆಯೋಗದ  ಸದಸ್ಯೆ ಖುಷ್ಬೂ ಸುಂದರ್ ಅವರಿಗೆ ಕೇರಳದ ದೇಗುಲದಲ್ಲಿ ನಾರಿ ಪೂಜೆ ನೆರವೇರಿಸಲಾಗಿದೆ.

ಕೇರಳದ ತ್ರಿಶೂರ್‌ನ ವಿಷ್ಣುಮಾಯಾ ದೇವಸ್ಥಾನದಲ್ಲಿ ಖುಷ್ಬೂ ಅವರಿಗೆ ಸುಹಾಸಿನಿ ಪೂಜಾ ಎಂದು ಕರೆಯಲಾಗುವ ನಾರಿ ಪೂಜೆಯನ್ನು ಇತ್ತೀಚೆಗೆ ನೆರವೇರಿಸಿರುವುದು ಗಮನ ಸೆಳೆದಿದೆ.

ಈ ದೇವಸ್ಥಾನದ ಆಚರಣೆಗಳ ಪ್ರಕಾರ ಪ್ರತಿ ವರ್ಷ ಒಬ್ಬ ಮಹಿಳೆಯನ್ನು ಆಮಂತ್ರಿಸಿ ಶಾಸ್ತ್ರೋಕ್ತವಾಗಿ ಪಾದಪೂಜೆ ಮಾಡಿ ವಿಧಿವಿಧಾನ ನೆರವೇರಿಸಲಾಗುತ್ತದೆ. ಪೂಜಾರಿಗಳು ಮಹಿಳೆಯನ್ನು ದೇವತೆಗೆ ಹೋಲಿಸಿ ಪೂಜೆ ಮಾಡುವುದು ಇಲ್ಲಿ ವಿಶೇಷ. ಈ ವೇಳೆ ಪೂಜಾರಿಗಳು ಖುಷ್ಬೂ ಅವರ ಪಾದಪೂಜೆ ಮಾಡಿ, ಮಾಲೆ ಹಾಕಿ ರೇಷ್ಮೆ ವಸ್ತ್ರಗಳನ್ನು ಅರ್ಪಿಸಿದ್ದಾರೆ.

ಈ ವಿಷಯವನ್ನು ಖುಷ್ಬೂ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ‘ವಿಷ್ಣುಮಾಯಾ ದೇವಸ್ಥಾನದವರು ನಾರಿಪೂಜೆಗೆ ನನ್ನನ್ನು ಆಮಂತ್ರಿಸಿದ್ದು ನಿಜಕ್ಕೂ ನನ್ನ ಅದೃಷ್ಠ. ಇದಕ್ಕಾಗಿ ನಾನು ವಿನೀತಳಾಗಿದ್ದೇನೆ. ಇಂತಹ ಗೌರವವನ್ನು ನೀಡಿದ್ದಕ್ಕೆ ದೇವಸ್ಥಾನಕ್ಕೆ ನಾನು ನಮಿಸುವೆ. ಕೆಟ್ಟದನ್ನು ಅಳಿಸಿ ಒಳ್ಳೆಯದನ್ನು ಪಸರಿಸಲು ಹಾಗೂ ಶಾಂತಿ ನೆಲೆಸಲು ನಾನು ನಿರಂತರವಾಗಿ ಶ್ರಮಿಸುವೆ. ನಾರಿಪೂಜೆಯಿಂದ ಮನುಕುಲಕ್ಕೆ ಒಳ್ಳೆಯದಾಗಲಿ’ ಎಂದು ಬರೆದುಕೊಂಡಿದ್ದಾರೆ.

ಸ್ವರ್ಗದಿಂದಲೇ ದೇವತೆ ಬಂದು ಪಾದಪೂಜೆ ಮಾಡಿಸಿಕೊಳ್ಳುತ್ತಾಳೆ ಎಂದು ನಾರಿ ಪೂಜೆ ಬಗೆಗೆ ದೇವಸ್ಥಾನದ ಪೂಜಾರಿಗಳ ನಂಬುಗೆಯಾಗಿದೆ. 1970 ರಲ್ಲಿ ಮುಂಬೈ ಮೂಲದ ಕುಟುಂಬದಲ್ಲಿ ಜನಿಸಿದ್ದ ಖುಷ್ಬೂ ಅವರ ಬಾಲ್ಯದ ಹೆಸರು ನಖತ್ ಖಾನ್. ನಟಿಯಾಗಿ, ನಿರ್ಮಾಪಕಿ, ರಾಜಕಾರಣಿಯಾಗಿ ಹೆಸರು ಮಾಡಿರುವ ಅವರು ಬಿಜೆಪಿ ಸೇರಿ ಕಳೆದ ಫೆಬ್ರುವರಿಯಲ್ಲಿ ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಬಹುಭಾಷಾ ನಟಿ ಖುಷ್ಬು ಕನ್ನಡ, ತೆಲುಗು, ತಮಿಳು ಸೇರಿದಂತೆ ಹಲವಾರು ಬಾಷೆಗಳಲ್ಲಿ ನಟಿಸಿದ್ದಾರೆ. ಈ ಎಲ್ಲಾ ಭಾಷೆಗಳಲ್ಲೂ ಸೂಪರ್‌ ಸ್ಟಾರ್‌  ಹೀರೋಗಳ ಜೊತಗೆ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.  ನಟಿ ಖುಷ್ಬು ಅವರ ಸಿನಿಜರ್ನಿಯಲ್ಲಿ ಸೂಪರ್‌ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಕ್ರೇಜಿಸ್ಟಾರ್‌ ರವಿಚಂದ್ರನ್‌ ಅವರ ಜೊತೆಗೆ ನಟಿಸಿದ ಚಿತ್ರಗಳಂತೂ ಸಖತ್‌ ಹಿಟ್‌ ಆಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT