ದೇಶ

ಇಸ್ರೇಲ್ ಮೇಲೆ ದಾಳಿ ಹಮಾಸ್ ಭಯೋತ್ಪಾದಕ ಕೃತ್ಯ, ಆದರೆ ಪ್ಯಾಲೆಸ್ತೇನ್ ಸಾರ್ವಭೌಮತ್ವ ನಿಲುವು ದೃಢ-ಭಾರತ

Srinivas Rao BV

ನವದೆಹಲಿ: ಇಸ್ರೇಲ್ ಮೇಲಿನ ಹಮಾಸ್ ದಾಳಿಯನ್ನು ಭಯೋತ್ಪಾದಕ ಕೃತ್ಯ ಎಂದು ಭಾರತ ಹೇಳಿದೆ. ಆದರೆ ಪ್ಯಾಲೆಸ್ತೇನ್ ಸಾರ್ವಭೌಮತ್ವದ ವಿಷಯವಾಗಿ ತನ್ನ ದೀರ್ಘಾವಧಿಯ ನಿಲುವನ್ನು ಮತ್ತೊಮ್ಮೆ ದೃಢವಾಗಿ ಹೇಳಿದೆ.
 
ಇಸ್ರೇಲ್ ಗೆ ಗಡಿ ಹಂಚಿಕೊಳ್ಳುವ ರೀತಿಯಲ್ಲಿ ಸ್ವಾಯತ್ತ, ಸಾರ್ವಭೌಮತ್ವವನ್ನು ಹೊಂದಿರುವ ಪ್ಯಾಲೆಸ್ತೇನ್ ರಾಷ್ಟ್ರ ಸ್ಥಾಪನೆಯ ವಿಷಯವಾಗಿ ಮಾತುಕತೆಗೆ ಭಾರತ ಪ್ರತಿಪಾದಿಸಿದೆ.

ಇಸ್ರೇಲ್-ಹಮಾಸ್ ಸಂಘರ್ಷದ ಕುರಿತು ಮೊದಲ ವಿವರವಾಗಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿರುವ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ, ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಪಾಲಿಸುವ ಸಾರ್ವತ್ರಿಕ ಬಾಧ್ಯತೆ ಮತ್ತು ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳಲ್ಲಿನ ಭಯೋತ್ಪಾದನೆಯ ಬೆದರಿಕೆಯ ವಿರುದ್ಧ ಹೋರಾಡುವುದು ಜಾಗತಿಕ ಜವಾಬ್ದಾರಿಯಾಗಿದೆ ಎಂದು ಹೇಳಿದರು.

ಇಸ್ರೇಲ್ ಪ್ರತಿದಾಳಿಯ ಹಿನ್ನೆಲೆಯಲ್ಲಿ ಗಾಝಾದಲ್ಲಿನ ಪ್ಯಾಲೆಸ್ತೇನಿಯನ್ನರ ಪರಿಸ್ಥಿತಿಯ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಬಾಗ್ಚಿ ಪ್ರತಿಕ್ರಿಯೆ ನೀಡುತ್ತಿದ್ದರು. ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಹಿಂದಿರುಗಲು ಬಯಸುವ ಭಾರತೀಯರನ್ನು ಇಸ್ರೇಲ್‌ನಿಂದ ಮರಳಿ ಕರೆತರುವುದರತ್ತ ಭಾರತ ಗಮನ ಕೇಂದ್ರೀಕರಿಸಿದೆ ಎಂದು ವಕ್ತಾರರು ಹೇಳಿದರು.

SCROLL FOR NEXT