ದೇಶ

ಪಕ್ಷ ಅವಕಾಶ ನೀಡಿದರೆ ಹರಿಯಾಣದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ: ಬ್ರಿಜ್ ಭೂಷಣ್ ಶರಣ್ ಸಿಂಗ್

Ramyashree GN

ಗೊಂಡಾ(ಉತ್ತರ ಪ್ರದೇಶ): ಬಿಜೆಪಿ ಸಂಸದ ಮತ್ತು ಮಾಜಿ ಡಬ್ಲ್ಯುಎಫ್‌ಐ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರು, ತಮ್ಮ ಪಕ್ಷವು ಅನುಮತಿ ನೀಡಿದರೆ ಹರಿಯಾಣದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಲು ಸಿದ್ಧ ಎಂದು ಶುಕ್ರವಾರ ಹೇಳಿದ್ದಾರೆ.

ಬಿಜೆಪಿ ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, 'ನನಗೆ ಹರಿಯಾಣದಿಂದ ವಿಶೇಷವಾಗಿ ಜಾಟ್ ಸಮುದಾಯದಿಂದ ಹೆಚ್ಚಿನ ಬೆಂಬಲ ಸಿಗುತ್ತಿದೆ' ಎಂದು ಹೇಳಿದರು.

‘ಜನರು ನನ್ನನ್ನು ಭೇಟಿಯಾಗಿ, ‘ನೀವು ಬಂದು ಹರಿಯಾಣದಿಂದ ಚುನಾವಣೆಗೆ ಸ್ಪರ್ಧಿಸಿದರೆ, ನಿಮ್ಮನ್ನು ಗೆಲ್ಲಿಸುತ್ತೇವೆ’ ಎಂದು ಹೇಳುತ್ತಿದ್ದಾರೆ. ಪಕ್ಷ ನನಗೆ ಅವಕಾಶ ನೀಡಿದರೆ, ನಾನು ಖಂಡಿತವಾಗಿಯೂ ಅಲ್ಲಿಂದ ಚುನಾವಣೆಗೆ ಸ್ಪರ್ಧಿಸುತ್ತೇನೆ' ಎಂದು ಭಾರತ ಕುಸ್ತಿ ಫೆಡರೇಶನ್ (ಡಬ್ಲ್ಯುಎಫ್‌ಐ) ಮಾಜಿ ಮುಖ್ಯಸ್ಥರು ಹೇಳಿದರು.

ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ದೇಶದ ಕೆಲವು ಪ್ರಮುಖ ಕುಸ್ತಿಪಟುಗಳು ಲೈಂಗಿಕ ಕಿರುಕುಳದ ಆರೋಪ ಮಾಡಿದ್ದಾರೆ. ಕುಸ್ತಿಪಟುಗಳ ಪೈಕಿ ಹಲವರು ಹರಿಯಾಣದಿಂದ ಬಂದವರು. ಈ ವರ್ಷದ ಆರಂಭದಲ್ಲಿ ದೆಹಲಿಯಲ್ಲಿ ಸಿಂಗ್ ವಿರುದ್ಧ ತಿಂಗಳುಗಳ ಕಾಲ ಪ್ರತಿಭಟನೆ ನಡೆಸಿದ್ದರು.

SCROLL FOR NEXT